For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಗ್ನಿ ಸಾಕ್ಷಿ' ನಟ ವಿಜಯ್ ಸೂರ್ಯ

  |
  ಚೈತ್ರಾರನ್ನು ಅಗ್ನಿಸಾಕ್ಷಿಯಾಗಿ ಕೈ ಹಿಡಿದ ವಿಜಯ್‍ಸೂರ್ಯ | FILMIBEAT KANNADA

  ಕಿರುತೆರೆಯ ಹ್ಯಾಂಡ್ಸಮ್ ನಟ.. ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ವಿಜಯ್ ಸೂರ್ಯ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. 'ಅಗ್ನಿ ಸಾಕ್ಷಿ' ಖ್ಯಾತಿಯ ಸಿದ್ಧಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಇವತ್ತು ಹೊಸ ಜೀವನಕ್ಕೆ ಅಡಿಯಿಟ್ಟಿದ್ದಾರೆ.

  ಪ್ರೇಮಿಗಳ ದಿನದಂದೇ ಡಿಂಪಲ್ ಹುಡುಗ ವಿಜಯ್ ಸೂರ್ಯ ವಿವಾಹ ಮಾಡಿಕೊಂಡಿದ್ದಾರೆ. ಆದ್ರೆ, ಅವರದ್ದೇನೂ ಲವ್ ಮ್ಯಾರೇಜ್ ಅಲ್ಲ. ಕುಟುಂಬದವರು ನೋಡಿದ ಹೆಣ್ಣನ್ನೇ ವಿಜಯ್ ಸೂರ್ಯ ಕೈಹಿಡಿದಿದ್ದಾರೆ.

  ತಮ್ಮ ದೂರದ ಸಂಬಂಧಿ ಚೈತ್ರಾ ಎಂಬುವರ ಜೊತೆಗೆ ವಿಜಯ್ ಸೂರ್ಯ ಸಪ್ತಪದಿ ತುಳಿದಿದ್ದಾರೆ. ವಿಜಯ್ ಸೂರ್ಯ-ಚೈತ್ರಾ ವಿವಾಹ ಮಹೋತ್ಸವದ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ. ನೋಡಿರಿ...

  ವಿಜಯ್ ಸೂರ್ಯ-ಚೈತ್ರಾ ಮದುವೆ

  ವಿಜಯ್ ಸೂರ್ಯ-ಚೈತ್ರಾ ಮದುವೆ

  ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಕಿರುತೆರೆ ಕಲಾವಿದರ ಸಮ್ಮುಖದಲ್ಲಿ ಇಂದು ನಟ ವಿಜಯ್ ಸೂರ್ಯ-ಚೈತ್ರಾ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತು. ಹೊಸ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

  ಹುಡುಗಿಯರಿಗೆ ವಿಜಯ್ ಸೂರ್ಯ ಹಾರ್ಟ್ ಬ್ರೇಕಿಂಗ್ ನ್ಯೂಸ್: ಸದ್ಯದಲ್ಲೇ ಡಿಂಪಲ್ ಹುಡುಗನ ಮದುವೆ.!

  ಯಾರೀ ಚೈತ್ರಾ.?

  ಯಾರೀ ಚೈತ್ರಾ.?

  ನಟ ವಿಜಯ್ ಸೂರ್ಯ ಕುಟುಂಬಕ್ಕೆ ಚೈತ್ರಾ ದೂರದ ಸಂಬಂಧಿ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಚೈತ್ರಾ ಮತ್ತು ವಿಜಯ್ ಸೂರ್ಯ ಫ್ಯಾಮಿಲಿ ನಡುವೆ 9 ವರ್ಷಗಳಿಂದ ಪರಿಚಯ ಇದೆ. ಈ ಒಂಬತ್ತು ವರ್ಷಗಳಲ್ಲಿ ಚೈತ್ರಾ ರವರನ್ನು ವಿಜಯ್ ಸೂರ್ಯ ಭೇಟಿ ಮಾಡಿರುವುದು ಕೇವಲ ಎರಡು ಬಾರಿ.

  ನಟ ವಿಜಯ್ ಸೂರ್ಯಗೆ ಚಾಲೆಂಜ್ ಹಾಕಿದ 'ಅಗ್ನಿಸಾಕ್ಷಿ' ವೈಷ್ಣವಿ

  ಅಮ್ಮನ ಮೆಚ್ಚುಗೆಯಂತೆ ಮದುವೆ

  ಅಮ್ಮನ ಮೆಚ್ಚುಗೆಯಂತೆ ಮದುವೆ

  ಹಾಗ್ನೋಡಿದ್ರೆ, ಚೈತ್ರಾ ಅವರನ್ನು ಮೆಚ್ಚಿ ಮದುವೆ ಫಿಕ್ಸ್ ಮಾಡಿದ್ದು ವಿಜಯ್ ಸೂರ್ಯ ತಾಯಿ. ಜಾತಕ ಕೂಡಿ ಬಂದ ಕಾರಣ ಅಮ್ಮನ ಇಚ್ಛೆಗೆ ತಕ್ಕ ಹಾಗೆ ಚೈತ್ರಾ ಕೊರಳಿಗೆ ವಿಜಯ್ ಸೂರ್ಯ ತಾಳಿ ಕಟ್ಟಿದ್ದಾರೆ.

  ನಟ ವಿಜಯ್ ಸೂರ್ಯ ಹಾಗೂ ಕಾವ್ಯ ಶೆಟ್ಟಿ ಮಧ್ಯೆ ಅಂಥದ್ದೇನಿದೆ.?

  ಸಮಸ್ಯೆ ಬರಲ್ಲ.!

  ಸಮಸ್ಯೆ ಬರಲ್ಲ.!

  ಚೈತ್ರಾ ಅವರಿಗಿನ್ನೂ 23 ವರ್ಷ ವಯಸ್ಸು. ಆದರೂ ಪ್ರಬುದ್ಧವಾಗಿ ಚೈತ್ರಾ ಯೋಚಿಸುವುದರಿಂದ ತಮ್ಮ ವೃತ್ತಿಗೆ ತೊಡಕು ಉಂಟಾಗಲ್ಲ, ಗಾಸಿಪ್ ಗಳಿಂದ ತಮ್ಮ ಫ್ಯಾಮಿಲಿಗೆ ಯಾವುದೇ ಸಮಸ್ಯೆ ಆಗಲ್ಲ ಅಂತಾರೆ ವಿಜಯ್ ಸೂರ್ಯ.

  English summary
  TV Actor, Agnisakshi fame Vijay Surya got married to Chaitra today (Feb 14th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X