For Quick Alerts
  ALLOW NOTIFICATIONS  
  For Daily Alerts

  ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ವರಿಸಿದ ದಾನೀಶ್ ಸೇಠ್

  |

  ಭಾರತದ ಸ್ಟ್ಯಾಂಡ್ ಅಪ್ ಕಾಮಿಡಿಯನ್, ನಿರೂಪಕ ಹಾಗೂ ಸಿನಿಮಾ ನಟ ದಾನೀಶ್ ಸೇಠ್ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಜೊತೆ ನಿನ್ನೆ (ಜೂನ್ 09) ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ದಾನೀಶ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ನಿರೂಪಕ Danish Sait | Filmibeat Kannada

  ಸೈಲೆಂಟ್ ಆಗಿ ಮದುವೆಯಾದ ದಾನೀಶ್ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರೇಯಸಿ ಆನ್ಯಾರನ್ನು ಪರಿಚಯಿಸಿದ್ದರು ದಾನೀಶ್. ಆನ್ಯಾ ರಂಗಸ್ವಾಮಿ ಜೊತೆಗಿನ ಆತ್ಮೀಯ ಫೋಟೋ ಹಂಚಿಕೊಂಡು, 'ತನ್ನ ಜೀವನವನ್ನು ನನ್ನ ಜೊತೆ ಮುಂದುವರಿಸಲು ಆಕೆ ಸಮ್ಮತಿಸಿದ್ದಾಳೆ, ತುಂಬಾ ಖುಷಿ ಆಗ್ತಿದೆ, ಧನ್ಯವಾದ' ಎಂದು ಪೋಸ್ಟ್ ಹಾಕಿದ್ದರು.

  ಇದೀಗ ಸೈಲೆಂಟ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಮದುವೆ ಬಳಿಕ ಕುಟುಂಬದ ಕೆಲವೇ ಸದಸ್ಯರ ಸಮ್ಮುಖದಲ್ಲಿ ಸರಳ ಕಾರ್ಯಕ್ರಮದಲ್ಲಿ ಉಂಗುರ ಬದಲಿಯಿಸಿಕೊಂಡಿರುವುದಾಗಿ ದಾನೀಶ್ ಹೇಳಿದ್ದಾರೆ. ಜೊತೆಗೆ ನೋಂದಣಿ ಮಾಡಿಕೊಳ್ಳುತ್ತಿರುವ ಫೋಟೋವನ್ನು ದಾನೀಶ್ ಶೇರ್ ಮಾಡಿದ್ದಾರೆ.

  'ನಿನ್ನೆ (ಜೂನ್ 09) ನಮ್ಮ ರಿಜಿಸ್ಟರ್ ಮ್ಯಾರೇಜ್ ಬಳಿಕ ಇಂದು ನಮ್ಮ ಹತ್ತಿರದ ಕುಟುಂಬದ 15 ಜನರ ಸಮ್ಮುಖದಲ್ಲಿ ಅನ್ಯಾ ಮತ್ತು ನಾನು ಉಂಗುರ ಬದಲಾಯಿಸಿಕೊಂಡೆವು. ನಾವು ಪ್ರೀತಿಯಿಂದ ಹೊಸ ಪಯಣ ಪ್ರಾರಂಭಿಸುತ್ತಿದ್ದೇವೆ. ದಯವಿಟ್ಟು ನಮಗೆ ಆಶೀರ್ವಾದ ಮಾಡಿ. ನಿಮ್ಮ ಪ್ರೀತಿಯನ್ನು ಕಳುಹಿಸಿಕೊಡಿ' ಎಂದು ಬರೆದುಕೊಂಡಿದ್ದಾರೆ.

  ಆನ್ಯಾ ರಂಗಸ್ವಾಮಿ ವೃತ್ತಿಯಲ್ಲಿ ಗ್ರಾಫಿಕ್ಸ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆನ್ಯಾ ಮುಂಬೈನಲ್ಲಿ ಸ್ವತಂತ್ರವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಇನ್ನು ದಾನಿಶ್ ಸೇಠ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಹಂಬಲ್ ಪೊಲಿಟಿಶಿಯನ್ ನೋಗರಾಜ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದಾನೀಶ್ ಹಿಂದಿಯ ವೆಬ್ ಸೀರಿಸ್ ನಲ್ಲೂ ನಟಿಸಿದ್ದಾರೆ.

  ಕಳೆದ ವರ್ಷ ಫ್ರೆಂಚ್ ಬಿರಿಯಾನಿ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಜೊತಗೆ ಕ್ರಿಕೆಟ್ ಕುರಿತು ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.

  English summary
  TV Personality Danish Sait ties the knot with fiancée Anya Rangaswami today

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X