ತುಳು ಸಿನಿಮಾ 'ಎನ್ನ' ಕರಾವಳಿಯಾದ್ಯಂತ ಬಿಡುಗಡೆ

ಗ್ಲೋರಿಯಸ್ ಆಂಜೆಲೋರ್ ಪ್ರೋಡಕ್ಷನ್ ಲಾಂಛನದಲ್ಲಿ ಕ್ಯಾನೆಟ್ ಮಾತಾಯಸ್ ಪಿಲಾರ್ ನಿರ್ಮಾಣದ 'ಎನ್ನ' ತುಳು ಚಿತ್ರ ಇಂದು ಕರಾವಳಿಯಾದ್ಯಂತ ಬಿಡುಗಡೆಯಾಗಿದೆ.

ಸಿನಿಮಾ ರಿಲೀಸ್ ಪ್ರಯುಕ್ತ ಮಂಗಳೂರಿನ ನಗರದ ಜ್ಯೋತಿ ಚಿತ್ರ ಮಂದಿರದಲ್ಲಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಸಿನಿಮಾವನ್ನು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ತುಳುವಿನಲ್ಲಿ ತೆರೆಕಾಣುತ್ತಿರುವ 114ನೇ ಸಿನಿಮಾ 'ಎನ್ನ' ಪ್ರೇಮಕತೆಯನ್ನೊಳಗೊಂಡಿದೆ. 173 ಕಲಾವಿದರು 'ಎನ್ನ' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಅನೇಕ ಮಂದಿ ಹೊಸಬರಿಗೆ ಇಲ್ಲಿ ಅವಕಾಶ ನೀಡಲಾಗಿದೆ ಎನ್ನುವುದು ವಿಶೇಷ. ಕೋಡಿಕಲ್ ವಿಶ್ವನಾಥ ಈ ಚಿತ್ರ ನಿರ್ದೇಶಿಸಿದ್ದಾರೆ.

Tulu Movie Yenna Releasing Today

ಸಮಾರಂಭದಲ್ಲಿ ತುಳು ಚಲನ ಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ‍ಬೈಲ್, ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ನಿರ್ಮಾಪಕರಾದ ಕ್ಯಾನೆಟ್ ಮಾತಾಯಸ್ ಪಿಲಾರ್, ಮ್ಯಾಕ್ಸಿಮ್ ಡಿ' ಸೋಜಾ, ನಿಶಾ ಪಿರೇರಾ, ಎನ್.ಜೆ ವಿನೀತ್ ಕುಮಾರ್, ಶ್ರುತಿ ಪೂಜಾರಿ ಮ್ಯಾಕ್ಸಿಮ್ ಪಿರೇರಾ, ರಾಜೇಶ್ ಕುಡ್ಲ, ಪ್ರಶಾಂತ್ ಸಿ.ಕೆ ಅಶ್ಮಿತ್ ರಾಜ್, ವೈಶಾಲಿ ಎಸ್ ಉಡುಪಿ, ಲೋಯ್ ವೆಲೆಂಟಿನ್, ಚೇತನ್ ಪಿಲಾರ್ ಮೊದಲಾದವರು ಉಪಸ್ಥಿತರಿದ್ದರು.

'ಎನ್ನ' ಸಿನಿಮಾ ಮಂಗಳೂರಿನಲ್ಲಿ ಜ್ಯೋತಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲೀಸ್ ಉಡುಪಿಯಲ್ಲಿ ಅಲಂಕಾರ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುರತ್ಕಲ್ ‍ನಲ್ಲಿ ನಟರಾಜ್, ಮೂಡುಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್ , ಕಾಸರಗೋಡಿನಲ್ಲಿ ಕೃಪಾ ಚಿತ್ರಾಮಂದಿರ ಪ್ರದರ್ಶನ ಕಾಣುತ್ತಿದೆ.

More from Filmibeat

English summary
Tulu movie Yenna releasing today (february 14th). the movie directed by kodikal vishwanath.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X