twitter
    For Quick Alerts
    ALLOW NOTIFICATIONS  
    For Daily Alerts

    ಆಗಸ್ಟ್ 14ರಿಂದ ಕರಾವಳಿ ಜಿಲ್ಲೆಗೆ ಬರಲಿದ್ದಾನೆ "ಸೂಪರ್ ಮರ್ಮಯೆ"

    |

    ಆನಂದ್ ಫಿಲಂಸ್ ಲಾಂಛನದಲ್ಲಿ ರಾಮ್ ಶೆಟ್ಟಿ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೂಪರ್ ಮರ್ಮಯೆ (ಸೂಪರ್ ಅಳಿಯ) ತುಳು ಚಲನಚಿತ್ರ ಶುಕ್ರವಾರದಿಂದ (ಆಗಸ್ಟ್ 14) ಕರಾವಳಿ ಜಿಲ್ಲೆಯ 10 ಥಿಯೇಟರುಗಳಲ್ಲಿ ಏಕ ಕಾಲದಲ್ಲಿ ತೆರೆಕಾಣಲಿದೆ.

    ಮಂಗಳೂರಿನ ಜ್ಯೋತಿ, ಬಿಗ್ ಸಿನೆಮಾಸ್, ಸಿನಿಪೋಲಿಸ್, ಪಿವಿಆರ್, ಉಡುಪಿಯ ಕಲ್ಪನಾ, ಮೂಡಬಿದ್ರಿಯ ಅಮರ ಶ್ರೀ, ಕಾರ್ಕಳದ ರಾಧಿಕಾ, ಪುತ್ತೂರಿನ ಅರುಣಾ, ಬೆಳ್ತಂಗಡಿಯ ಭಾರತ್ ಹಾಗೂ ಬಿ.ಸಿ.ರೋಡ್‍ನ ನಕ್ಷತ್ರ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲಿದೆ.

    ತುಳುವರು ಏನಿದ್ದರೂ ಹಾಸ್ಯದ ಆ್ಯಟ್ರಾಕ್ಷನ್ ಎಂಬುದು ಮನದಟ್ಟಾಗಿರುವುದರಿಂದ ಸೂಪರ್ ಮರ್ಮಯೆ ಎಂಬ ಹೆಸರಿನಲ್ಲಿ ಪುಲ್ ಕಾಮಿಡಿ ಚಿತ್ರವನ್ನು ಸಿದ್ದಪಡಿಸಿದ್ದೇನೆ ಎಂದು ರಾಮ್ ಶೆಟ್ಟಿ ಹೇಳಿದ್ದಾರೆ.

    ಕುಟುಂಬ ಕುಟುಂಬದೊಳಗೆ ನಡೆಯುವ ಆಂತರಿಕ ಕಲಹಕ್ಕೆ ಹಾಸ್ಯದ ಟಚ್ ನೀಡಲಾಗಿದೆ. ಮಾವ ಅಳಿಯನ ಸಂಘರ್ಷದ ಚಿತ್ರಕಥೆಯಲ್ಲಿ ವಿದ್ಯಾವಂತ, ಅವಿದ್ಯಾವಂತರ ವ್ಯತ್ಯಾಸಗಳನ್ನು ಹಾಸ್ಯರೂಪದಲ್ಲಿ ತೋರಿಸಲಾಗಿದೆ.

    ಪಂಚರಂಗಿ ಪೊಂಪೊಂ ಖ್ಯಾತಿಯ ಕಾಮಿಡಿ ಕಿಂಗ್ ಮೀನನಾಥ ರಾಘವೇಂದ್ರ ರೈ ಚಿತ್ರದಲ್ಲಿ ನಟಿಸಿದ್ದಾರೆ. ಗಂಭೀರ ಪಾತ್ರಧಾರಿಯಾಗಿ ನಗಿಸುವ ವೈಶಿಷ್ಟ್ಯವನ್ನು ಮಾವನ ಪಾತ್ರಧಾರಿ ಗೋಪಿನಾಥ ಭಟ್ ಪ್ರದರ್ಶಿಸಿದ್ದಾರೆ.

    ಇವರಿಗೆ ಸಾಥ್ ನೀಡುತ್ತಿದ್ದಾರೆ ನವೀನ್ ಪಡೀಲ್, ಭೋಜರಾಜ ವಾಮಂಜೂರು ಅರವಿಂದ ಬೋಳಾರ್ ಮುಂತಾದ ಹಾಸ್ಯ ನಟರ ದಂಡೇ ಇದೆ. ಹಾಗಾಗಿ ಸಿನಿಮಾದಲ್ಲಿ ಕಾಮಿಡಿಗೆ ಕೊರತೆ ಎನ್ನುವುದೇ ಇರುವುದಿಲ್ಲ. ಶಿವಧ್ವಜ್‍ ಅವರದ್ದು ಚಿತ್ರದಲ್ಲಿ ಅತಿಥಿ ಪಾತ್ರ. ನಾಯಕಿಯ ಪಾತ್ರದಲ್ಲಿ ದಿವ್ಯಶ್ರೀ ಅಭಿನಯಿಸಿದ್ದಾರೆ ಎಂದು ರಾಮ್ ಶೆಟ್ಟಿ ಚಿತ್ರದ ಬಗ್ಗೆ ವಿವರಣೆ ನೀಡಿದ್ದಾರೆ.

