For Quick Alerts
  ALLOW NOTIFICATIONS  
  For Daily Alerts

  ಗಂಡು ಮಗುವಿಗೆ ತಾಯಿಯಾದ 'ಕುಲವಧು' ಸುಪ್ರೀತಾ ಶೆಟ್ಟಿ

  |

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ 'ಕಾಂಚನಾ' ಪಾತ್ರದಲ್ಲಿ ಮಿಂಚಿದ್ದ ಸುಪ್ರೀತಾ ಶೆಟ್ಟಿ ಬಾಳಲ್ಲಿ ಮತ್ತೊಮ್ಮೆ ಸಂತಸ ಮೂಡಿದೆ. ಗಂಡು ಮಗುವಿಗೆ ಸುಪ್ರೀತಾ ಶೆಟ್ಟಿ ಜನ್ಮ ನೀಡಿದ್ದಾರೆ.

  ನವೆಂಬರ್ 20 ರಂದು ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಸುಪ್ರೀತಾ ಶೆಟ್ಟಿಗೆ ಹೆರಿಗೆ ಆಗಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಗಂಡು ಮಗುವಿನ ಆಗಮನದಿಂದ ಸುಪ್ರೀತಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ದಂಪತಿ ಖುಷಿಯಾಗಿದ್ದಾರೆ.

  ಸುಪ್ರೀತಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ದಂಪತಿಗೆ ಇದು ಎರಡನೇ ಮಗು. ಈಗಾಗಲೇ ಈ ದಂಪತಿಗೆ ಹೆಣ್ಣು ಮಗುವಿದೆ.

  ಇತ್ತೀಚೆಗಷ್ಟೇ ಪತ್ನಿ ಸುಪ್ರೀತಾ ಶೆಟ್ಟಿಯ ಸೀಮಂತ ಸಮಾರಂಭವನ್ನ ಪ್ರಮೋದ್ ಶೆಟ್ಟಿ ಅದ್ಧೂರಿಯಾಗಿ ಆಯೋಜಿಸಿದ್ದರು. ಕಿರುತೆರೆ ಮತ್ತು ಚಿತ್ರರಂಗದ ನಟ-ನಟಿಯರು ಸೀಮಂತ ಸಂಭ್ರಮದಲ್ಲಿ ಭಾಗವಹಿಸಿ ಸುಪ್ರೀತಾ ಶೆಟ್ಟಿಗೆ ಹರಸಿದ್ದರು.

  ಅಂದ್ಹಾಗೆ, ಕಿರುತೆರೆ ನಟಿ ಸುಪ್ರೀತಾ ಶೆಟ್ಟಿ ಪತಿ ಪ್ರಮೋದ್ ಶೆಟ್ಟಿ ಕೂಡ ನಟರೇ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪ್ರಮೋದ್ ಶೆಟ್ಟಿ ಅಭಿನಯಿಸಿದ್ದಾರೆ.

  English summary
  TV Actress Supreetha Shetty blessed with a baby boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X