For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಜೀವ: 'ಮಂಗಳ ಗೌರಿ'ಯ ಗಂಡ ಇನ್ಮೇಲೆ 'ಅಲೆಕ್ಸಾಂಡರ್'

  |

  ಕಿರುತೆರೆ ಲೋಕದ ಪ್ರತಿಭಾವಂತ ಕಲಾವಿದರು ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿರುವುದು ಇದೇ ಮೊದಲೇನಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ರಿಂದ ಹಿಡಿದು ರಾಕಿಂಗ್ ಸ್ಟಾರ್ ಯಶ್, ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ಡಿಂಪಲ್ ಕ್ವೀನ್ ರಚಿತಾ ರಾಮ್ ಸೇರಿದಂತೆ ಹಲವರು ಕಿರುತೆರೆ ದುನಿಯಾದಿಂದ ಬೆಳ್ಳಿತೆರೆಗೆ ಜಿಗಿದು ಯಶಸ್ಸು ಗಳಿಸಿದ್ದಾರೆ.

  ಇದೀಗ ಇದೇ ಹಾದಿಯಲ್ಲಿ ಸಾಗಲು ಗಗನ್ ಚಿನ್ನಪ್ಪ ಮನಸ್ಸು ಮಾಡಿದ್ದಾರೆ. 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಐಪಿಎಸ್ ಆಫೀಸರ್ ರಾಜೀವನ ಪಾತ್ರ ನಿರ್ವಹಿಸುತ್ತಿರುವ ಗಗನ್ ಚಿನ್ನಪ್ಪ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ.

  'ಮಂಗಳ ಗೌರಿ'ಯ ಗಂಡನಾಗಿ ಇಲ್ಲಿಯವರೆಗೂ ಕಿರುತೆರೆ ವೀಕ್ಷಕರ ಮನಗೆದ್ದಿರುವ ಗಗನ್ ಚಿನ್ನಪ್ಪ ಈಗ ಗಾಂಧಿನಗರಕ್ಕೆ ಗ್ರ್ಯಾಂಡ್ ಎಂಟ್ರಿಕೊಡುತ್ತಿದ್ದಾರೆ. 'ಅಲೆಕ್ಸಾಂಡರ್' ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿನುಗಲು ಗಗನ್ ಚಿನ್ನಪ್ಪ ಸಜ್ಜಾಗಿದ್ದಾರೆ.

  ಯಶಸ್ಸಿನಲ್ಲಿರುವಾಗಲೇ ಸೀರಿಯಲ್ ಬಿಟ್ಟು ಹೋದ ಸ್ಟಾರ್ ಕಲಾವಿದರಿವರು.!ಯಶಸ್ಸಿನಲ್ಲಿರುವಾಗಲೇ ಸೀರಿಯಲ್ ಬಿಟ್ಟು ಹೋದ ಸ್ಟಾರ್ ಕಲಾವಿದರಿವರು.!

  ಈ ಹಿಂದೆ 'ಮದ್ವೆ' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ಹಿಂದು ಕೃಷ್ಣ 'ಅಲೆಕ್ಸಾಂಡರ್' ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಮದ್ವೆ' ಚಿತ್ರದಲ್ಲಿ ನಾಯಕಿ ಆಗಿ ಕಾಣಿಸಿಕೊಂಡಿದ್ದ ಆರೋಹಿ ಗೌಡ 'ಅಲೆಕ್ಸಾಂಡರ್'ಗೂ ಹೀರೋಯಿನ್ ಆಗಿದ್ದಾರೆ. ಅರುಣ್.ಬಿ.ಎಂ.ಗೌಡ ಎಂಬುವರು 'ಅಲೆಕ್ಸಾಂಡರ್'ಗೆ ಬಂಡವಾಳ ಹಾಕುತ್ತಿದ್ದಾರೆ. ಈಗಾಗಲೇ 'ಅಲೆಕ್ಸಾಂಡರ್' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ಟೀಸರ್, ಟ್ರೈಲರ್ ಬಿಡುಗಡೆ ಆಗಲಿದೆ.

  ಕೊಡಗು ಮೂಲದ ಗಗನ್ ಚಿನ್ನಪ್ಪ ಟಿವಿ ಲೋಕದಲ್ಲಿ ಕ್ಲಿಕ್ ಆದಂತೆ ಚಂದನವನದಲ್ಲೂ ಯಶಸ್ವಿ ಆಗ್ತಾರಾ ಎಂಬುದೇ ಸದ್ಯದ ಕುತೂಹಲ.

  English summary
  TV Actor Gagan Chinappa of Mangalagowri Maduve fame is making debut in Sandalwood with Kannada Movie Alexander.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X