»   » ಶೀಘ್ರದಲ್ಲೇ ದುಬೈ, ಮುಂಬೈ ಕಡೆಗೆ 'ಚಾಲಿಪೋಲಿಲು'

ಶೀಘ್ರದಲ್ಲೇ ದುಬೈ, ಮುಂಬೈ ಕಡೆಗೆ 'ಚಾಲಿಪೋಲಿಲು'

Posted By:
Subscribe to Filmibeat Kannada

ಜನಪ್ರಿಯತೆ, ಗುಣಮಟ್ಟ, ಗಳಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ದಾಖಲೆ ಬರೆದು ತುಳು ಸಿನಿಮಾ ರಂಗದಲ್ಲಿಯೇ ಹೊಸ ಸಂಚಲನ ಮೂಡಿಸುತ್ತಿರುವ ಚಾಲಿ ಪೋಲಿಲು ಸಿನಿಮಾ ಈಗ ಮತ್ತೊಂದು ದಾಖಲೆ ಬರೆಯಲು ವೇದಿಕೆ ಸಿದ್ಧಗೊಂಡಿದೆ. ನ. 21 (ಶುಕ್ರವಾರ)ರಿಂದ ಚಾಲಿಪೋಲಿಲು ಸಿನಿಮಾ ಶಿವಮೊಗ್ಗದಲ್ಲಿ ಪ್ರದರ್ಶನ ಆರಂಭಿಸುವ ಮೂಲಕ ಅಲ್ಲಿನ ಜನರಿಗೆ ಮನೋರಂಜನೆ ನೀಡಲಿದೆ.

ಆ ಮೂಲಕ ಇದೇ ಮೊದಲ ಬಾರಿಗೆ ತುಳು ಸಿನಿಮಾವೊಂದು ಶಿವಮೊಗ್ಗದಲ್ಲಿ ಪ್ರದರ್ಶನ ನೀಡಿದ ಖ್ಯಾತಿಗೆ ಚಾಲಿಪೋಲಿಲು ಭಾಜನವಾಗಲಿದೆ. ಜಯಕಿರಣ ಲಾಂಛನದಡಿಯಲ್ಲಿ ಪ್ರಕಾಶ್ ಕೆ. ಪಾಂಡೇಶ್ವರ ನಿರ್ಮಾಣದ ಚಾಲಿಪೋಲಿಲು ತುಳು ಸಿನಿಮಾ ಬಹು ಜನರ ಅಪೇಕ್ಷೆ ಮತ್ತು ಬೇಡಿಕೆ ಮೇರೆಗೆ ನ. 14ರಿಂದ ಪುತ್ತೂರಿನಲ್ಲಿ ನ.21ರಿಂದ ಶಿವಮೊಗ್ಗ, ಭದ್ರಾವತಿ ಬೆಂಗಳೂರುಗಳಲ್ಲಿ ಪ್ರದರ್ಶನ ಕಾಣಲಿದೆ.

Tulu movie Chaali Polilu releses in Shimoga, Dubai, Mumbai1

ಆ ಬಳಿಕ ಕಾಸರಗೋಡು, ಸುಳ್ಯ ಮತ್ತು ಕುಂದಾಪುರ, ಮೂಡಿಗೆರೆಯಲ್ಲೂ ಪ್ರದರ್ಶನ ನೀಡಲಿದೆ. ಮುಂಬಯಿ, ದುಬೈಯ ಥಿಯೇಟರ್‍ಗಳಲ್ಲೂ ಚಾಲಿಪೋಲಿಲು ಬಿಡುಗಡೆ ಮಾಡುವ ಸಿದ್ಧತೆ ನಡೆದಿದೆ.

