ಬ್ರೇಕಿಂಗ್ ನ್ಯೂಸ್: ಸೆಲ್ಫಿ ನೆಪದಲ್ಲಿ ಬಂದು ನಟಿ ಕವಿತಾ ಗೌಡ ಕಿಡ್ನಾಪ್ !
ಕಿರುತೆರೆ ಹಾಗೂ ಸಿನಿಮಾದಲ್ಲಿ ಬಣ್ಣ ಹಚ್ಚಿ ಜನಪ್ರಸಿದ್ಧಿಯನ್ನು ಪಡೆದಿರುವ ಕವಿತಾ ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಚಿನ್ನು ಎಂದೆ ಹೆಸರುವಾಸಿ. ನಟಿ ಕವಿತಾ ಗೌಡ ಸಿನಿಮಾದಲ್ಲಿಯೂ ಪಾತ್ರಗಳನ್ನು ನಿರ್ವಹಿಸುತ್ತಾರೆ. ಇದೀಗ ಕವಿತಾ ಗೌಡ ಅಲಿಯಾಸ್ ಚಿನ್ನು ಅವರನ್ನು ಕಿಡ್ನಾಪ್ ಮಾಡಲಾಗಿದೆ. ಶಾಪ್‌ನಿಂದ ಹೊರಬರುವ ಕವಿತಾರನ್ನು ಕಾರಿನಲ್ಲಿ ಬರುವ ನಾಲ್ವರ ತಂಡ ಸೆಲ್ಫಿಗಾಗಿ ಮನವಿ ಮಾಡುತ್ತಾರೆ ಇದಕ್ಕೆ ಒಪ್ಪುವ ಕವಿತಾ ಕೂಡ ಸೆಲ್ಫಿ ನೀಡುತ್ತಾರೆ. ಹೀಗೆ ಯಾಮಾರಿಸಿ ಕವಿತಾ ಗೌಡ ಅವರನ್ನು ಕಿಡ್ನಾಪ್ ಮಾಡಲಾಗಿದೆ. ಈ ಸುದ್ದಿ ಈಗ ಬಾರಿ ಸದ್ದು ಮಾಡುತ್ತಿದ್ದು, ಹೆಚ್ಚು ಗಾಬರಿಯಾಗುವುದು ಬೇಡ. ಯಾಕಂದ್ರೆ ಇದು ಕವಿತಾ ಗೌಡ ಅಭಿನಯದ 'ಗೋವಿಂದ ಗೋವಿಂದ' ಸಿನಿಮಾದ ಸೀನ್ ಆಗಿದ್ದು, ಪ್ರಚಾರಕ್ಕಾಗಿ ಚಿತ್ರತಂಡ ಇದನ್ನು ಬಳಸಿಕೊಂಡಿದೆ.
ಸಿನಿಮಾದ ಸಣ್ಣ ಕ್ಲಿಪ್ ಅನ್ನು ಚಿತ್ರತಂಡ ರಿವೀಲ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೊದಲಿಗೆ ಇದನ್ನ ನೋಡಿದವರೆಲ್ಲ ಅರೇ ಹೌದಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಅಮೇಲೆ ಇದು ಸಿನಿಮಾದ ದೃಶ್ಯ ಎಂದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.
ಗೋವಿಂದಾ ಗೋವಿಂದಾ ಸಿನಿಮಾ ಕಾಮಿಡಿ ಎಂಟರ್ಟೈನರ್ ಸಿನಿಮಾವಾಗಿದ್ದು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕವಿತಾ ಗೌಡ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಕವಿತಾ ಗೌಡ ಅದು ಹೇಗೆ ಯಾಮಾರಿ ಕಿಡ್ನಾಪ್ ಆಗುತ್ತಾರೆ ಅನ್ನೋ ಒಂದು ಸನ್ನಿವೇಶ ಇದೆ. ಇದೇ ಶೂಟಿಂಗ್ ದೃಶ್ಯವನ್ನು ಪ್ರಚಾರಕ್ಕಾಗಿ ಬಳಸಿಕೊಂಡಿರೋ ಚಿತ್ರತಂಡ, ಜನರಿಗೆ ಒಳ್ಳೆ ಗಿಮಿಕ್ ಕೊಟ್ಟಿದೆ. ಹಾಗೇ ಕವಿತಾ ಗೌಡ ಹೀಗೆ ಕಿಡ್ನಾಪ್ ಆಗಿದ್ದು ಯಾಕೆ ಎಂದು ತಿಳಿದುಕೋಳ್ಳಬೇಕು ಎಂದರೇ ಇದೇ ತಿಂಗಳು 26ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾ ನೋಡಿ ಎಂದು ಬರೆದುಕೊಂಡಿದೆ ಚಿತ್ರತಂಡ.

