For Quick Alerts
  ALLOW NOTIFICATIONS  
  For Daily Alerts

  ಸಿನಿಮಾಗೆ ಎಂಟ್ರಿ ಕೊಟ್ಟ ಕಿರುತೆರೆ ನಟಿ ಭವ್ಯಾ ಗೌಡ; ಯಾವ ಸಿನಿಮಾ?

  |

  ಕನ್ನಡ ಕಿರುತೆರೆಯ ಖ್ಯಾತ ನಟಿ ಭವ್ಯ ಗೌಡ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಭವ್ಯಾ ಇನ್ಮುಂದೆ ಬೆಳ್ಳಿ ಪರದೆಮೇಲೆ ರಾರಾಜಿಸಲು ತಯಾರಾಗಿದ್ದಾರೆ.

  ಅಂದಹಾಗೆ ಭವ್ಯಾ, ಕಿಶನ್ ಬೆಳಗಲಿ ನಟನೆಯ ಡಿಯರ್ ಕಣ್ಮಣಿ ಸಿನಿಮಾದಲ್ಲಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಡಿಯರ್ ಕಣ್ಮಣಿ ಸಿನಿಮಾದಲ್ಲಿ ಮೊದಲ ನಾಯಕಿಯಾಗಿ ಸಾತ್ವಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಭವ್ಯಾ ಗೌಡ ಸೇರಿಕೊಂಡಿದ್ದಾರೆ.

  ತೆಲುಗಿನಲ್ಲಿ ಕನ್ನಡ ಸಿನಿಮಾಗಳ ಜಾತ್ರೆ: 'ಯುವರತ್ನ' ಬಳಿಕ ತೆಲುಗಿಗೆ ಎಂಟ್ರಿ ಕೊಟ್ಟ ಮತ್ತೊಂದು ಸಿನಿಮಾತೆಲುಗಿನಲ್ಲಿ ಕನ್ನಡ ಸಿನಿಮಾಗಳ ಜಾತ್ರೆ: 'ಯುವರತ್ನ' ಬಳಿಕ ತೆಲುಗಿಗೆ ಎಂಟ್ರಿ ಕೊಟ್ಟ ಮತ್ತೊಂದು ಸಿನಿಮಾ

  ವಿಸ್ಮಯಾ ಗೌಡ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಇತ್ತೀಚಿಗಷ್ಟೆ ಕಿಚ್ಚ ಸುದೀಪ್ ಚಿತ್ರಕ್ಕೆ ಚಾಲನೆ ನೀಡುವ ಮೂಲಕ ಚಿತ್ರೀಕರಣ ಪ್ರಾರಂಭವಾಗಿತ್ತು. ಡಿಯರ್ ಕಣ್ಮಣಿ ತ್ರಿಕೋನ ಪ್ರೇಮಕಥೆಯ ಚಿತ್ರವಾಗಿದೆ. ಚಿತ್ರದಲ್ಲಿ ಕ್ರಿಕೆಟಿಗ ಪ್ರವೀಣ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ಕಿರುತೆಯಲ್ಲಿ ಎಲ್ಲರ ಮನಗೆದ್ದಿರುವ ಭವ್ಯಾ ಸಿನಿಮಾದಲ್ಲಿ ನಟಿಸುವ ಅವಕಾಶಕ್ಕಾಗಿ ಕಾಯುತ್ತಿದ್ದರು. ಉತ್ತಮ ಪಾತ್ರಕ್ಕಾಗಿ ಎದುರು ನೋಡುತ್ತಿದ್ದ ಭವ್ಯಾಗೆ ಡಿಯರ್ ಕಣ್ಮಣಿ ಸಿನಿಮಾ ಸಿಕ್ಕಿರುವ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

  ಚಿತ್ರದಲ್ಲಿ ಭವ್ಯಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಧಾರಾವಾಹಿಯಲ್ಲಿ ನೋಡಿದ ಭವ್ಯಾಗಿಂತ ಚಿತ್ರದಲ್ಲಿ ಸಂಪೂರ್ಣ ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರಂತೆ. ಪಾತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಭವ್ಯಾ ಚಿತ್ರದಲ್ಲಿ ಹೇಗೆ ಕಾಣಿಸಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.

  ಕೆಜಿಎಫ್ 2 ನಲ್ಲಿ ಅನಂತನಾಗ್ ಹಾಗೂ ಪ್ರಕಾಶ್ ರೈ ಪಾತ್ರಕ್ಕಿರುವ ವ್ಯತ್ಯಾಸ ಏನು? | Filmibeat Kannada

  ಅಂದಹಾಗೆ ಕಿಶನ್ ಬೆಳಗಳಿ ಅವರಿಗೂ ಇದು ವಿಶೇಷವಾದ ಸಿನಿಮಾವಾಗಿದ್ದು, ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚುತ್ತಿದ್ದಾರೆ. ಇಡೀ ಸಿನಿಮಾತಂಡ ಹೊಸದಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಡಿಯರ್ ಕಣ್ಮಣಿ ಹೇಗಿರಲಿದೆ, ಹೊಸತಂಡದವರ ಪ್ರಯತ್ನ ಪ್ರೇಕ್ಷಕರಿಗೆ ಇಷ್ಟ ಆಗುತ್ತಾ ಎಂದು ಕಾಯಬೇಕು.

  English summary
  TV Actress Bhavya Gowda makes her silver screen debut with Dear Kanmani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X