»   » ಪತ್ರಕರ್ತರ ತುಂಟಾಟ : ಇದು ಸದ್ದಿಲ್ಲದ ರೀಮೇಕ್‌ ಆಟ !

ಪತ್ರಕರ್ತರ ತುಂಟಾಟ : ಇದು ಸದ್ದಿಲ್ಲದ ರೀಮೇಕ್‌ ಆಟ !

Posted By: Staff
Subscribe to Filmibeat Kannada
Tuntata
ತುಂಟಾಟ ರೀಮೇಕಾ?
ಫಸ್ಟ್‌ ಇಂಪ್ರೆಷನ್‌ ನೋಡಿದರೆ ಅಹುದಹುದು. ಸಾಲದ್ದಕ್ಕೆ ಧ್ರುವ ಚಿತ್ರಕ್ಕೆ ಗೊತ್ತಾಗಿರುವ ಬಾಲ್ಡ್‌ವಿನ್‌ ಬಾಲೆ ಶರೀನ್‌ ಈ ಚಿತ್ರದ ನಾಯಕಿ ಪಟ್ಟಕ್ಕೆ ಒಲ್ಲೆ ಅಂದಿದ್ದರಂತೆ. ಕಾರಣ ಇದು ರೀಮೇಕ್‌!

ಪತ್ರಕರ್ತರ ಪುಟ್ಟ ಬಳಗ (ನಿರ್ಮಾಪಕ- ರಾಜಹನ್ಸ್‌ ಪ್ರಕಾಶಕ ಹಾಗೂ ಪ್ರಿಯಾಂಕ ಮ್ಯಾಗಜೀನ್‌ ಸಂಪಾದಕ ಬಾಲಚಂದ್ರ, ಸಹ ನಿರ್ಮಾಪಕ- ಈ ಸಂಜೆ ಸಂಪಾದಕ ವೆಂಕಟೇಶ್‌ ಸೋದರ ನಾಗರಾಜು, ನಿರ್ದೇಶನ- ಲಂಕೇಶ್‌ ಪುತ್ರ ಇಂದ್ರಜಿತ್‌) ಇದು ರೀಮೇಕ್‌ ಅಂತ ಈವರೆಗೆ ಬಾಯಿ ತಪ್ಪಿ ಕೂಡ ಹೇಳಿಲ್ಲ. ನಾಯಕಿಯರಾದ ರೇಖಾ-ಛಾಯಾಸಿಂಗ್‌, ನಾಯಕ ಅನಿರುದ್ಧ್‌ ಎಲ್ಲರೂ ವಿವಿಧ ಟಿವಿ ಚಾನೆಲ್‌ಗಳಿಗೆ ಚಿತ್ರದ ಸೆಟ್‌ನಲ್ಲಿ ಮಾತಾಡಿದ್ದರೂ, ರೀಮೇಕ್‌ ಅಂತ ಖಂಡಿತ ಬಾಯಿ ಬಿಟ್ಟಿಲ್ಲ.

ಇಬ್ಬರು ಯುವ ನಾಯಕಿಯರು. ಬ್ಯಾಸ್ಕೆಟ್‌ ಬಾಲು. ರೇಖಾಗೆ ಸ್ವಿಮ್ಮಿಂಗ್‌ ಸೂಟು. ನಾಯಕ- ನಾಯಕಿಯರ ಸುತ್ತ ಪ್ರೇಮ ಕಥೆ. ಚೆಲ್ಲಾಟಕ್ಕೂ ಕೊರೆಯಿಲ್ಲ. ಛಾಯಾಸಿಂಗ್‌ ಅಳುಮುಂಜಿಯಾಗಬೇಕು. ಇವೆಲ್ಲಾ ಅಂಶಗಳು ಯಾವ ಚಿತ್ರದಲ್ಲಿವೆ? ಇದರ ಕಥಾ ಹಂದರ ಬೇರೆ ಭಾಷೆಯ ಯಾವ ಚಿತ್ರವನ್ನು ಹೋಲುತ್ತದೆ?

ಉತ್ತರ- ಕರಣ್‌ ಜೋಹರ್‌ ನಿರ್ದೇಶನದ ಚೊಚ್ಚಲ ಹಿಂದಿ ಚಿತ್ರ 'ಕುಛ್‌ ಕುಛ್‌ ಹೋತಾ ಹೈ". ಅದರಲ್ಲಿ ಶಾರುಖ್‌ ಖಾನ್‌, ರಾಣಿ ಮುಖರ್ಜಿ, ಕಾಜೋಲ್‌ ಅಭಿನಯಿಸಿದ್ದರು. ಚಿತ್ರ ಸೂಪರ್‌ ಡ್ಯೂಪರ್‌ ಹಿಟ್‌ ಆಗಿತ್ತು. ''ಯಥಾವತ್ತು ಟೈಟಲ್‌ ಕೊಟ್ಟರೆ, 'ಏನೇನೋ ಆಗುತ್ತೆ" ಅಥವಾ 'ಹ್ಯಾಗೆ ಹ್ಯಾಗೋ ಆಗುತ್ತೆ " ಎಂದಿರಬೇಕಿತ್ತು. ಅದು ಬಾಲಿಶ ಎಂಬ ಕಾರಣಕ್ಕೆ ತುಂಟಾಟ ಆಗಿದೆ. ರೀಮೇಕ್‌ ಅಂತ ಹೇಳದೇ ಇರುವುದೇ ಒಂದು ತುಂಟಾಟವಾ?"" ಅಂತ ಕುಹಕ ಆಡುತ್ತಿರುವವರೂ ಸ್ಯಾಂಡಲ್‌ವುಡ್‌ನಲ್ಲಿ ಉಂಟು. ಇಂದ್ರಜಿತ್‌ ಅಥವಾ ಬಾಲಚಂದ್ರ ಇದಕ್ಕೆ ಉತ್ತರ ಕೊಡುವ ಗೊಡವೆಗೆ ಇನ್ನೂ

English summary
Kannada Karnataka cinema sandalwood indrajit,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada