twitter
For Quick Alerts
ALLOW NOTIFICATIONS
For Daily Alerts

ಟಿವಿ ನನ್ನ ಪಾಲಿನ ದೇವರು, ಆಂಕರಿಂಗ್ ಬಿಡಲ್ಲ

By ರಾಜೇಂದ್ರ ಚಿಂತಾಮಣಿ

Next »

« Previous

8. 'ಉಳಿದವರು ಕಂಡಂತೆ' ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಹೇಳಿ?
ಒಂದು ಕೆಟ್ಟ ಘಟನೆ ನಡೆದಿರುತ್ತದೆ. ಆ ಘಟನೆಗೆ ಸಂಬಂಧಿಸಿದ ವ್ಯಕ್ತಿಗಳು ನನಗೆ ಚಿಕ್ಕಂದಿನಲ್ಲಿ ಗೊತ್ತಿರುತ್ತಾರೆ. ಅಂದರೆ ಅವರ ಜೊತೆ ನನಗೆ ಫ್ರೆಂಡ್ ಶಿಫ್ ಇರುತ್ತದೆ. ಅದರ ಬಗ್ಗೆ ವರದಿ ಮಾಡಲು ನಮ್ಮ ಸಂಪಾದಕರ ಜೊತೆ ಮಾತನಾಡುತ್ತೇನೆ. ಆ ಘಟನೆಗೆ ಕಾರಣರಾದವರೆಲ್ಲರನ್ನೂ ಸಂದರ್ಶಿಸಿ ಅದನ್ನೇ ನಿರೂಪಣೆ ಮಾಡುತ್ತೇನೆ. ನಾನು ಬರೆಯುತ್ತಿರುವಂತೆ ಆ ಕಥೆಯೂ ಮುಂದುವರಿಯುತ್ತದೆ. ಆ ಘಟನೆಗೆ ಸಂಬಂಧಿಸಿದರು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಅದನ್ನು ನಾನು ವರದಿ ಮಾಡುತ್ತೇನೆ. ಆ ರೀತಿಯ ಒಂದು ಪಾತ್ರ ನನ್ನದು.

9. ನಿಮ್ಮ ಮೇಲೆ ಯಾವ ತಾರೆಯ ಪ್ರಭಾವ ಇದೆ?
ಪ್ರಭಾವ ಅನ್ನುವುದಕ್ಕಿಂತಲೂ ನನಗೆ ಯಾವ ತಾರೆ ಇಷ್ಟ ಎಂದು ಹೇಳಬಹುದು. ನನಗೆ ರಮ್ಯಾ ಅಂದ್ರೆ ಇಷ್ಟ. ಹಳಬರಲ್ಲಿ ಕಲ್ಪನಾ, ಭಾರತಿ ಅವರನ್ನು ಹೆಸರಿಸಬಹುದು. ಹಿಂದಿಯಲ್ಲಿ ಶ್ರೀದೇವಿ, ಮಾಧುರಿ ದೀಕ್ಷಿತ್ ಅಂದ್ರೆ ಇಷ್ಟ. ಅಭಿನಯಿಸಬೇಕು ಎಂದು ನಾನು ಕನಸು ಕಂಡಿರಲಿಲ್ಲ. ನನ್ನ ಮೇಲೆ ಪ್ರಭಾವ ಎಂಬುದು ತುಂಬಾ ದೊಡ್ಡ ಮಾತಾಗುತ್ತದೆ. ಚಿತ್ರ ಬಿಡುಗಡೆ ಬಳಿಕ ನೀವೇ ಹೇಳಬೇಕು ಹೇಗಿದೆ ಎಂಬುದನ್ನು.