    ಕ್ಯಾಮರಾಮ್ಯಾನ್

    ಕ್ಯಾಮರಾಮ್ಯಾನ್

    ರಾಮ್ ಶೆಟ್ಟರಿಗೆ ಬಾಲಿವುಡ್‍ನಲ್ಲಿ ಸಾಥ್ ನೀಡುತ್ತಿದ್ದ ಕ್ಯಾಮರಾಮನ್ ಈಜನ್ ಸೂಪರ್ ಮರ್ಮಯೆ ಚಿತ್ರದ ಕ್ಯಾಮರಮ್ಯಾನ್. ಕಳೆದ ಎರಡು ವರ್ಷಗಳಿಂದ ಶ್ರದ್ಧೆಯಿಂದ ಸಿದ್ದಪಡಿಸಿದ ಸ್ಕ್ರಿಪ್ಟಿಗೆ ಮಾತಿನ ರೂಪ ಕೊಟ್ಟವರು ಖ್ಯಾತ ನಾಟಕ ರಚನೆಕಾರ ನವೀನ್ ಶೆಟ್ಟಿ ಅಳಕೆ.

    ಸಂಗೀತ

    ಸಂಗೀತ

    ಕಡಲ ಮಗೆ ಖ್ಯಾತಿಯ ಚಂದ್ರಕಾಂತ್ ಶೆಟ್ಟಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಶಶಿರಾಜ್ ಕಾವೂರು ಸಾಹಿತ್ಯದ ಐದು ಹಾಡುಗಳು ಚಿತ್ರದಲ್ಲಿವೆ. ಸಚಿನ್ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಕಲೇಶಪುರದ ಸಹಜ ಪರಿಸರದಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆದಿದೆ.

    ಲಕ್ಷ್ಮಣ್ ಕಲಾ ನಿರ್ದೇಶಕರಾಗಿ

    ಲಕ್ಷ್ಮಣ್ ಕಲಾ ನಿರ್ದೇಶಕರಾಗಿ

    ರಾಮ್ ಶೆಟ್ಟಿ ಸಹೋದರ ಲಕ್ಷ್ಮಣ್ ಕಲಾ ನಿರ್ದೇಶಕರಾಗಿ ಚಿತ್ರದ ಅಂದ ಮತ್ತಷ್ಟು ಹೆಚ್ಚಿಸಿದ್ದಾರೆ. ಶೃದ್ಧಾ ಸಾಲಿಯಾನ್, ಶೋಭಾ ರೈ, ಕರ್ನೂರ್ ಮೋಹನ್ ರೈ, ಆ್ಯಗ್ನೆಲ್ ರಾಡ್ರಿಗಸ್, ಪ್ರದೀಪ್ ಆಳ್ವಾ, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಗಣೇಶ್ ಮಲ್ಲಿ ಮೊದಲಾದವರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

    ರಾಮ್ ಶೆಟ್ಟಿ ನಿರ್ಮಾಣ

    ರಾಮ್ ಶೆಟ್ಟಿ ನಿರ್ಮಾಣ

    ಈ ಹಿಂದೆ ಮೂರು ತುಳು ಚಿತ್ರಗಳನ್ನು ರಾಮ್ ಶೆಟ್ಟರೇ ನಿರ್ಮಿಸಿ ನಿರ್ದೇಶಿಸಿದ್ದರು. ಈ ಬಾರಿ ಅವರು ಅಡ್ಯಾರು ಮಾಧವ್ ನಾಯಕರ ಜೊತೆಗೂಡಿ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ದೀಪಕ್ ಶೆಟ್ಟಿ ಕುದ್ರಾಡಿ, ಜಗದೀಶ್ ಶೆಟ್ಟಿ ಸರ್ವಾಣಿ, ಪುರುಷೋತ್ತಮ ಭಂಡಾರಿ ಅಡ್ಯಾರ್ ಈ ಸಿನಿಮಾಕ್ಕಾಗಿ ದುಡಿದಿದ್ದಾರೆ.

    ತುಳು, ಕನ್ನಡಕ್ಕೆ ಚಿತ್ರೋದ್ಯಮಕ್ಕೆ ರಾಮ್ ಶೆಟ್ಟಿ ಹೊಸಬರಲ್ಲ

    ತುಳು, ಕನ್ನಡಕ್ಕೆ ಚಿತ್ರೋದ್ಯಮಕ್ಕೆ ರಾಮ್ ಶೆಟ್ಟಿ ಹೊಸಬರಲ್ಲ

    ರಾಮ್ ಶೆಟ್ಟಿ ತುಳು ಚಿತ್ರರಂಗಕ್ಕೆ ಹೊಸಬರೇನಲ್ಲ ಇವರು ಈಗಾಗಲೇ ಮೂರು ತುಳು ಚಿತ್ರಗಳನ್ನು ನೀಡಿರುವವರು. 2012ರಲ್ಲಿ ಬಂಗಾರ್ದ ಕುರಲ್ ಭಕ್ತಿ ಪ್ರಧಾನ ಚಿತ್ರ ನಿರ್ಮಿಸಿದ್ದ ಶೆಟ್ಟರು 1982 ಮತ್ತು 83ರಲ್ಲಿ ಬದ್ಕರೆ ಬುಡ್ಲೆ ಮತ್ತು ದಾರೆದ ಸೀರೆ ನಿರ್ಮಿಸಿದ್ದರು. ಜೊತೆಗೆ ಕನ್ನಡ ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿಯೂ ರಾಮ್ ಶೆಟ್ಟಿ ದುಡಿದಿದ್ದಾರೆ.

    English summary
    Tulu movie Super Marmaye releasing on August 14 in ten theaters across Dakshina Kannada and Udupi district.
    Wednesday, August 12, 2015, 20:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X