ತುಳು ಚಿತ್ರ 'ಮೈ ನೇಮ್ ಈಸ್ ಅಣ್ಣಪ್ಪ' ಇಂದು ಕರಾವಳಿಯಾದ್ಯಂತ ಬಿಡುಗಡೆ

By ಮಂಗಳೂರು ಪ್ರತಿನಿಧಿ

ಮಂಗಳೂರು ಸಪ್ಟೆಂಬರ್ 21: ತುಳುವಿನ ಬಹುನಿರೀಕ್ಷಿತ ಅದ್ದೂರಿ ಚಿತ್ರ 'ಮೈ ನೇಮ್ ಈಸ್ ಅಣ್ಣಪ್ಪ' ಇಂದು ತೆರೆಕಾಣಲಿದೆ. ಲಕುಮಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ನಿರ್ಮಾಣಗೊಂಡ ಈ ಚಿತ್ರ ಕೋಸ್ಟಲ್ ವುಡ್‌ನ‌ಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮಂಜು ರೈ ಮೂಳೂರು ಮುಖ್ಯಭೂಮಿಕೆಯಲ್ಲಿ ಇರುವ ಈ ಚಿತ್ರ ಇಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದೆ.

ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದ್ದು ನಗರದ ಎಲ್ಲಾ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರವು ತೆರೆಕಾಣಲಿದೆ. ಈಗಾಗಲೇ ಚಿತ್ರ ತನ್ನ ವಿಭಿನ್ನ ಪೋಸ್ಟರ್, ಟೈಟಲ್ ನ ಮೂಲಕ ಕರಾವಳಿಯ ಜನರಲ್ಲಿ ಎದೆಬಡಿತ ಹೆಚ್ಚಿಸಿದೆ. ಚಿತ್ರದ ಹಾಡುಗಳ ಮೂಲಕವೂ ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಕೈಹಾಕಿದೆ.

ಈ 'ಮೈ ನೇಮ್‌ ಈಸ್ ಅಣ್ಣಪ್ಪ' ಸಿನಿಮಾದ ವಿಶೇಷತೆ ಎಂದರೆ ಈ ಚಿತ್ರಕ್ಕೆ ಮೂವರು ಯಕ್ಷಗಾನದ ಭಾಗವತರು ಸ್ವರ ನೀಡಿದ್ದಾರೆ. ಕಿಶೋರ್ ಕುಮಾರ್‌ ಶೆಟ್ಟಿ ಸಂಗೀತ ಒದಗಿಸಿರುವ ಹಾಡುಗಳು ಕೂಡ ಭರ್ಜರಿ ಹಿಟ್‌ ಆಗುವ ನಿರೀಕ್ಷೆ ಇದೆ. ಯಕ್ಷಗಾನ ಲೋಕದ ಪ್ರಖ್ಯಾತ ಭಗವತರಾದ ದಿನೇಶ್‌ ಅಮ್ಮಣ್ಣಾಯ, ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ ಅವರು ಈ ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ.

Tulu Film My name is Annappa is releasing today

ಈ ಚಿತ್ರವನ್ನು ಮಯೂರ್ ಶೆಟ್ಟಿ ನಿರ್ದೇಶಿಸಿದ್ದು, ರೋಹನ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ಮಂಜು ರೈ, ಶುಭಾ ಶೆಟ್ಟಿ, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಸತೀಶ್ ಬಂದಲೆ, ರಂಗಾಯಣ ರಘು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್ ಕಾಪಿನಡ್ಕ ಮತ್ತಿತರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

More from Filmibeat

English summary
Tulu Film 'My name is Annappa' is releasing today (Sept 21).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X