ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ದಸ್ಕತ್ , ಸಿನಿಮಾವನ್ನು ಮೆಚ್ಚಿ, ಹರಿಸಿದ ತುಳುನಾಡಿಗರು..!

By ಪೂರ್ವ

ಸ್ಯಾಂಡಲ್ ವುಡ್ ಹೇಗೆ ಸಿನಿಮಾಗಳನ್ನು ಮಾಡಿ ಎಲ್ಲರ ಹುಬ್ಬೇರಿಸುವ ಹಾಗೆ ಮಾಡುತ್ತೋ ಅದೇ ರೀತಿ ಕೋಸ್ಟಲ್ ವುಡ್ ನಲ್ಲಿ ಕೂಡ ದಸ್ಕತ್ ಸಿನಿಮಾದ ಕಾರುಬಾರು ಶುರುವಾಗಿದೆ. ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ರಿವ್ಯೂ ಕೂಡ ಅದ್ಭುತವಾಗಿದ್ದು ನಟ ನಟಿಯರು ಬಹಳ ಖುಷಿಯಲ್ಲಿದ್ದಾರೆ. ತುಳುನಾಡಿನ ಜನರಿಗೆ ತಮ್ಮದೇ ಶೈಲಿಯ ಸಿನಿಮಾಗಳನ್ನು ನೋಡಲು ಬಹಳ ಖುಷಿ . ತುಳುನಾಡಿನ ಆಚಾರ ವಿಚಾರ ಹಾಗೆಯೇ ಅಲ್ಲಿ ನಡೆಯುವ ಕೆಲವು ಸಮಾಚಾರಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.

ಶ್ರೀಮಂತರು ಯಾವ ರೀತಿ ಬಡವರ ಮೇಲೆ ದಬ್ಬಾಳಿಕೆಯನ್ನು ಮಾಡುತ್ತಾರೆ, ಬಡವರು ಕಷ್ಟದ ಸಮಯದಲ್ಲಿರುವಾಗ ಶ್ರೀಮಂತರು ಯಾವ ರೀತಿ ಬಡವರನ್ನು ಸೋಲಿಸಲು ಷಡ್ಯಂತ್ರ ರೂಪಿಸುತ್ತಾರೆ ಎಂದು ತೋರಿಸುವ ಸಿನಿಮಾ ಇದು. ಹಾಗೆಯೇ ಪ್ರತಿಯೊಬ್ಬರ ಹೃದಯಕ್ಕೆ ಹತ್ತಿರವಾಗುವ ಘಟನೆಗಳನ್ನು ಈ ಸಿನಿಮಾದ ಮೂಲಕ ನೋಡಬಹುದು. ಬಹಳ ಸುಂದರ ಕಥಾ ಹಂದರವನ್ನು ಹೊಂದಿರುವ ಸಿನಿಮಾ ದಸ್ಕತ್ ಎಂದು ಹೇಳಿದರೆ ತಪ್ಪಾಗದು. ಕರಾವಳಿಯ ಯುವಕರು ಸೇರಿಕೊಂಡು ಮಾಡಿರುವ ಚಿತ್ರ ಇದಾಗಿದ್ದು ಕಳೆದ ಮಾರ್ಚ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಿತ್ತು

Tulu film Daskat film house full

ದಸ್ಕತ್ ಸಿನಿಮಾ ಡಿಸೆಂಬರ್ 13 ರಂದು ತೆರೆ ಕಂಡಿತ್ತು. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಕಾಮಿಡಿ ಕಿಲಾಡಿಗಳು ಶೋನ ಕಲಾವಿದ ಅನೀಶ್ ಕುಮಾರ್ ವೇಣೂರು ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಈ ಸಿನಿಮಾದಲ್ಲಿ ಕನ್ನಡ ಚಲನಚಿತ್ರ ನಟ ಮೋಹನ್ ಶೇಣಿ, ಸಿರಿಯಲ್ ನಟಿ ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವರು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅರ್ಪಿಸುವ ಈ ತುಳುಚಿತ್ರವನ್ನು ರಾಘವೇಂದ್ರ ಕುಡ್ವ ನಿರ್ಮಿಸಿದ್ದಾರೆ. ಈ ಸಿನಿಮಾ ಕರಾವಳಿಯ 15 ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದೆ.

ತುಳುನಾಡಿನ ಆಚಾರ ವಿಚಾರದ ಬಗ್ಗೆ ತೋರಿಸಿದ ಸಿನಿಮಾ

ಈ ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳನ್ನು ಹಾಗೆಯೇ ಸಂಘರ್ಷಗಳನ್ನು ಎತ್ತಿ ತೋರಿಸಲಾಗಿದೆ. ಈ ಚಿತ್ರವನ್ನು ವೇಣೂರು, ನಾರಾವಿ, ಅಂಡಿಂಜೆ, ಕೊಕ್ರಾಡಿ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಪ್ರಜ್ಞೇಶ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಛಾಯಾಗ್ರಹಣ ಹಾಗೂ ಗಣೇಶ್ ನೀರ್ಚಾಲ್ ಸಂಕಲನ, ಸಮರ್ಥನ್ ಎಸ್. ರಾವ್ ಸಂಗೀತವಿದೆ.

ಚಿತ್ರಕ್ಕೆ ಶುಭ ಹಾರೈಸಿದ್ದ ಶಿವಣ್ಣ

ಬೋಧಿ ಪ್ರೋಡಕ್ಷನ್ಸ್ ಸಹಯೋಗದಲ್ಲಿ ನಿರ್ಮಾಣವಾದ ಸಿನಿಮಾದಲ್ಲಿ ಸ್ಮಿತೇಶ್ ಬಾರ್ಯ, ವಿನೋದ್ ರಾಜ್ ಕಲ್ಮಂಜ, ನಿಶಿತ್ ಶೆಟ್ಟಿ, ದೀಕ್ಷಿತ್ ಧರ್ಮಸ್ಥಳ, ಮನೋಜ್ ಆನಂದ್ ಕಾರ್ಯನಿರ್ವಹಿಸಿದ್ದಾರೆ. ದಸ್ಕತ್ ಚಿತ್ರ ಫಸ್ಟ್ ಲುಕ್ ನ್ನು ನಟ ಶಿವರಾಜ್ ಕುಮಾರ್ ಅವರು ಬಿಡುಗಡೆ ಮಾಡಿ ಸಿನಿಮಾ ಗೆ ಶುಭ ಹಾರೈಸಿದ್ದರು. ಒಟ್ಟಿನಲ್ಲಿ ದಸ್ಕತ್ ಸಿನಿಮಾ ತುಳುನಾಡಿನ ಜನರ ಮನದಲ್ಲಿ ಅಚ್ಚಳಿಯದೆ ಉಳಿಯುವ ಎಲ್ಲ ಲಕ್ಷಣ ಸದ್ಯ ಕಂಡು ಬರುತ್ತಿವೆ. ಚಿತ್ರದ ಗಳಿಕೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೋಸ್ಟಲ್‌ವುಡ್‌ನಲ್ಲಿ ದಸ್ಕತ್ ಹವಾ ಸದ್ಯಕ್ಕೆ ಜೋರಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X