ತುಳು ಸಿನಿಮಾ ನಟ ಸುರೇಂದ್ರ ಬಂಟ್ವಾಳ್ ಭೀಕರ ಹತ್ಯೆ
ತುಳು ಸಿನಿಮಾಗಳಲ್ಲಿ ನಟಿಸುತ್ತಿದ್ದ ನಟ ಸುರೇಂದ್ರ ಬಂಟ್ವಾಳ್ ಅವರನ್ನು ಯಾರೊ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ನಟ ಸುರೇಂದ್ರ ಬಂಟ್ವಾಳ್ ಅವರ ರಕ್ತ-ಸಿಕ್ತ ಮೃತ ದೇಹ ಬಂಟ್ವಾಳದ ಬಿಸಿ ರೋಡ್‌ನಲ್ಲಿನ ಫ್ಲ್ಯಾಟ್ ಒಂದರಲ್ಲಿ ಇಂದು ಮಧ್ಯಾಹ್ನ ಪತ್ತೆಯಾಗಿದೆ. ಸುರೇಂದ್ರ ಅವರನ್ನು ಯಾರೋ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಂದು ಮಧ್ಯಾಹ್ನ ಸುರೇಂದ್ರ ಬಂಟ್ವಾಳ ಅವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಳೆ ವೈಷಮ್ಯ ಅಥವಾ ಹಣಕಾಸಿನ ವಿಚಾರದಲ್ಲಿ ಜಗಳವೇ ಕೊಲೆಗೆ ಕಾರಣವೆಂಬ ಶಂಕೆ ವ್ಯಕ್ತಪಡಿಸಲಾಗಿದೆ.

ಬಂಟ್ವಾಳದ ಬಂಡಾರಿಬೆಟ್ಟು ನಿವಾಸಿ
ಬಂಟ್ವಾಳದ ಬಂಡಾರಿಬೆಟ್ಟು ನ ನಿವಾಸಿಯಾಗಿದ್ದ ಸುರೇಂದ್ರ ಬಂಟ್ವಾಳ ಹಲವು ತುಳು ಸಿನಿಮಾಗಳಲ್ಲಿ ನಟಿಸಿದ್ದರು. ಸುರೇಂದ್ರ ಬಂಟ್ವಾಳ ರೌಡಿ ಶೀಟರ್ ಸಹ ಆಗಿದ್ದರು. ಕೆಲ ವರ್ಷಗಳಿಂದಲೂ ಸಿನಿಮಾದಲ್ಲಿ ಸಹ ನಟಿಸುತ್ತಿದ್ದರು.

ಹಣಕಾಸಿನ ವ್ಯವಹಾರವೂ ಇತ್ತು
ಸಿನಿಮಾ ನಟನೆ ಜೊತೆಗೆ ಹಣಕಾಸಿನ ವ್ಯವಹಾರವನ್ನೂ ನಡೆಸುತ್ತಿದ್ದ ಸುರೇಂದ್ರ ಮೇಲೆ ಕೆಲವು ಪ್ರಕರಣಗಳು ಇದ್ದವು. ಕಳೆದ 2018 ರಲ್ಲಿ ಅವರು ಜೈಲು ಸಹ ಸೇರಿದ್ದರು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಸುರೇಂದ್ರ ರೌಡಿ ಶೀಟರ್ ಸಹ ಆಗಿದ್ದರು.

ಕತ್ತಿ ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ
ತಳವಾರ ಪೇಟೆಯಲ್ಲಿ ಕತ್ತಿ ಹಿಡಿದು ಬಿಜೆಪಿ ಕಾರ್ಯಕರ್ತರಿಗೆ ಸುರೇಂದ್ರ ಬಂಟ್ವಾಳ ಬೆದರಿಕೆ ಹಾಕಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿ ಜೈಲು ಪಾಲು ಮಾಡಲಾಗಿತ್ತು. ನಂತರ ಜಾಮೀನು ಪಡೆದು ಅವರು ಹೊರಗೆ ಬಂದಿದ್ದರು.

ಹಣಕಾಸಿನ ವಿಚಾರಕ್ಕೆ ಕೊಲೆ
ಕನ್ನಡದ ಸವರ್ಣದೀರ್ಘ ಸಂಧಿ, ತುಳುವಿನ ಚಾಲಿ ಪೋಲೀಲು, ಸೇರಿದಂತೆ ಹಲವು ತುಳು ಸಿನಿಮಾಗಳಲ್ಲಿ ಸುರೇಂದ್ರ ಬಂಟ್ವಾಳ ನಟಿಸಿದ್ದರು. ಹಣಕಾಸಿನ ವಿಚಾರಕ್ಕೆಯೇ ಸುರೇಂದ್ರ ಅವರ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.


Click it and Unblock the Notifications











