ಸದ್ಯದಲ್ಲೇ ತೆರೆಗೆ ಬರಲಿದೆ ಬಲು ನಿರೀಕ್ಷಿತ ಮದಿಮೆ

By Rajendra

ತುಳು ಸಿನಿಮಾ ರಂಗದ 43 ವರ್ಷಗಳ ಯಾನದಲ್ಲಿ 51ನೇ ಸಿನಿಮಾ ಆಗಿ ಹೊರ ಬಂದಿರುವ 'ರಂಗ್' ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿರುವಂತೆಯೇ, ಒರಿಯರ್ದೋರಿ ಅಸಲ್ ಖ್ಯಾತಿಯ ವಿಜಯಕುಮಾರ್ ಕೊಡಿಯಾಲ್ ಬೈಲ್ ರ ಅದ್ದೂರಿ ವೆಚ್ಚದ 'ಮದಿಮೆ' ಬಿಡುಗಡೆಗೆ ಸಿದ್ದವಾಗಿದೆ. ಈ ಸಿನಿಮಾ ಕುತೂಹಲ - ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ತುಳು ಚಿತ್ರರಂಗದ ಇತಿಹಾಸದಲ್ಲಿಯೇ ಅದ್ಭುತ ಯಶಸ್ಸು ಸಾಧಿಸಿ, ಸುಮಾರು 175ಕ್ಕಿಂತಲೂ ಹೆಚ್ಚು ದಿನಗಳ ಪ್ರದರ್ಶನ ಕಂಡು 25 ವಾರ ಓಡಿದ ಹೆಗ್ಗಳಿಕೆಗೆ ಪಾತ್ರವಾಗಿ ದಾಖಲೆ ಬರೆದಿರುವ ಒರಿಯರ್ದೊರಿ ಅಸಲ್ ಖ್ಯಾತಿಯ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ 'ಮದಿಮೆ' ಸಿನಿಮಾ ಸೆಪ್ಟಂಬರ್ ನಲ್ಲಿ ತೆರೆಗೆ ಬರಲಿದೆ. [ರಂಗ್ ಚಿತ್ರವಿಮರ್ಶೆ]

ಸುಜಾತಾ ಬಾಲಕೃಷ್ಣ ಶೆಟ್ಟಿ ಅರ್ಪಿಸುವ ಮೇಗಿನ ಮಾಲಾಡಿ ಬಾಲಕೃಷ್ಣ ಶೆಟ್ಟಿ ನಿರ್ಮಾಣದ ಮದಿಮೆ ಅದ್ದೂರಿ ಬಜೆಟ್ ಸಿನಿಮಾ. ಈ ಚಿತ್ರಕ್ಕೆ ವಿಜಯಕುಮಾರ್ ಕೊಡಿಯಾಲ್ ಬೈಲ್ ಕಥೆ- ಚಿತ್ರಕಥೆ- ಸಾಹಿತ್ಯ, ಸಂಭಾಷಣೆಯೊಂದಿಗೆ ಅವರದ್ದೇ ನಿರ್ದೇಶನವೂ ಇರುವುದು ದೊಡ್ಡ ಪ್ಲಸ್ ಪಾಯಿಂಟ್.

ಒರಿಯರ್ದೊರಿ ಅಸಲ್ ನಿರ್ದೇಶಕರ ಚಿತ್ರ

ಒರಿಯರ್ದೊರಿ ಅಸಲ್ ನಿರ್ದೇಶಕರ ಚಿತ್ರ

ಸೃಜನಶೀಲತೆ, ಹೊಸತನ, ಗುಣಮಟ್ಟಕ್ಕೆ ಎತ್ತಿದ ಕೈ ಎಂಬುದನ್ನು ಈ ಹಿಂದಿನ ತನ್ನ ಒರಿಯರ್ದೊರಿ ಅಸಲ್ ಸಿನಿಮಾದಲ್ಲಿಯೇ ನಿರೂಪಿಸಿರುವ ಇವರು, ಮದಿಮೆಗೆ ನಿರ್ದೇಶನ ನೀಡುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಸೋನು ನಿಗಂ ಮತ್ತು ಚಿತ್ರಾ ಕಂಠಸಿರಿಯಲ್ಲಿ ಹಾಡುಗಳು

