'ಮೈ ನೇಮ್ ಈಸ್ ಅಣ್ಣಪ್ಪ' ಚಿತ್ರದ ಹೊಸ ಹಾಡು ಬಂತು
Recommended Video

'ಪಿಲಿಬೈಲ್ ಯಮುನಕ್ಕ' ಚಿತ್ರ ತಂಡದ ಎರಡನೇ ಕಾಣಿಕೆ 'ಮೈ ನೇಮ್ ಈಸ್ ಅಣ್ಣಪ್ಪ' ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈಗಾಗಲೇ ಪೋಸ್ಟರ್ ಮತ್ತು ಹಾಡುಗಳಿಂದ ಗಮನ ಸೆಳೆಯುತ್ತಿರುವ ಈ ತುಳು ಚಿತ್ರ ಈಗ ಹೊಸ ಹಾಡನ್ನ ರಿಲೀಸ್ ಮಾಡಿ ಮೋಡಿ ಮಾಡುತ್ತಿದೆ.
ಮಯೂರ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಮಯೂರ್ ಸಾಹಿತ್ಯ ನೋಡ್ತಿದ್ರೆ, ಕೋಸ್ಟಲ್ ವುಡ್ ಗೊಬ್ಬ ಮರಿ ಕಾಯ್ಕಿಣಿ ಹುಟ್ಟಿಕೊಂಡ ಹಾಗಾಯ್ತು ಅಂತನಿಸ್ತದೆ. ಅಷ್ಟೊಂದು ರೊಮಾಂಟಿಕ್ ಆಗಿದೆ ಈ ಹಾಡಿನ ಸಾಲುಗಳು..
"ಅವ್ವು ಎಂಚಯೇ ಏರ್ ಈತ್ ರೊಮಾಂಟಿಕ್.." (ಅದ ಹ್ಯಾಗ್ರೀ ನೀವ್ ಇಷ್ಟೊಂದ್ ರೊಮಾಂಟಿಕ್) ಅಂತ ಕಾಲೆಳೆದ್ರೆ, "ನಾನಲ್ಲ. ನನ್ನ ಹಾಡಷ್ಟೇ ರೊಮಾಂಟಿಕ್" ಅಂತ ನಾಚಿ ನೀರಾಗ್ತಾರೆ ಮಯೂರ್. ಇನ್ನು 'ನಿನ್ನ ಪೂಜೆಗೆ ಬಂದೆ' ಅಂತ ಕನ್ನಡಿಗರನ್ನು ಹುಚ್ಚೆದ್ದು ಕುಣಿಸಿದ್ದ ಕನ್ನಡ ಸಂಗೀತ ಲೋಕದ ದಿಗ್ಗಜ ರಘು ದೀಕ್ಷಿತ್ ಸಿನಿಮಾಕ್ಕಾಗಿ ಒಂದು ಹಾಡು ಹಾಡಿದ್ದಾರೆ ಅಂತ ಬಿಗ್ ಸರ್ ಪ್ರೈಜ್ ಕೊಡ್ತಾರೆ ಮಯೂರ್. ಆದ್ರೆ ಅದ್ಯಾವ ಹಾಡು ಅಂತ ಇನ್ನೂ ರಿವೀಲ್ ಮಾಡಿಲ್ಲ. ಚಿತ್ರದಲ್ಲಿ ವಿಜಯ ಪ್ರಕಾಶ್ ಕೂಡ ಒಂದು ಹಾಡನ್ನ ಹಾಡಿದ್ದಾರೆ.

ಮಂಜು ರೈ ಮೂಳೂರ್, ನವೀನ್ ಡಿ ಪಡೀಲ್, ಶುಭಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮೈ ನೇಮ್ ಈಸ್ ಅಣ್ಣಪ್ಪ' ಚಿತ್ರವನ್ನ ಮಯೂರ್ ನಿರ್ದೇಶನ ಮಾಡಿದ್ದು, ಕಿಶೋರ್ ಶೆಟ್ಟಿ ಸಂಗೀತ ನೀಡಿದ್ದಾರೆ. ಡಿ ಕಿಶೋರ್ ಶೆಟ್ಟಿ ಅವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











