For Quick Alerts
  ALLOW NOTIFICATIONS  
  For Daily Alerts

  ನಿಯಮ ಮೀರಿ ರೆಸಾರ್ಟ್ ಓಪನ್: ದೂರಿನ ಕುರಿತು ಅಕುಲ್ ಬಾಲಾಜಿ ಹೇಳಿದ್ದೇನು?

  |

  ಕೊರೊನಾ ವೈರಸ್ ಸೋಂಕು ತಡೆಯಲು ವಿದಿಸಿರುವ ಲಾಕ್‌ಡೌನ್‌ನ ನಿಯಮಗಳನ್ನು ಉಲ್ಲಂಘಿಸಿ ತಮ್ಮ ರೆಸಾರ್ಟ್ ತೆರೆದು ಅಲ್ಲಿ ಮದುವೆ ಚಟುವಟಿಕೆಗೆ ಅವಕಾಶ ನೀಡಿದ್ದಕ್ಕೆ ನಟ, ಕಿರುತೆರೆ ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲಾಗಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಲಗುಮೇನಹಳ್ಳಿ ಸಮೀಪದಲ್ಲಿ ಅಕುಲ್ ಬಾಲಾಜಿ ಒಡೆತನದ ಸನ್‌ಶೈನ್ ಬೈ ಜೇಡ್ ರೆಸಾರ್ಟ್ ಇದೆ.

  Recommended Video

  ಚಿತ್ರಾನ್ನ ಮಾಡುವಾಗ ಅಕುಲ್ ಗೆ ಬಿಗ್ ಬಾಸ್ ನೆನಪಾಗಿದ್ದೇಕೆ

  ರೆಸಾರ್ಟ್‌ನಲ್ಲಿ ಶನಿವಾರ ರಾತ್ರಿಯಿಂದ ಮದುವೆ ತಯಾರಿಯೊಂದು ಆರಂಭವಾಗಿತ್ತು. ಲಾಕ್‌ಡೌನ್ ನಿಯಮದ ಪ್ರಕಾರ ರೆಸಾರ್ಟ್‌ಗಳನ್ನು ತೆರೆಯುವಂತಿಲ್ಲ. ಅಲ್ಲದೆ, ಯಾವುದೇ ಸಮಾರಂಭಕ್ಕೆ ಸ್ಥಳೀಯ ಆಡಳಿತ ಹಾಗೂ ಪೊಲೀಸರಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಇವುಗಳನ್ನು ಉಲ್ಲಂಘಿಸಲಾಗಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದಕ್ಕೆ ಅಕುಲ್ ಬಾಲಾಜಿ ಸ್ಪಷ್ಟೀಕರಣ ನೀಡಿದ್ದಾರೆ. ಮುಂದೆ ಓದಿ...

  ಖಾಸಗಿ ಸಂಸ್ಥೆಯ ನಿರ್ವಹಣೆ

  ಖಾಸಗಿ ಸಂಸ್ಥೆಯ ನಿರ್ವಹಣೆ

  'ಎಂಟು ತಿಂಗಳ ಹಿಂದೆ ನಾನು ಖಾಸಗಿ ಆತಿಥ್ಯ ಸಂಸ್ಥೆಯೊಂದಕ್ಕೆ ರೆಸಾರ್ಟ್‌ಅನ್ನು ಬಿಟ್ಟುಕೊಟ್ಟಿದ್ದೆ. ನನಗೆ ಈ ಬುಕ್ಕಿಂಗ್ ಬಗ್ಗೆ ತಿಳಿದಿರಲಿಲ್ಲ. ಆದರೆ ನಾನು ಸ್ಪಷ್ಟನೆ ಪಡೆಯಲು ಕರೆ ಮಾಡಿದಾಗ ಮದುವೆ ತಯಾರಿ ನಡೆಸಿದ್ದ ಗುಂಪು ಪೂರ್ವಾನುಮತಿ ಪಡೆದಿದೆ ಎಂಬುದನ್ನು ತಿಳಿಸಿದ್ದಾರೆ' ಎಂಬುದಾಗಿ ಅಕುಲ್ ಹೇಳಿದ್ದಾರೆ.

  ನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲುನಟ, ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲು

  ನಮ್ಮಲ್ಲಿ ಅನುಮತಿ ಪಡೆದಿಲ್ಲ

  ನಮ್ಮಲ್ಲಿ ಅನುಮತಿ ಪಡೆದಿಲ್ಲ

  'ಆದರೆ ಇನ್ನಷ್ಟು ಕೆದಕಿದಾಗ ಗೊತ್ತಾಗಿದ್ದು, ಅವರು ಅನುಮತಿ ಪಡೆದಿರುವುದು ಸಮೀಪದ ಫೈವ್ ಸ್ಟಾರ್ ಹೋಟೆಲ್‌ಗೆ ಹೊರತು ನಮ್ಮ ರೆಸಾರ್ಟ್‌ಗೆ ಅಲ್ಲ ಎಂದು. ಹೀಗಾಗಿ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡುವಂತೆ ನಾವು ಸೂಚಿಸಿದ್ದೆವು' ಎಂದಿದ್ದಾರೆ.

  ನನ್ನ ವಿರುದ್ಧ ಎಫ್‌ಐಆರ್ ಆಗಿಲ್ಲ

  ನನ್ನ ವಿರುದ್ಧ ಎಫ್‌ಐಆರ್ ಆಗಿಲ್ಲ

  'ಇದರ ಬಳಿಕವೇ ಅದರಲ್ಲಿನ ನನ್ನ ಪಾತ್ರದ ಬಗ್ಗೆ ಹಾಗೂ ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಎಫ್‌ಐಆರ್‌ನಲ್ಲಿ ನನ್ನ ಹೆಸರು ಇರುವುದಿಲ್ಲ, ಬದಲಾಗಿ ಆತಿಥ್ಯ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ನನಗೆ ಭರವಸೆ ನೀಡಲಾಗಿದೆ' ಎಂದು ಅವರು ಸ್ಪಷ್ಟೀಕರಣ ನೀಡಿದ್ದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

  ಇಬ್ಬರ ವಿರುದ್ಧ ದೂರು

  ಇಬ್ಬರ ವಿರುದ್ಧ ದೂರು

  ಲಗುಮೇನಹಳ್ಳಿ ಬಳಿಯಲ್ಲಿನ ಸನ್‌ಶೈನ್ ರೆಸಾರ್ಟ್‌ನಲ್ಲಿ ಶನಿವಾರ ರಾತ್ರಿ 10 ಗಂಟೆಯಿಂದ ಸುಮಾರು 20 ಮಂದಿ ಏಕಾಏಕಿ ಬಂದು ಮದುವೆ ತಯಾರಿ ನಡೆಸುತ್ತಿದ್ದಾರೆ ಎಂದು ಮಂಜುನಾಥ್ ಎಂಬುವವರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಅಕುಲ್ ಬಾಲಾಜಿ ಮತ್ತು ರೆಸಾರ್ಟ್‌ನ ಶ್ರೀನಿವಾಸಮಣಿಯಂ ವಿರುದ್ಧ ದೂರು ದಾಖಲಿಸಿದ್ದರು.

  English summary
  TV host and actor Akul Balaji clarification on lockdown violation in his resort and a police complaint registered against it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X