ಸೋನು ನಿಗಂ ಮತ್ತು ಚಿತ್ರಾ ಕಂಠಸಿರಿಯಲ್ಲಿ ಹಾಡುಗಳು

43 ದಿನಗಳ ಕಾಲ ಮಂಗಳೂರು, ಬೇಕಲ ಕೋಟೆ, ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಮುಂತಾದೆಡೆ ಚಿತ್ರೀಕರಣಗೊಂಡಿರುವ ಮದಿಮೆಯಲ್ಲಿ 5 ಹಾಡುಗಳಿವೆ. ವಿಶೇಷವೆಂದರೆ 2 ಹಾಡುಗಳನ್ನು ಖ್ಯಾತ ಗಾಯಕರಾದ ಸೋನು ನಿಗಂ ಮತ್ತು ಚಿತ್ರಾ ಅವರು ಹಾಡಿದ್ದಾರೆ. ತುಳು ಸಿನಿಮಾದಲ್ಲಿ ಇವರು ಹಾಡುತ್ತಿರುವುದು ಇದೇ ಮೊದಲು. ಚಿತ್ರಾರಿಂದ ಒಂದು ಹಾಡು ಹಾಡಿಸಲು ಕೊಡಿಯಾಲ್ ಬೈಲ್ ಅವರು ಚೆನ್ನೈ ವರೆಗೆ ಹೋಗಿ ಬಂದಿದ್ದರು.

ಎ.ಕೆ. ವಿಜಯ್ ಸಂಗಿತ ನಿರ್ದೇಶನ

ಎ.ಕೆ. ವಿಜಯ್ ಸಂಗಿತ ನಿರ್ದೇಶನ

ಎ.ಕೆ. ವಿಜಯ್ ಸಂಗಿತ ನಿರ್ದೇಶನ ಇರುವ ಉಳಿದ ಹಾಡುಗಳನ್ನು ಮೈಮ್ ರಾಮ್ ದಾಸ್, ರವೀಂದ್ರ ಪ್ರಭು, ಶಮಿತಾ ಮಲ್ನಾಡ್ ಮತ್ತು ವಿನೋದ್ ರಾಜ್ ಅವರು ಹಾಡಿದ್ದಾರೆ. ಇದೇ ಮೊದಲ ಬಾರಿಗೆ ವಿನೊದ್ ರಾಜ್ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ವಿನೋದ್ ಅವರು ಎ. ಕೆ. ವಿಜಯ್ ಅವರ ಪುತ್ರ.

ರೆಡ್ ಎಪಿಕ್ ಕ್ಯಾಮರಾ ಬಳಕೆ

ರೆಡ್ ಎಪಿಕ್ ಕ್ಯಾಮರಾ ಬಳಕೆ

ತುಂಬಾ ದುಬಾರಿ ಕ್ಯಾಮರಾ ಆಗಿರುವ ರೆಡ್ ಎಪಿಕ್ ಕ್ಯಾಮರಾವನ್ನು ಈ ಸಿನಿಮಾದ ಚಿತ್ರೀಕರಣಕ್ಕಾಗಿ ಬಳಸಲಾಗಿರುವುದು ಗಮನೀಯ ಅಂಶ. ಗುರುಪ್ರಶಾಂತ ರೈ ಅವರ ಕೈಚಳಕದಲ್ಲಿ ಕ್ಯಾಮರಾ ಕೆಲಸ ಮಾಡಿದೆ. ಶ್ರೀನಿವಾಸ ಪ್ರಭು ಅವರು ಎಡಿಟಿಂಗ್ ಕೆಲಸ ಮಾಡಿದ್ದು, ಎಂ.ಕೆ. ಮಠ ಮತ್ತು ತ್ರಿಶೂಲ್ ಶೆಟ್ಟಿ ಅವರು ಸಹ ನಿರ್ದೇಶಕರಾಗಿದ್ದಾರೆ. ಮದನ ಹರಿಣಿ ಅವರು ನೃತ್ಯ ನಿರ್ದೇಶನ ನೀಡಿರುವುದು ಉಲ್ಲೇಖನೀಯ ಅಂಶ.