Anchor actress Sheethal Shetty interview

10. ಮುಂದಿನ ದಿನಗಳಲ್ಲಿ ಯಾವ ರೀತಿಯ ಪಾತ್ರಗಳನ್ನು ಮಾಡುತ್ತೀರಿ?
ಮೂಲತಃ ನಾನು ಪತ್ರಕರ್ತೆ. ಜನರೂ ಈ ಇತಿಮಿತಿಯಲ್ಲೇ ತಮ್ಮನ್ನು ನೋಡುತ್ತಾರೆ. ಇದು ಬಯಸದೆ ಬಂದಂತಹ ಭಾಗ್ಯ. ಈ ಚಿತ್ರಕ್ಕೆ ನಾನು ತುಂಬಾ ದೊಡ್ಡ ನಿರೀಕ್ಷೆಗಳನ್ನು ಇಟ್ಟುಕೊಂಡು ಬಂದಿಲ್ಲ. ಜೀವನದಲ್ಲಿ ಒಂದು ಒಳ್ಳೆ ಟೀಂ ಜೊತೆ ಕೆಲಸ ಮಾಡುತ್ತಿರುವುದು ನನ್ನ ಪುಣ್ಯ. ಅನುಭವಕ್ಕಾಗಿ ಬಂದಿದ್ದೇನೆ. ಈ ರೀತಿ ಮಾಡಲಿಲ್ಲವಲ್ಲಾ ಎಂಬ ಕೊರಗು ಮುಂದೆ ಕಾಡಬಾರದು ಎಂಬ ಉದ್ದೇಶದಿಂದ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಇದರಿಂದ ದೊಡ್ಡ ಸ್ಟಾರ್ ಆಗಬೇಕು, ಇನ್ನೇನೋ ಮಾಡಿಬಿಡಬೇಕು ಎಂಬ ಉದ್ದೇಶವಿಟ್ಟುಕೊಂಡು ಬಂದಿಲ್ಲ. ಮುಂದಕ್ಕೆ ಒಳ್ಳೆಯ ಪಾತ್ರಗಳು ಬಂದರೆ ಒಪ್ಪಿಕೊಳ್ಳಬಹುದು. ಏಕೆಂದರೆ ನಾನು ಇದರಲ್ಲಿ ಮಹತ್ವಾಕಾಂಕ್ಷಿ ಅಲ್ಲ. ಈಗ ಸಂಭಾವ್ಯ ಹಾಗೂ ಗೌರವವುಳ್ಳ ಪಾತ್ರ ಸಿಕ್ಕಿದೆ. ಮುಂದೆ ತೂಕವುಳ್ಳ, ಮನ್ನಣೆಯುಳ್ಳ ಸಂಭಾವ್ಯ ಪಾತ್ರಗಳು ಸಿಕ್ಕಿದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ಸಿಗಲಿಲ್ಲ ಎಂದರೆ ಆರಾಮವಾಗಿ ಖುಷಿಯಿಂದ ಇದ್ದುಬಿಡುತ್ತೇನೆ. ಏನೇನು ಬೇಜಾರಿಲ್ಲ.

11. ಈ ಪಾತ್ರಕ್ಕಾಗಿ ಮೊದಲು ನಿಮ್ಮನ್ನು ಸಂಪರ್ಕಿಸಿದ್ದು ಯಾರು?
ಮೊದಲು ಸಂಪರ್ಕಿಸಿದ್ದು ಸುನಿ ಅವರು. ರಕ್ಷಿತ್ ಶೆಟ್ಟಿ ಅವರಿಗೆ ಈ ಪಾತ್ರ ನೀವು ಮಾಡಬಹುದು ಎಂದು ಅನ್ನಿಸಿದೆ ಎಂದು ಹೇಳಿದರು. ಟಿವಿ 9 ನೋಡಬೇಕಾದಾಗಲೆ ರಕ್ಷಿತ್ ಶೆಟ್ಟಿ ಈ ಪಾತ್ರಕ್ಕೆ ಶೀತಲ್ ಶೆಟ್ಟಿ ಅವರೇ ಸೂಕ್ತ ಎಂದು ಅನ್ನಿಸಿತಂತೆ. ಸುನಿ ಮೂಲಕ ರಕ್ಷಿತ್ ಶೆಟ್ಟಿ ತಮ್ಮನ್ನು ಸಂಪರ್ಕಿಸಿದರು.

12. ಮುಂದೆಯೂ ನಿರೂಪಕಿಯಾಗಿ ಕೆಲಸ ಮಾಡುತ್ತೀರಾ?
ಯಾವ ಕೆಲಸವೂ ಚಿಕ್ಕದಲ್ಲ ದೊಡ್ಡದೂ ಅಲ್ಲ. ಟೆಲಿವಿಷನ್ ನನ್ನ ಪಾಲಿನ ದೇವರು. ಅದನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾವುದೇ ಸಂದೇಹ ಬೇಡ. ಮುಂದೆಯೂ ನಿರೂಪಕಿಯಾಗಿ ನಾನು ಕೆಲಸ ಮಾಡುತ್ತೇನೆ.

Next »

« Previous

English summary
Tv9 Kannada popular anchor Sheethal Shetty now debuts as actress in the Kannada movie 'Ulidavaru Kandante'. Sheethal shares her thoughts, experience, past, present, future with Oneindia. Here are some highlights of the interview.
Sunday, March 16, 2014, 16:48
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X