»   » ಜು.22ಕ್ಕೆ ಸೆಟ್ಟೇರಲಿದೆ ತುಳು ಚಿತ್ರ 'ಆಣ್ ಮಗೆ'

ಜು.22ಕ್ಕೆ ಸೆಟ್ಟೇರಲಿದೆ ತುಳು ಚಿತ್ರ 'ಆಣ್ ಮಗೆ'

Posted By:
Subscribe to Filmibeat Kannada

ಇತ್ತೀಚೆಗೆ ಚಂದನವನದ ಸಿನಿಮಾಗಳು ಮಾತ್ರವಲ್ಲದೇ ಕೋಸ್ಟಲ್ ವುಡ್ ಚಿತ್ರಗಳು ಗಮನಸೆಳೆಯುತ್ತಿವೆ. ಆ ಸಾಲಿಗೆ ಸೇರುವ ಭರವಸೆಯೊಂದಿಗೆ 'ಆಣ್ ಮಗೆ' ಎಂಬ ತುಳು ಚಿತ್ರ ಜು.22ಕ್ಕೆ ಸೆಟ್ಟೇರುತ್ತಿದೆ.

'ಆಣ್ ಮಗೆ' ಚಿತ್ರ 'ಸಂಗತಿ ಕ್ರಿಯೇಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿದ್ದು, ಈ ಚಿತ್ರಕ್ಕೆ ಕತೆ ಬರೆದು ಹ್ಯಾರಿ ಫರ್ನಾಂಡೀಸ್ ಎಂಬುವರು ನಿರ್ದೇಶನ ಮಾಡಲು ಮುಂದಾಗಿದ್ದಾರೆ.

Tulu Film 'Aan Mage' will launch on July 22

ಚಿತ್ರತಂಡ ಜು.22ಕ್ಕೆ(ಶನಿವಾರ) ಮಹೂರ್ತ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ರಾಜ್ಯಸಭಾ ಎಂಪಿ ಮತ್ತು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್, ನಿರ್ಮಾಪಕ ಮತ್ತು ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ್, ರಿಚರ್ಡ್ ಕಾಸ್ಟೆಲಿನೊ, ಅಕಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ್ ದೇವಡಿಗ, ಮಂಗಳೂರು ದಕ್ಷಿಣ ಭಾಗದ ಎಂಎಲ್‌ಎ ಜೆ.ಆರ್.ಲೋಬೊ ಮತ್ತು ಮುಂತಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

'ಆಣ್‌ ಮಗೆ' ಚಿತ್ರದ ಮಹೂರ್ತ ಕಾರ್ಯ ಶನಿವಾರ ಮಂಗಳೂರಿನ 'ದೀಪಾ ಕಂಫರ್ಟ್ಸ್' ನಲ್ಲಿ ಸಮಯ ಬೆಳಿಗ್ಗೆ 11.45 ಗಂಟೆಗೆ ನಡೆಯಲಿದೆ.

English summary
Tulu Film 'Aan Mage' will launch on July 22. This movie will direct by Harry Fernandes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada