»   » ಇಂದ್ರಜಿತ್‌ ತುಂಟಾಟ: ಪುಟ್ಟ ಪುಟ್ಟ ಬಟ್ಟೆಗೆ ಸೈ ಅಂದ ಛಾಯಾಸಿಂಗ್‌

ಇಂದ್ರಜಿತ್‌ ತುಂಟಾಟ: ಪುಟ್ಟ ಪುಟ್ಟ ಬಟ್ಟೆಗೆ ಸೈ ಅಂದ ಛಾಯಾಸಿಂಗ್‌

Posted By: Staff
Subscribe to Filmibeat Kannada
Tuntata
ಮೊದಲು ಪುಟ್ಟ ಪುಟ್ಟ ಬಟ್ಟೆ ತೊಟ್ಟಾಗ ಇರಿಸು ಮುರುಸಾಯಿತು. ಆಮೇಲೆ ದೃಶ್ಯಗಳ ಕಂಡಾಗ ನನ್ನ ಪಾತ್ರಕ್ಕೆ ಅಂಥ ಬಟ್ಟೆಯೇ ಸರಿ ಎನಿಸಿತು. ಆ ಬಟ್ಟೆಗಳಲ್ಲಿ ನಾನು ಚೆನ್ನಾಗಿ ಕಾಣುತ್ತಿದ್ದೆ ಕೂಡ !

ತುಂಟಾಟ ಚಿತ್ರೀಕರಣ ಮುಗಿದ ಖುಷಿಯಲ್ಲಿ ನವ ನಾಯಕಿ ಛಾಯಾ ಸಿಂಗ್‌ ಆಡಿರುವ ಮಾತಿದು. 'ಮುನ್ನುಡಿ"ಯಲ್ಲಿ ತಾರಾ ಮಗಳಾಗಿ ಗೌನಿನ ಒಳಗಿನಿಂದ ಅಪರೂಪಕ್ಕೊಮ್ಮೆ ಮುಖ ತೋರಿದ ಚೆಲುವೆ, ಸರೋಜಿನಿ ಧಾರಾವಾಹಿಯಲ್ಲಿ ಚೂಡೀದಾರ ತೊಟ್ಟು ಮಿಂಚಿದ ಭರವಸೆಯ ನಟಿ ಇದೀಗ ಸಿನಿಮಾ ಜಗತ್ತಿನ ಉಡುಗೆಗೆ ಒಗ್ಗಿಕೊಂಡಿದ್ದಾರೆ. ತುಂಟಾಟದಲ್ಲಿ ಇವರ ಅಭಿನಯ ಕೂಡ ಸಖತ್ತಾಗಿದೆ ಎಂದು ನಿರ್ದೇಶಕ ಇಂದ್ರಜಿತ್‌ ಶಹಬ್ಭಾಸ್‌ ಹೇಳಿದ್ದಾರೆ.

ರೇಖಾ ಈಜುಡುಗೆ : ಇದೇ ಚಿತ್ರದ ಇನ್ನೊಬ್ಬ ನಾಯಕಿ ರೇಖಾ (ಚಿತ್ರಾ) ಈಜುಡುಗೆ ತೊಡಲು ಮೊದಲು ಒಲ್ಲೆ ಅಂದರು ಎಂಬ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿಬಂದಿತ್ತು. ಆದರೀಗ ಅವರು ಹೇಳಿರುವುದು- ಅದು ಗಾಳಿಮಾತು. ನಿರ್ದೇಶಕರು ಹೇಳಿದಂತೆ ಮಾಡುವುದೇ ನಮ್ಮ ಕೆಲಸ. ನಾನು ಮಾಡಿದ್ದೂ ಅದನ್ನೇ!

ಅತಿಥಿ ಸುದೀಪ್‌ : ಚಿತ್ರದಲ್ಲಿ ಸುದೀಪ್‌ ಕೂಡ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಲೇಸಾರ್‌ ಬೆಳಕಿನಲ್ಲಿ ನರ್ತಿಸಿದ್ದಾರೆ ಕೂಡ. ತಮ್ಮ ಜೊತೆ ಟೆನ್ನಿಸ್‌ ಆಡುತ್ತಿದ್ದ ಇಂದ್ರಜಿತ್‌ ಜೊತೆ ಗೆಳೆತನ ನಿಭಾಯಿಸುವ ಸಲುವಾಗಿ ಸುದೀಪ್‌ ಈ ಪಾತ್ರ ಮಾಡಲು ಒಪ್ಪಿಕೊಂಡರಂತೆ.

ಇಂದ್ರಜಿತ್‌ ನೆಚ್ಚಿನ ಆಟ ಕ್ರಿಕೆಟ್ಟು, ರೇಖಾ ಗ್ಲಾಮರ್ರು, ಛಾಯಾಸಿಂಗ್‌ ಮೊನಚು ನಟನೆ, ಕುಣಿಸುವ ಸಂಗೀತ ಎಲ್ಲಾ ತುಂಟಾಟದಲ್ಲಿದೆಯಂತೆ. ಇಷ್ಟಾದರೂ ಇದು ಕುಛ್‌ ಕುಛ್‌ ಹೋತಾ ಹೈ ರೀಮೇಕ್‌ ಅಂತ ಚಿತ್ರ ತಂಡದ ಯಾರೂ ಹೇಳಿಕೊಂಡಿಲ್ಲ. ನೆನಪಿದೆಯಾ- ಆ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಕೂಡ ಸುದೀಪ್‌ ಥರದ್ದೇ ಚಿಕ್ಕ ಪಾತ್ರ ವಹಿಸಿದ್ದರು.

English summary
Tuntata film Shooting completed : Sudeep has played a guest role
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada