For Quick Alerts
  ALLOW NOTIFICATIONS  
  For Daily Alerts

  ನಾಯಕ ನಟನ ಕಿರಿಕ್ : ನಟಿ ಮೇಲೆ ಹಲ್ಲೆ ನಡೆಸಿದ ನಟ

  By ಉಡುಪಿ ಪ್ರತಿನಿಧಿ
  |

  ತುಳು ಚಿತ್ರ ಒಂದರ ಚಿತ್ರೀಕರಣದ ಸಂದರ್ಭದಲ್ಲಿ ನಟಿಗೆ ಅದೇ ಚಿತ್ರದ ನಾಯಕ ನಟ ಹಲ್ಲೆ ನಡೆಸಿ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಉಡುಪಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬ್ರಹ್ಮಾವರ ಸೂರಾಲು ಸಮೀಪ ಈ ಘಟನೆ ನಡೆದಿದೆ. ಸೂರಾಲು ಸಮೀಪ ತುಳು ಚಿತ್ರ "ಏರೆಗಾವು ಕಿರಿ ಕಿರಿ" ಚಿತ್ರೀಕರಣದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

  ಶೂಟಿಂಗ್ ಸಮಯದಲ್ಲಿ ಚಿತ್ರದಲ್ಲಿ ನಟಿಸುತ್ತಿರುವ ಮುಂಬೈ ಮೂಲದ ನಟಿ ಐಶ್ವರ್ಯ ಜೊತೆ ನಟ ನೈಮ್ ಕ್ಷುಲ್ಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ಸಂದರ್ಭದಲ್ಲಿ ನಟ ನೈಮ್ ನಟಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ ಎಂದು ಹೇಳಲಾಗಿದೆ.

  ಮುಂಬೈ ಮೂಲದ ರೋಶನ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ರಾಮ್ ಶೆಟ್ಟಿ ‌ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನೈಮ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಮೊದಲ ದಿನದಿಂದಲೂ ನೈಮ್ ಮತ್ತು ಐಶ್ವರ್ಯ ನಡುವೆ ಕಿರಿಕ್ ನಡಿಯುತ್ತಾ ಇತ್ತು ಎಂದು ಹೇಳಲಾಗಿದೆ. ಆದರೆ ನಟ ನಿನ್ನೆ ಸಂಜೆ ನಟಿಯನ್ನು ಎಳೆದಾಡಿ ಕೈ ಮುರಿದಿದ್ದಾನೆ ಎಂದು ಆರೋಪಿಸಲಾಗಿದೆ .

  ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಟಿ ಐಶ್ವರ್ಯ ಅವರನ್ನು ಬ್ರಹ್ಮಾವರ ಸಮೀಪದ ಅಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇದೇ ಚಿತ್ರದಲ್ಲಿ ತುಳು ಚಿತ್ರ ರಂಗದ ಖ್ಯಾತ ನಟ ನವೀನ್ ಪಡೀಲ್ ನಟಿಸುತ್ತಿದ್ದು, ಪಡೀಲ್ ಮಧ್ಯಸ್ಥಿಕೆಯಲ್ಲಿ ರಾಜಿ ಪಂಚಾಯಿತಿ ನಡೆದಿದೆ.

  ಮೂಲದ ಪ್ರಕಾರ, ನಟಿಯು ನಟನಿಗೆ ಅವ್ಯಾಚ ಶಬ್ದಗಳಿಂದ ಬೈದದ್ದೇ ಈ ಘಟನೆಗೆ ಕಾರಣ ಎದು ಹೇಳಲಾಗುತ್ತಿದೆ. ಹಲ್ಲೆ ಘಟನೆ ನಂತರ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟಿ ಭಯಗೊಂಡು ತನ್ನ ಅಣ್ಣನಿಗೆ ಕರೆ ಮಾಡಿದ್ದಾಳೆ. ನಟಿ ಐಶ್ವರ್ಯಾ ಅವರ ಅಣ್ಣ ಮತ್ತು ಗೆಳೆಯರು ಚಿತ್ರೀಕರಣದ ಸೆಟ್ ಬರುವ ವಿಷಯ ಕೇಳಿದಾಗ, ನಟ ಮತ್ತೆ ಗೂಂಡಾಗಿರಿ ಮಾಡಿದ್ದು ವಿಚಾರಿಸಲು ಬಂದವರ ಮುಂದೆಯೇ ಮತ್ತೆ ನಟಿಯ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

  ಈ ಘಟನೆಗೆ ನಟಿಯ ಸಂಬಂಧಿಸಿದಂತೆ ಸಿನಿಮಾ ಮುಗಿದ ಕೂಡಲೇ ನಟ ನೈಮ್ ವಿರುದ್ಧ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ .ಆದರೆ ಈ ವರೆಗೂ ಪ್ರಕರಣ ದಾಖಲಿಸಲಾಗಿಲ್ಲ.

  English summary
  Tulu film actress Aishwarya assaulted by hero of the film Naim in Udupi during Tulu film 'Yeregau kiri kiri' shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X