'ಚಂಡಿ ಕೋರಿ' ತುಳು ಚಿತ್ರದ ಹಾಡು ಕೇಳಲು ಸಜ್ಜಾಗಿ

By Suneetha

ಕರಾವಳಿಗರಿಗೆ ಸೆಪ್ಟಂಬರ್ ತಿಂಗಳು ಧಮಾಕೇದರ್ ತಿಂಗಳಾಗಲಿದೆ ಯಾಕಂತೀರಾ, ಯಾಕಂದ್ರೆ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ಅವರು ತುಳು ಚಿತ್ರರಂಗದಲ್ಲಿ ಮತ್ತೊಂದು ಅದ್ಭುತ ತೋರಿಸಲು ರೆಡಿಯಾಗಿದ್ದಾರೆ.

250 ದಿನಗಳನ್ನು ಪೂರೈಸಿ ತುಳು ಚಿತ್ರರಂಗದಲ್ಲಿ ಕಮಾಲ್ ಮಾಡಿದ ದೇವದಾಸ್ ಕಾಪಿಕಾಡ್ ಅವರ 'ಚಾಲಿಪೋಲಿಲು' ಚಿತ್ರದ ನಂತರ 'ತೆಲಿಕೆದ ಬೊಳ್ಳಿ' ದೇವದಾಸ್ ಕಾಪಿಕಾಡ್ ಅವರು 'ಚಂಡಿ ಕೋರಿ' ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಸೌಂಡ್ ಮಾಡಲಿದ್ದಾರೆ.[ಮನ ಗೆದ್ದ ತುಳು ಚಿತ್ರ ಮದಿಮೆ ಮರಾಠಿಗೆ ರೀಮೇಕ್ ]

Devadas Kapikad

ಇದೀಗ 'ಬೊಳ್ಳಿ ಮೂವೀಸ್' ಲಾಂಛನದಡಿ ಮೂಡಿಬರುತ್ತಿರುವ 'ಚಂಡಿ ಕೋರಿ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ತಯಾರಾಗಿ ನಿಂತಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಕರಾವಳಿ ಜಿಲ್ಲೆಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಅಂದ ಹಾಗೆ 'ಚಂಡಿ ಕೋರಿ' ಚಿತ್ರದ ಹಾಡಿನ ಸಿಡಿ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 20 ರಂದು ಮಂಗಳೂರಿನ ಓಶಿಯನ್ ಪರ್ಲ್ಸ್ ನಲ್ಲಿ ಜರುಗಲಿದೆ.[ಆಗಸ್ಟ್ 14ರಿಂದ ಕರಾವಳಿ ಜಿಲ್ಲೆಗೆ ಬರಲಿದ್ದಾನೆ "ಸೂಪರ್ ಮರ್ಮಯೆ" ]

Arjun kapikad

ಮಣಿಕಾಂತ್ ಕದ್ರಿ ಅವರ ಹಿನ್ನಲೆ ಸಂಗೀತದಲ್ಲಿ ಇದೇ ಮೊದಲ ಬಾರಿಗೆ ದೇವದಾಸ್ ಕಾಪಿಕಾಡ್ ಅವರು ನಿರ್ದೇಶನದ ಜೊತೆಗೆ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಕೂಡ ಮಾಡಿರುವುದು ಈ ಚಿತ್ರದ ವಿಶೇಷ. ಅಲ್ಲದೇ ತಂದೆ-ಮಗ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.

'ಕಣ್ಣಿಗೆ ಕಾಣುವ ದೇವರೆಂದರೆ ಹೆತ್ತವರು, ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂಬ ಸಂದೇಶ ಹೊಂದಿರುವ 'ಚಂಡಿ ಕೋರಿ' ಚಿತ್ರದಲ್ಲಿ ತಾಳ್ಮೆಯ ಮಹತ್ವವನ್ನು ತಿಳಿಸಲಾಗಿದೆ,

ಶರ್ಮಿಳಾ.ಡಿ ಕಾಪಿಕಾಡ್ ಹಾಗೂ ಸಚಿನ್ ಎ.ಎಸ್ ಉಪ್ಪಿನಂಗಡಿ ಅವರು ಬಂಡವಾಳ ಹಾಕಿರುವ ಹಾಸ್ಯ-ಮನೋರಂಜನೆಯಿಂದ ಕೂಡಿರುವ 'ಚಂಡಿ ಕೋರಿ' ಚಿತ್ರದಲ್ಲಿ ದೇವದಾಸ್ ಕಾಪಿಕಾಡ್ ಅವರ ಮಗ ಅರ್ಜುನ್ ಕಾಪಿಕಾಡ್ ಹಾಗೂ ಕರಿಷ್ಮಾ ಅಮಿನ್ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.[ತುಳು ಪರ್ಬ' ಚಿತ್ರದ ಸಖತ್ ಫೀಲಿಂಗ್ಸ್ ನೋಡಿ ]

Devadas Kapikad

ಇನ್ನುಳಿದಂತೆ ನವೀನ್ ಡಿ.ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ ಬೋಳಾರ್, ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಶರ್ಮಿಳಾ ಕಾಪಿಕಾಡ್, ಸರೋಜಿನಿ ಶೆಟ್ಟಿ, ಮುಂತಾದವರ ತಾರಾಗಣ ಈ ಚಿತ್ರಕ್ಕಿರುವುದರಿಂದ ಪ್ರೇಕ್ಷಕರಿಗೆ ಪಕ್ಕಾ ಮನೋರಂಜನೆ ಗ್ಯಾರಂಟಿ.[ಅದ್ಭುತ ದಾಖಲೆ ಬರೆದ ತುಳು ಸಿನೆಮಾ 'ಚಾಲಿಪೋಲಿಲು']

ಒಟ್ನಲ್ಲಿ ಕರಾವಳಿ ಪ್ರದೇಶದ ಜನರಿಗೆ ಮತ್ತೊಮ್ಮೆ ನಗೆಹಬ್ಬದ ಸುರಿಮಳೆ ಪ್ರಾರಂಭವಾಗಲಿದ್ದು, ಚಿತ್ರ ನೋಡಲು ಈಗಿನಿಂದಲೇ ತಯಾರಿ ನಡೆಸಿ.

More from Filmibeat

English summary
Tulu movie 'Chandi Kori' all set to releasing in the month of September. The audio CD will be releasing on August 20th. 'Chandi Kori' features Actor Arjun Kapikad, Actress Karishma Amin in the lead role. The movie is directed by Devadas Kapikad of 'Telikeda Bolli'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X