ಹಾಸ್ಯ ಪ್ರಧಾನ ತುಳು ಚಿತ್ರ 'ದಗಲ್ ಬಾಜಿಲು' ಜುಲೈ 20 ರಂದು ತೆರೆಗೆ
ಮತ್ತೊಂದು ಹಾಸ್ಯ ಪ್ರಧಾನ ತುಳು ಚಿತ್ರ 'ದಗಲ್ ಬಾಜಿಲು' ಕರಾವಳಿಯಾದ್ಯಂತ ಬಿಡುಗಡೆಗೆ ಸಿದ್ದವಾಗಿದೆ. ಅನುಗ್ರಹ ಫಿಲಂಸ್ ಲಾಂಛನದಲ್ಲಿ ಕುಂಬ್ಳೆ ಸಂತೋಷ್ ಶೆಟ್ಟಿ ಮತ್ತು ಸ್ನೇಹಿತರು ಈ ಚಿತ್ರವನ್ನು ನಿರ್ಮಿಸಿದ್ದಾರೆ. '"ದಗಲ್ ಬಾಜಿಲ' ಸಿನಿಮಾ ಜುಲೈ 20 ರಂದು ತೆರೆಕಾಣಲಿದೆ.
'ದಗಲ್ ಬಾಜಿಲು' ಚಿತ್ರದ ಕಥೆ ,ಸಾಹಿತ್ಯ ಬರೆದು ವಿಭಿನ್ನ ಪಾತ್ರದಲ್ಲಿ ಸುರೇಶ್ ಅಂಚನ್ ಮೂಡಬಿದರೆ ಅಭಿನಯಿಸಿದ್ದಾರೆ. ಕೆ ಜಗದೀಶ್ ರೆಡ್ಡಿ ಚಿತ್ರಕ್ಕೆ ಸಹ ನಿರ್ದೇಶನವನ್ನುಮಾಡಿದ್ದು, ಚಿತ್ರಕ್ಕೆ ಕೆ.ಎಮ್.ವಿಷ್ಣುವರ್ಧನ್ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ.
ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಶ್ರೀನಿವಾಸ್ ಪಿ ಬಾಬು ಅವರು ಸಂಕಲನ ಮಾಡಿದ್ದು, ಕಲಾ ನಿರ್ದೇಶನವನ್ನು ವಿಲ್ಷ್ರೇಡ್ ಪಿಂಟೋ ರವರು ಮಾಡಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಎಸ್.ಪಿ ಚಂದ್ರಕಾಂತ್ ಅವರು ಹಿನ್ನಲೆ ಸಂಗೀತ ನೀಡಿದ್ದಾರೆ. ಈ ಚಿತ್ರ ಮೂಡಬಿದ್ರೆ, ಮಂಗಳೂರು, ಉಡುಪಿ, ಮಣಿಪಾಲದ ಸುತ್ತಮುತ್ತ 35 ದಿನಗಳಲ್ಲಿ ಚಿತ್ರಕರಣಗೊಂಡಿದೆ.

ಚಿತ್ರದಲ್ಲಿ ನಾಯಕ-ನಾಯಕಿಯರಾಗಿ ವಿಘ್ನೇಶ್ , ರಶ್ಮಿಕಾ ನಟಿಸಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದೆ. ಕಾಮಿಡಿ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್ , ಬೋಜರಾಜ್ ವಾಮಂಜೂರು, ದೀಪಕ್ ರೈ , ಸತೀಶ್ ಬಂದಲೆ ಉಮೇಶ್ ಮಿಜಾರ್ , ತಿಮ್ಮಪ್ಪ ಕುಲಾಲ್,ಸುನೀಲ್ ನೆಲ್ಲಿಗುಡ್ಡೆ, ಪ್ರಕಾಶ್ ತೂಮಿನಾಡ್, ಮನೋಹರ್ ಶಟ್ಟಿ, ಮಣಿ ಕೋಟಿಬಾಗಿಲು, ಚಂದ್ರಶೇಖರ್ ಸಿದ್ದಕಟ್ಟೆ, ವಿಜಯ ಮೈಯ್ಯ, ಪ್ರಿಯಾ ಹೆಗ್ಡೆ, ನೀಮಾರೇ, ರೂಪಾ ವರ್ಕಾಡಿ, ನಮಿತಾ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