ಸುಮಂತ್ ಶೈಲೇಂದ್ರ ಬಾಬು ಮತ್ತು ಭಾವನಾ ಮೆನನ್ ನಟಿಸಿರುವ ಈ ಚಿತ್ರದಲ್ಲಿ ಕವಿತಾ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೂಲತಃ ಭರತನಾಟ್ಯ ಕಲಾವಿದೆಯಾಗಿರುವ ಅವರು ಈ ಸಿನಿಮಾದಲ್ಲಿಯೂ ಅದೇ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಿನ್ಸಿಪಾಲ್ ಆಗಿರುವ ಅಪ್ಪನಿಗೆ ತನ್ನ ಮಗಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಸೆ ಇರುತ್ತೆ. ಆದರೆ, ಮಗಳು ಕಲೆಯತ್ತ ಒಲವು ಹೆಚ್ಚು ತೋರಿಸುತ್ತಾಳೆ. ಇವರಿಬ್ಬರ ನಡುವಿನ ಘರ್ಷಣೆಯನ್ನು 'ಗೋವಿಂದ ಗೋವಿಂದ' ಸಿನಿಮಾದಲ್ಲಿ ತೋರಿಸಲಾಗಿದೆ.

ನವೆಂಬರ್ 26ರಂದು ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಕಾಮಿಡಿ ಜಾನರ್ ಸಿನಿಮಾವಾಗಿದ್ದರು ಮೊದಲನೇ ಭಾಗದಲ್ಲಿ ಕಾಮಿಡಿ ಹಾಗೂ ಸೆಕೆಂಡ್ ಆಫ್ ನಲ್ಲಿ ಥ್ರಿಲ್ಲಿಂಗ್ ಎಲಿಮೆಂಟ್‌ಗಳನ್ನು ತೋರಿಸಲಾಗಿದೆಯಂತೆ. ಈ ಸಿನಿಮಾ ಮೂಲಕ ಒಂದೊಳ್ಳೆ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶ ಚಿತ್ರತಂಡದ್ದಾಗಿದೆ. ಅಲ್ಲದೇ ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದ್ದು, ಕನ್ನಡ ತಮಿಳು, ಮಲಯಾಳಂನಲ್ಲಿ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದೆ. ಆದರೆ ನವೆಂಬರ್ 26ಕ್ಕೆ ಮೊದಲು ಕನ್ನಡದಲ್ಲಿ ಮಾತ್ರ ಸಿನಿಮಾ ರಿಲೀಸ್ ಆಗಲಿದ್ದು ತಮಿಳು, ಮಲಯಾಳಂ ಸಿನಿಮಾವನ್ನು ತದನಂತರದಲ್ಲಿ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.

ಇನ್ನು ಸಿನಿಮಾದಲ್ಲಿ ಕವಿತಾಗೌಡ ಜೊತೆ ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ್ ಕುಮಾರ್, ವಿ.ಮನೋಹರ್, ಕೆ ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ದೇವ್ ರಂಗಭೂಮಿ ಕಥೆ-ಚಿತ್ರಕಥೆ- ಸಂಭಾಷಣೆ ಬರೆದಿದ್ದು, ಕೆ ಎಸ್ ಚಂದ್ರಶೇಖರ್ ಛಾಯಗ್ರಹಣ, ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಮತ್ತು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಸಿನಿಮಾಗಿದೆ.


Click it and Unblock the Notifications