ಗುಣಮಟ್ಟದೊಂದಿಗೆ ರಾಜಿ ಇಲ್ಲದ ನಿರ್ದೇಶಕ

ಗುಣಮಟ್ಟದೊಂದಿಗೆ ರಾಜಿ ಇಲ್ಲದ ನಿರ್ದೇಶಕ

ಮದಿಮೆ ತಂಡದಲ್ಲಿ ಹೆಚ್ಚಿನವರು ಪ್ರಖ್ಯಾತರು ಮತ್ತು ಅನುಭವಿಗಳಾದ ಕಾರಣ ಸಿನಿಮಾದ ಗುಣಮಟ್ಟದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಜತೆಗೆ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದ ಕೊಡಿಯಾಲ್ ಬೈಲ್ ಅವರ ನೇತೃತ್ವ ಇರುವುದು ಸಿನಿಮಾದ ಗುಣಮಟ್ಟದ ವಿಶ್ವಾಸವನ್ನು ಹೆಚ್ಚಿಸಿದೆ.

ತುಳು ರಂಗಭೂಮಿಯ ಕಲಾವಿದರು

ತುಳು ರಂಗಭೂಮಿಯ ಕಲಾವಿದರು

ಕಲಾವಿದರಾಗಿ ತುಳು ರಂಗಭೂಮಿಯ ಪ್ರಖ್ಯಾತರೆಲ್ಲರೂ ಜತೆಗೂಡಿರುವುದು ದೊಡ್ಡ ಪ್ಲಸ್ ಪಾಯಿಂಟ್. ಒಂದು ಉತ್ತಮ ಕಥೆ, ಸೆಂಟಿಮೆಂಟ್, ಸಸ್ಪೆನ್ಸ್, ಹಾಸ್ಯ ಹೀಗೆ ಒಂದು ಉತ್ತಮ ಸಿನಿಮಾಕ್ಕೆ ಏನೆಲ್ಲ ಬೇಕಾಗಿವೆಯೋ ಅವೆಲ್ಲವುಗಳಿಗೂ ಮದಿಮೆಯಲ್ಲಿ ಅವಕಾಶ ನೀಡಲಾಗಿದೆ.

ಈ ಸಿನಿಮಾದಲ್ಲಿ ಫೈಟ್ ಇರುತ್ತಾ ಇರಲ್ವಾ?

ಈ ಸಿನಿಮಾದಲ್ಲಿ ಫೈಟ್ ಇರುತ್ತಾ ಇರಲ್ವಾ?

ಇದು ಕೊಡಿಯಾಲ್ ಬೈಲ್ ಅವರ ಹಿಟ್ ನಾಟಕ ಮದಿಮೆಯ ಕೆಲವು ಉತ್ತಮ ಅಂಶಗಳನ್ನು ಉಳಿಸಿಕೊಂಡು, ಅದಕ್ಕೆ ಮತ್ತಷ್ಟು ಪೂರಕ ಮತ್ತು ಅಗತ್ಯ ವಿಷಯಗಳನ್ನು ಸೇರಿಸಿಕೊಂಡು ತಯಾರಿಸಿರುವ ಸಿನಿಮಾ ಆಗಿದೆ. ಸಿನಿಮಾದಲ್ಲಿ ಫೈಟ್ ಇಲ್ಲವೇ ಎಂದು ಕೊಡಿಯಾಲ್ ಬೈಲ್ ರಲ್ಲಿ ಕೇಳಿದಾಗ ಸಿನಿಮಾ ತೆರೆ ಕಂಡಾಗ ಟಿಕೇಟ್ ಗಾಗಿ ಥಿಯೇಟರ್ ನಲ್ಲೇ ಫೈಟ್ ನಡೆಯಲಿದೆ ಎಂದು ಮಾರ್ಮಿಕವಾಗಿ ಉತ್ತರಿಸುತ್ತಾರೆ.

