18 ವರ್ಷದ ಮಗಳನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ನಟಿ.!
ಸಿನಿಮಾ ಕಲಾವಿದರು ಮತ್ತು ಧಾರಾವಾಹಿ ಕಲಾವಿದರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಇತ್ತೀಚಿಗೆ ಹೆಚ್ಚಾಗಿವೆ. ಮೊನ್ನೆಯಷ್ಟೇ ತೆಲುಗು ಧಾರಾವಾಹಿ ನಟ ಮಧು ಪ್ರಕಾಶ್ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಆತ್ಮಹತ್ಯೆಗೆ ಕಾರಣವೇನು, ಸೀರಿಯಲ್ ನಟನ ಪತ್ನಿಗೆ ಸಾಯುವಷ್ಟು ನೋವು ಏನಾಗಿತ್ತು ಎಂಬ ವಿಚಾರಣೆ ನಡೆಯುತ್ತಿದೆ. ಈ ಘಟನೆಯನ್ನ ಮರೆಯುವಷ್ಟರಲ್ಲಿ ಮತ್ತೊಬ್ಬ ಕಿರುತೆರೆ ನಟಿ ಸೂಸೈಡ್ ಮಾಡಿಕೊಂಡಿದ್ದಾರೆ.
ದುರಂತ ಅಂದ್ರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕು ಮುನ್ನಾ ತನ್ನ 18 ವರ್ಷದ ಮಗಳನ್ನ ಕೊಂದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಪತಿಯ ವಿಚಾರಣೆ ಮಾಡಲಾಗಿದ್ದು, ಇದಕ್ಕೆ ಕಾರಣ ಏನು ಎಂದು ಪೊಲೀಸರು ತನಿಖೆ ಮಾಡ್ತಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಯಾವ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಮುಂದೆ ಓದಿ....

ಆರ್ಥಿಕ ಪರಿಸ್ಥಿತಿಯೇ ಕಾರಣವಂತೆ
ಪ್ರಗ್ನ್ಯಾ ಅವರು ಹಲವು ವರ್ಷಗಳಿಂದ ಮರಾಠಿ ಭಾಷೆಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರಂತೆ. ಆತನ ಗಂಡ ಆಮದು ಮತ್ತು ರಫ್ತು ಉದ್ಯಮಿಯಾಗಿದ್ದರು. ಮುಂಬೈನ ಕಲ್ವಾದಲ್ಲಿ ನೆಲೆಸಿದ್ದ ಈ ದಂಪತಿಗೆ 18 ವರ್ಷದ ಮಗಳಿದ್ದಳು. ಬಿಸಿನೆಸ್ ನಲ್ಲಿ ಪತಿಗೆ ನಷ್ಟವಾಯಿತು. ಬಳಿಕ ಪ್ರಗ್ನ್ಯಾ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದರು. ಆದರೂ ತಮ್ಮ ಆರ್ಥಿಕ ಪರಿಸ್ಥಿತಿ ಬದಲಾಗದ ಕಾರಣ ತೀವ್ರ ಮನನೊಂದು ಮಗಳನ್ನ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪತಿ ಜಿಮ್ ಗೆ ಹೋಗಿದ್ದ ವೇಳೆ ಘಟನೆ
ಶುಕ್ರವಾರ ಬೆಳಿಗ್ಗೆ ಪತಿ ಪ್ರಕಾಶ್ ವರ್ಮಾ ಅವರು ಎಂದಿನಂತೆ ಜಿಮ್ ಗೆ ಹೋಗಿದ್ದಾರೆ. ಜಿಮ್ ಗೆ ಹೋಗಿ ವಾಪಸ್ ಆದ ಬಳಿಕ ಬಾಗಿಲು ತೆಗೆಯಲಿಲ್ಲ. ಹೀಗಾಗಿ, ಅನುಮಾನ ಬಂದ ಮೇಲೆ ಬಾಗಿಲು ಹೊಡೆದು ಮನೆಗೆ ಪ್ರವೇಶ ಮಾಡಿದ್ದಾರೆ. ಒಳ ಹೋದ ಪತಿಗೆ ಅಚ್ಚರಿ ಕಾದಿತ್ತು. ಲೀವಿಂಗ್ ರೂಂನಲ್ಲಿ ಮಗಳು ಶವವಾಗಿ ಬಿದ್ದಿದ್ದಳು. ಮತ್ತು ಬೆಡ್ ರೂಂನಲ್ಲಿ ಪತ್ನಿ ನೇಣು ಬಿಗಿದುಕೊಂಡು ಸಾವುಗೀಡಾಗಿದ್ದರಂತೆ.

ಪತಿಯ ವಿಚಾರಣೆ ಮಾಡಿದ ಪೊಲೀಸರು
ಮನೆಗೆ ಬಂದ ಪತಿ ಕೂಡಲೆ ಮಗಳು ಮತ್ತು ಪತ್ನಿಯನ್ನ ಸ್ಥಳಿಯ ಆಸ್ಪತ್ರೆಗೆ ರವಾನಿಸಿದರು. ಆದ್ರೆ, ಆಗಾಗಾಲೇ ಸಮಯ ಕೈಮೀರಿ ಹೋಗಿತ್ತು. ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿಯ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆರ್ಥಿಕ ಪರಿಸ್ಥಿತಿಯೇ ಕಾರಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ಸಿನಿಮಾದಲ್ಲು ನಟನೆ
ಅಂದ್ಹಾಗೆ, ಪ್ರಗ್ನ್ಯಾ ಅವರು ಧಾರಾವಾಹಿಯ ಜೊತೆ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಿದ್ದಾರೆ. 'ಸೆಕ್ಷನ್-375' ಎಂಬ ಸಿನಿಮಾದಲ್ಲೂ ಒಂದು ಪಾತ್ರ ಮಾಡಿದ್ದರು. ಆದ್ರೆ, ಕೌಟುಂಬಿಕವಾಗಿ ನೊಂದಿದ್ದ ಪ್ರಗ್ನ್ಯಾ ಅವರು ಮಗಳನ್ನ ಕೊಂದು, ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Click it and Unblock the Notifications











