»   » 'ಪಿಲಿಬೈಲ್ ಯಮುನಕ್ಕ' ತುಳು ಚಿತ್ರದ ದೃಶ್ಯ ಲೀಕ್

'ಪಿಲಿಬೈಲ್ ಯಮುನಕ್ಕ' ತುಳು ಚಿತ್ರದ ದೃಶ್ಯ ಲೀಕ್

By: ಶಂಶೀರ್ ಬುಡೋಳಿ
Subscribe to Filmibeat Kannada

ಹಾಲಿವುಡ್, ಬಾಲಿವುಡ್, ಟಾಲಿವುಡ್ ಚಿತ್ರಗಳಿಗೆ ಎದುರಾಗುತಿದ್ದ ಪೈರಸಿ ಭೀತಿ ಈಗ ತುಳು ಚಿತ್ರರಂಗಕ್ಕೂ ಆನ್ ಲೈನ್ ಲೀಕ್ ಪೆಡಂಭೂತ ವಕ್ಕರಿಸಿದೆ.

ಹೌದು, ಡಿಸೆಂಬರ್ 09ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಬಿಡುಗಡೆಗೊಂಡ ಕೆ. ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರ 'ಪಿಲಿಬೈಲ್ ಯಮುನಕ್ಕ' ಚಿತ್ರಕ್ಕೆ ಪೈರಸಿ ಭೀತಿ ಎದುರಾಗಿದೆ.

ಫೇಸ್‌ಬುಕ್‌ನಲ್ಲಿನ 'ತುಳು ಕಾಮಿಡಿ ವಿಡಿಯೋಸ್ ಪೇಜ್ 'ನಲ್ಲಿ ಈ ಚಿತ್ರದ 3ನಿಮಿಷಗಳ ಹಾಸ್ಯದ ತುಣುಕೊಂದನ್ನ ಅಪ್‌ಲೋಡ್ ಮಾಡಲಾಗಿದೆ. ಇದು ಥಿಯೇಟರ್‌ನಲ್ಲಿ ಚಿತ್ರೀಕರಿಸಿದ ದೃಶ್ಯವಾಗಿದ್ದು. ಅನುಮತಿ ಇಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ.

Piracy hits 'Pillibail Yamunakka' commedy scenes leaked online

ಈ ಕುರಿತು ಪಿಲಿಬೈಲ್ ಯಮುನಕ್ಕ ಚಿತ್ರ ತಂಡ ಮಂಗಳೂರು ಬಂದರು ಠಾಣೆಯಲ್ಲಿ ದೂರು ದಾಖಲಿಸಿದೆ. ಚಿತ್ರತಂಡದ ದೂರಿನನ್ವಯ ಬಂದರು ಠಾಣಾ ಪೊಲೀಸರು ಹಾಗೂ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ನಮ್ಮ 'ಒನ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ ಚಿತ್ರದ ನಿರ್ಮಾಪಕ ರೋಹಣ್ ಶೆಟ್ಟಿ ಅವರು, 'ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಯಾರೋ ಈ ಚಿತ್ರದ ದೃಶ್ಯವೊಂದನ್ನ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಶೀಘ್ರವೇ ಆರೋಪಿಯನ್ನ ಬಂಧಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದೇವೆ ಎಂದರು.

ಕಳೆದ ಶುಕ್ರವಾರ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಬಿಡುಗಡೆಗೊಂಡ ಈ ಚಿತ್ರ ನಾಲ್ಕು ದಿನಗಳಲ್ಲಿ 30 ಲಕ್ಷಕ್ಕಿಂತ ಹೆಚ್ಚು ಗಳಿಕೆ ಮಾಡಿದೆ. ಕೆ. ಸೂರಜ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಪುರವ್ ಅಂಬರ್, ನವೀನ್ ಡಿ.ಪಡೀಲ್, ಸೋನಲ್ ಮೊಂತೇರಿಯೋ ನಟಿಸಿದ್ದಾರೆ.

ಮಂಗಳೂರು, ಉಪ್ಪಿನಂಗಡಿ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಶ್ರೀ ದುರ್ಗಾ ಎಂಟರ್ ಟೈನ್ ಮೆಂಟ್ ಅರ್ಪಿಸುವ ಈ ಚಿತ್ರವನ್ನ ಲಕುಮಿ ಸಿನಿ ಕ್ರಿಯೇಷನ್ ನಿರ್ಮಿಸಿದೆ.

ಡೈಲಾಗ್ ಮೂಲಕ ಬಿಡುಗಡೆ ಮುನ್ನವೇ ಸದ್ದು ಮಾಡಿದ ಈ ಚಿತ್ರದಲ್ಲಿ ಐದು ಹಾಡುಗಳಿವೆ. ವಿಶೇಷ ಏನಪ್ಪ ಅಂದರೆ ಈ ಹಾಡುಗಳಿಗೆ ಬಾಲಿವುಡ್ ನ ಖ್ಯಾತ ಹಾಡುಗಾರರಾದ ಶ್ರೇಯಾ ಘೋಷಾಲ್, ಪ್ರಕಾಶ್ ಮಹಾದೇವನ್, ಕುನಾಲ್ ಗಾಂಜಾವಾಲಾ, ನಕಾಶ ಅಝೀಝ್, ಅಮನ್ ತ್ರಿಕಾ ಧ್ವನಿಗೂಡಿಸಿದ್ದಾರೆ.

English summary
In yet another case of piracy incident in coatalwood, commedy scenes of recently released tulu film 'Pillibail Yamunakka' has been leaked online. The comedy scene has been updated in apopular tulu page in facebook.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada