ಬ್ಲ್ಯಾಕ್ ಟೈಲ್ ಬಾಲ್ ಗೌನ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ 'ಗಿಚ್ಚಿ ಗಿಲಿಗಿಲಿ' ಜಾನ್ವಿ
ಕನ್ನಡ ಚಿತ್ರರಂಗಕ್ಕೆ ಕಿರುತೆರೆಯಿಂದ ಮತ್ತೊಂದು ಪ್ರತಿಭೆ ಎಂಟ್ರಿ ಕೊಟ್ಟಿದೆ. ಪ್ರಮುಖ ನ್ಯೂಸ್ ಚಾನೆಲ್‌ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಒಂದಿಷ್ಟು ವರ್ಷ ಕಿರುತೆರೆಯಲ್ಲಿ ನ್ಯೂಸ್ ಆಂಕರ್ ಆಗಿ ಕಾಣಿಸಿಕೊಂಡ ಜಾನ್ವಿ ರಿಯಾಲಿಟಿ ಶೋ ಕಡೆಗೆ ಮುಖ ಮಾಡಿದ್ದರು.
ನಿರೂಪಕಿಯಾಗಿದ್ದ ಜಾನ್ವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಗಿಚ್ಚಿ ಗಿಲಿಗಿಲಿ'ಯಲ್ಲಿ ಜಾನ್ವಿ ಕಾಣಿಸಿಕೊಂಡಿದ್ದರು. ಇಲ್ಲಿಂದ ಜಾನ್ವಿ ವೃತ್ತಿ ಬದುಕಿನ ದಿಕ್ಕೇ ಬದಲಾಗಿದೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಜಾನ್ವಿ ನಟಿಯಾಗುವ ಬಯಕೆಯನ್ನು ಹಂಚಿಕೊಂಡಿದ್ದರು. ಅವರ ಆಸೆಯಂತೆಯೇ ಈಗ ಚೊಚ್ಚಲ ಸಿನಿಮಾಗೆ ಬಣ್ಣ ಹಚ್ಚುತ್ತಿದ್ದಾರೆ. ಆ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. ಇದೇ ಜಾನ್ವಿ ಈಗ ಗ್ಲಾಮರಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಗ್ಲಾಮರ್ ಲುಕ್ ಕೊಟ್ಟ ಜಾನ್ವಿ
ನಿರೂಪಕಿ ಕಮ್ ನಟಿ ಜಾನ್ವಿ ಹೊಸ ಫೋಟೊಶೂಟ್‌ಗಳು ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ. ಹಿಂದೆಂದೂ ಕಾಣಿಸಿದ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಇತ್ತೀಚೆಗೆ ರೂಪೇಶ್ ಶೆಟ್ಟಿ ಜೊತೆ ನಟಿಸುತ್ತಿರುವ ಸಿನಿಮಾಗಾಗಿ ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಕಲರ್ಸ್ ಕನ್ನಡದ ಕಾರ್ಯಕ್ರಮಕ್ಕಾಗಿ ಬ್ಲಾಕ್ ಕಾಸ್ಟ್ಯೂಮ್‌ನಲ್ಲಿ ಮಿಂಚಿದ್ದಾರೆ.
ಬ್ಲ್ಯಾಕ್ ಟೈಲ್ ಬಾಲ್ ಗೌನ್ ಧರಿಸಿ ಜಾನ್ವಿ ಮಿಂಚು
ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನಟಿ ಜಾನ್ವಿ ಇತ್ತೀಚೆಗೆ ಕಲರ್ಸ್ ಕನ್ನಡದ ಅನುಬಂಧ ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ಫ್ರಂಟ್ ಲಾಂಗ್ ಬ್ಯಾಕ್ ಟೈಲ್ ಬಾಲ್ ಗೌನ್ ಧರಿಸಿ ಬಂದಿದ್ದರು. ಈ ವೇಳೆ ಚಿಕ್ಕದೊಂದು ಫೋಟೊಶೂಟ್ ಕೂಡ ನಡೆದಿತ್ತು. ಅದೇ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಜಾನ್ವಿ ಡ್ರೆಸ್ ಸೆನ್ಸ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾದಲ್ಲಿ ಜಾನ್ವಿ ಬ್ಯುಸಿ
ನಿರೂಪಕಿ ಹಾಗೂ ನಟಿ ಜಾನ್ವಿ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಸಿನಿಮಾಗೆ ನಾಯಕಿಯಾಗಿದ್ದಾರೆ. ಚಯನ್ ಶೆಟ್ಟಿ ನಿರ್ದೇಶಿಸುತ್ತಿರುವ 'ಅಧಿಪತಿ' ಸಿನಿಮಾದಲ್ಲಿ ಜಾನ್ವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲಿ ನಟಿಸುತ್ತಿದ್ದು, ಅಕ್ಟೋಬರ್ 2ನೇ ವಾರದಂದು ಈ ಸಿನಿಮಾದ ಚಿತ್ರೀಕರಣ ಆರಂಭ ಆಗುತ್ತಿದೆ. ಬಿಗ್‌ಬಾಸ್ ಮೂಲಕ ಜನಪ್ರಿಯರಾಗಿರುವ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ.
ಎರಡನೇ ಸಿನಿಮಾ ಶೀಘ್ರದಲ್ಲೇ ಅನೌನ್ಸ್
ಜಾನ್ವಿಗೆ ಸಿನಿಮಾದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. 'ಅಧಿಪತಿ' ಸೆಟ್ಟೇರುತ್ತಿದ್ದಂತೆ ಮತ್ತೊಂದು ಸಿನಿಮಾ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಸದ್ಯ ಇನ್ನೂ ಮಾತುಕತೆ ಹಂತದಲ್ಲೇ ಇರೋದ್ರಿಂದ ಆ ಸಿನಿಮಾ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಎರಡನೇ ಸಿನಿಮಾ ಓಕೆ ಆದ್ರೆ, ಅದೊಂದು ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಆಗಲಿದೆ.


Click it and Unblock the Notifications