ಲಿಖಿತ್ ಶೆಟ್ಟಿ ಮತ್ತು ರಮ್ಯಾ ಬಾರ್ನೆ ನಾಯಕ ನಾಯಕಿ

ಲಿಖಿತ್ ಶೆಟ್ಟಿ ಮತ್ತು ರಮ್ಯಾ ಬಾರ್ನೆ ನಾಯಕ ನಾಯಕಿ

ಅಸಲ್ ನ ಯಶಸ್ವಿ ಜೋಡಿ ಲಿಖಿತ್ ಶೆಟ್ಟಿ ಮತ್ತು ರಮ್ಯಾ ಬಾರ್ನೆ ಅವರು 'ಮದಿಮೆ' ಸಿನಿಮಾದಲ್ಲಿ ನಾಯಕ ನಾಯಕಿಯರಾಗಿದ್ದಾರೆ. ಉಮೇಶ್ ಮಿಜಾರ್ ಜೋಡಿಯಾಗಿ ನವ್ಯಾ ನಟಿಸಿದ್ದಾರೆ, ಇನ್ನುಳಿದಂತೆ ಉಷಾ ಭಂಡಾರಿ, ಬೋಜರಾಜ್ ವಾಮಂಜೂರು, ಸಂತೋಷ್ ಶೆಟ್ಟಿ, ಚೇತನ್ ರೈ ಮಾಣಿ, ರಾಘವೇಂದ್ರ ರೈ, ಸಂದೀಪ್ ಶೆಟ್ಟಿ ಮಾಣಿ ಬೆಟ್ಟು, ಪ್ರಸನ್ನ ಬೈಲೂರು, ಸುನೀಲ್ ನೆಲ್ಲಿಗುಡ್ಡೆ, ಮಂಜು ರೈ ಮೂಳೂರು, ರೋಹಿಣಿ ಜಗರಾಮ್, ರಮೇಶ್ ಕಲ್ಲಡ್ಕ, ದಯಾನಂದ ಕುಲಾಲ್ ಉರ್ವ, ಅರುಣ್ ಶೆಟ್ಟಿ ಮಂಗಳಾದೇವಿ, ಯಾದವ ಮಣ್ಣಗುಡ್ಡೆ, ವಿನೋದ್ ಎಕ್ಕೂರು, ಮಂಗೇಶ್ ಭಟ್ ವಿಟ್ಲ, ಹರೀಶ್ ಮೂಡಬಿದ್ರೆ ಮೊದಲಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ.

ಮದಿಮೆ 200ರ ಗಡಿ ದಾಟಿ ಡಬಲ್ ಸೆಂಚುರಿ ದಾಖಲಿಸುತ್ತಾ?

ಮದಿಮೆ 200ರ ಗಡಿ ದಾಟಿ ಡಬಲ್ ಸೆಂಚುರಿ ದಾಖಲಿಸುತ್ತಾ?

ಕೊಡಿಯಾಲ್ ಬೈಲ್ ಅವರ ಹಿಂದಿನ ಸಿನಿಮಾ 175 ಪ್ಲಸ್ ದಿನಗಳ ಪ್ರದರ್ಶನ ಕಂಡಿರುವುದು ದಾಖಲೆಯಾಗಿದ್ದರೂ, ಮದಿಮೆ 200ರ ಗಡಿ ದಾಟಿ ಡಬಲ್ ಸೆಂಚುರಿ ದಾಖಲಿಸಿ ತನ್ನ ದಾಖಲೆಯನ್ನು ತಾನೇ ಮುರಿಯುವಂತಾದರೆ ವಿಜಯಕುಮಾರ್ ಅವರಿಗೆ ಯಾರೂ ಸರಿಸಾಠಿಯಿಲ್ಲ ಎಂಬುದು ಸಾಬೀತಾಗಲಿದೆ.

More from Filmibeat

English summary
Tulu movie Madime' by the team of Vijayakumar Kodialbail, is all set to hit the silver screen in September. The movie is a big budget movie presented by Sujatha Balakrishna Shetty and produced by Megina Balakrishna Shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X