ಪ್ರಸ್ತುತ ಪ್ರದರ್ಶನ ಕಾಣುವ ಎಲ್ಲ ಟಾಕೀಸುಗಳಲ್ಲೂ ಹೌಸ್ ಫುಲ್ ಗೆ ಕಾರಣವಾಗಿರುವ ಚಾಲಿಪೋಲಿಲು ಸಿನಿಮಾದ ಪ್ರದರ್ಶನವನ್ನು ನಮ್ಮೂ ರಲ್ಲೂ ಒದಗಿಸಬೇಕು ಎಂಬ ಬಲವಾದ ಆಗ್ರಹ ಮತ್ತು ಬೇಡಿಕೆ ಶಿವಮೊಗ್ಗದಿಂದ ಬಂದಿರುವುದು ಈ ಸಿನಿಮಾದ ಗುಣಮಟ್ಟ ಮತ್ತು ಜನಪ್ರಿಯತೆಗೆ ಸಾಕ್ಷಿ. [ಚಾಲಿಪೋಲಿಲು ಚಿತ್ರ ವಿಮರ್ಶೆ]

ಈವರೆಗೆ ಯಾವುದೇ ತುಳು ಸಿನಿಮಾ ಶಿವಮೊಗ್ಗದಲ್ಲಿ ಪ್ರದರ್ಶನ ಕಂಡದ್ದಿಲ್ಲ. ಆದರೆ ಚಾಲಿಪೋಲಿಲು ಶಿವಮೊಗ್ಗಕ್ಕೂ ತೆರಳಿ ತನ್ನ ದಾಖಲೆಯ ಸರಣಿಗೆ ಹೊಸ ಕೊಂಡಿ ಸೇರಿಸಲು ಮುಂದಾಗಿರುವುದು ತುಳುವರಿಗೆ ಹೆಮ್ಮೆ ತರುವಂಥ ಸಂಗತಿ.

Tulu movie Chaali Polilu releses in Shimoga, Dubai, Mumbai2

ಚಾಲಿಪೋಲಿಲು ಸಿನಿಮಾ ಬಿಡುಗಡೆಯಾಗಿ ಎರಡು ವಾರವಾಗುತ್ತಾ ಬಂದರೂ ಈಗಲೂ ಎಲ್ಲ ಥಿಯೇಟ ರ್‍ಗಳಲ್ಲೂ ಟಿಕೆಟ್ ಸಿಗದ ಪರಿಸ್ಥಿತಿಯಿದೆ. ತುಳು ಸಿನಿಮಾ ಈ ಮಟ್ಟಕ್ಕೆ ಬೆಳೆದು ನಿಲ್ಲಬಹುದು ಎಂದು ಯಾರೂ ಊಹಿಸಿರಲಿಲ್ಲ. ಸಿನಿಮಾ ಪ್ರಿಯರು, ಸಿನಿಮಾ ರಂಗದ ದಿಗ್ಗಜರು ಸೇರಿದಂತೆ ಎಲ್ಲರ ಊಹೆಗಳನ್ನೂ ಅಡಿಮೇಲುಗೊಳಿಸಿ ಮುನ್ನುಗ್ಗುತ್ತಿರುವ ಚಾಲಿಪೋಲಿಲು ಈವರೆಗಿನ ತುಳು ಸಿನಿಮಾಗಳಲ್ಲೇ ಶ್ರೇಷ್ಠಮಟ್ಟದ್ದು ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ಅದರ ಕಥಾ ನಿರೂಪಣೆ, ಗುಣಮಟ್ಟದ ಹಾಸ್ಯ, ಸಾಮಾಜಿಕ ಮೌಲ್ಯ, ಮಾನವೀಯ ಸ್ಪರ್ಶ... ಮುಂತಾದ ವುಗಳು ಯಶಸ್ಸಿನ ಪ್ರಮುಖ ಅಂಶಗಳು. ಶಿವಮೊಗ್ಗ ಸೇರಿದಂತೆ ಮುಂದೆ ಪ್ರದರ್ಶನ ಕಾಣಲಿರುವ ಎಲ್ಲ ನಗರ ಗಳಲ್ಲೂ ಇದೇ ರೀತಿಯ ದಾಖಲೆ ಬರೆಯುವ ಸಾಧ್ಯತೆ ನಿಚ್ಚಳವಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Tulu movie Chaali Polilu, for the first time Tulu movie releasing in Shimoga on 21st November. Soon the movie to release in Dubai and Mubai also.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada