ಹುಡುಗಿಯರಿಗೆ ವಿಜಯ್ ಸೂರ್ಯ ಹಾರ್ಟ್ ಬ್ರೇಕಿಂಗ್ ನ್ಯೂಸ್: ಸದ್ಯದಲ್ಲೇ ಡಿಂಪಲ್ ಹುಡುಗನ ಮದುವೆ.!

Recommended Video

ಅಗ್ನಿಸಾಕ್ಷಿ ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹುಡುಗಿಯರಿಗೆ ಕೊಟ್ರು ಶಾಕಿಂಗ್ ಸುದ್ದಿ | FILMIBEAT KANNADA

'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆ-ಮನಗಳಿಗೆ ಲಗ್ಗೆ ಇಟ್ಟ ನಟ ವಿಜಯ್ ಸೂರ್ಯ. ನೋಡಲು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ವಿಜಯ್ ಸೂರ್ಯಗೆ ಫೀಮೇಲ್ ಫ್ಯಾನ್ಸ್ ಜಾಸ್ತಿ. ಅದೆಷ್ಟೋ ಹುಡುಗಿಯರ ಡ್ರೀಮ್ ಬಾಯ್ ಆಗಿರುವ ವಿಜಯ್ ಸೂರ್ಯ ಇದೀಗ ಯುವತಿಯರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

'ಅಗ್ನಿಸಾಕ್ಷಿ' ಹೀರೋ ವಿಜಯ್ ಸೂರ್ಯ ಮತ್ತು ವೈಷ್ಣವಿ ಮದುವೆ ಆಗುತ್ತಾರೆ ಎಂಬ ಸುದ್ದಿ ಈ ಹಿಂದೆ ಜಗಜ್ಜಾಹೀರಾಗಿತ್ತು. ಆದ್ರೆ, ''ನಾವಿಬ್ಬರು ಜಸ್ಟ್ ಫ್ರೆಂಡ್ಸ್'' ಎಂದು ವಿಜಯ್ ಸೂರ್ಯ ಮತ್ತು ವೈಷ್ಣವಿ ಹೇಳಿದ್ದರು.

ಈಗ ನೋಡಿದ್ರೆ, ಮದುವೆ ಆಗಲು ವಿಜಯ್ ಸೂರ್ಯ ಮನಸ್ಸು ಮಾಡಿದ್ದಾರೆ. ಆದ್ರೆ, ವೈಷ್ಣವಿ ರವರನ್ನಲ್ಲ. ಬದಲಾಗಿ ತಮ್ಮ ದೂರದ ಸಂಬಂಧಿ ಚೈತ್ರಾ ರನ್ನ. ಇದೇ ತಿಂಗಳು ಚೈತ್ರಾ ಎಂಬುವರ ಜೊತೆಗೆ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮುಂದೆ ಓದಿರಿ...

ಇದೇ ತಿಂಗಳು ವಿಜಯ್ ಸೂರ್ಯ ವಿವಾಹ

ಇದೇ ತಿಂಗಳು ವಿಜಯ್ ಸೂರ್ಯ ವಿವಾಹ

ಫೆಬ್ರವರಿ 14... ಅಂದ್ರೆ ಪ್ರೇಮಿಗಳ ದಿನದಂದು ನಟ ವಿಜಯ್ ಸೂರ್ಯ ಮದುವೆ ನಡೆಯಲಿದೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ತಮ್ಮ ದೂರದ ಸಂಬಂಧಿ ಚೈತ್ರಾ ರನ್ನ ವಿಜಯ್ ಸೂರ್ಯ ವಿವಾಹವಾಗಲಿದ್ದಾರೆ.

ಒಂಬತ್ತು ವರ್ಷಗಳ ಪರಿಚಯ.!

ಒಂಬತ್ತು ವರ್ಷಗಳ ಪರಿಚಯ.!

ಚೈತ್ರಾ ಮತ್ತು ವಿಜಯ್ ಸೂರ್ಯ ಕುಟುಂಬದ ನಡುವೆ 9 ವರ್ಷಗಳಿಂದ ಪರಿಚಯ ಇದೆ. ಎರಡು ಬಾರಿ ಚೈತ್ರಾ ರನ್ನ ವಿಜಯ್ ಸೂರ್ಯ ಭೇಟಿ ಮಾಡಿದ್ದಾರಂತೆ. ತಮ್ಮ ತಾಯಿಗೆ ಚೈತ್ರಾ ಇಷ್ಟ ಆಗಿರುವ ಕಾರಣ ಮದುವೆಗೆ ವಿಜಯ್ ಸೂರ್ಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಪ್ರಬುದ್ಧವಾಗಿ ಯೋಚಿಸುವ ಚೈತ್ರಾ

ಪ್ರಬುದ್ಧವಾಗಿ ಯೋಚಿಸುವ ಚೈತ್ರಾ

ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಚೈತ್ರಾಗೆ ಇನ್ನೂ 23 ವರ್ಷ ವಯಸ್ಸು. ಪ್ರಬುದ್ಧವಾಗಿ ಚೈತ್ರಾ ಯೋಚಿಸುವುದರಿಂದ ತಮ್ಮ ನಟನೆಯ ವೃತ್ತಿಗೆ ತೊಡಕು ಉಂಟಾಗಲ್ಲ ಎಂಬ ನಂಬಿಕೆ ಇದೆ ಅಂತಾರೆ ವಿಜಯ್ ಸೂರ್ಯ.

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್

ಮೋಸ್ಟ್ ಎಲಿಜಿಬಲ್ ಬ್ಯಾಚುಲರ್

ಕಿರುತೆರೆಯ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ವಿಜಯ್ ಸೂರ್ಯ ಇದೀಗ ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಜೀವನದ ಹೊಸ ಇನ್ನಿಂಗ್ಸ್ ಗೆ ಕಾಲಿಡುತ್ತಿರುವ ವಿಜಯ್ ಸೂರ್ಯಗೆ ನಮ್ಮ ಕಡೆಯಿಂದಲೂ ಶುಭಾಶಯಗಳು.

More from Filmibeat

English summary
TV Actor, Agnisakshi fame Vijay Surya to get married to Software Engineer Chaitra on Feb 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X