»   » 'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಬಾಲಿವುಡ್ ನಟ ರಿಷಿ ಕಪೂರ್, ಶ್ರೀದೇವಿ ಸಾವಿನ ವಿಚಾರದಲ್ಲಿ ಮಾಧ್ಯಮಗಳು ಅತಿರೇಕವಾಗಿ ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡ ನಟ ಕಿಚ್ಚ ಸುದೀಪ್ ಪತ್ನಿ ಕೂಡ ಇದಕ್ಕೆ ಬೇಸರ ತೋರಿದ್ದರು.

ಈಗ ಟಿವಿ ಪತ್ರಕರ್ತರೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶ್ರೀದೇವಿ ಸಾವಿನ ಬಗ್ಗೆ ವಿಶೇಷವಾಗಿ ವರದಿ ಮಾಡಿದ್ದಾರೆ. ಈಗಾಗಲೇ ಸುದ್ದಿಯಾಗಿರುವಂತೆ ಬಾತ್ ಟಬ್ ನಲ್ಲಿ ಬಿದ್ದು ಶ್ರೀದೇವಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹಲವು ಅನುಮಾನ ಹಾಗೂ ಕುತೂಹಲಗಳು ಕಾಡುತ್ತಿದ್ದು, ಇದನ್ನ ಪ್ರತ್ಯಕ್ಷವಾಗಿ ಪರೀಕ್ಷಿಸಲು ಮುಂದಾಗಿದ್ದಾರೆ ಟಿವಿ ಪತ್ರಕರ್ತ.

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ಹೌದು, ತೆಲುಗು ಟಿವಿ ವಾಹಿನಿಯ ವರದಿಗಾರನೊಬ್ಬ ಬಾತ್ ಟಬ್ ನಲ್ಲಿ ಮಲಗಿ ಪ್ರತ್ಯಕ್ಷ ವರದಿ ನೀಡಿದ್ದಾರೆ. ಶ್ರೀದೇವಿ ಬಾತ್ ಟಬ್ ನಲ್ಲಿ ಹೇಗೆ ಮಲಗಿದ್ದರು, ಹೇಗೆ ಬಿದ್ದರು, ನಿಜಕ್ಕೂ ಬಾತ್ ಟಬ್ ನಲ್ಲಿ ಸಾಯಲು ಸಾಧ್ಯವಾ ಎನ್ನುವುದನ್ನ ಪರೀಕ್ಷೆ ಮಾಡಿದ್ದಾರೆ.

Tv reporter jumped into a bathtub to cover story of Sridevi death

ಅಷ್ಟೇ ಅಲ್ಲದೇ, ರಾಷ್ಟ್ರೀಯ ಟಿವಿ ವಾಹಿನಿಗಳು ಬಾತ್ ಟಬ್ ಬಗ್ಗೆನೇ ಅರ್ಧ ಗಂಟೆ ಕಾರ್ಯಕ್ರಮ ಮಾಡುತ್ತಿದೆ. ಬಾತ್ ಟಬ್ ಎತ್ತರ, ಅಗಲ, ತೂಕ, ಅದನ್ನ ಹೇಗೆ ತಯಾರಿಸುತ್ತಾರೆ ಮತ್ತು ನಿಜಕ್ಕೂ ಅದರಲ್ಲಿ ಸಾಯುವುದು ಸಾಧ್ಯನಾ ಎಂಬುದನ್ನ ಗ್ರಾಫಿಕ್ಸ್ ಮೂಲಕ ಪ್ರಸಾರ ಮಾಡುತ್ತಿದ್ದಾರೆ.

ಶ್ರೀದೇವಿ ಪಾರ್ಥೀವ ಶರೀರ ಕುಟುಂಬಕ್ಕೆ ಹಸ್ತಾಂತರ: ಇಂದು ಮಧ್ಯರಾತ್ರಿ ಭಾರತಕ್ಕೆ ಆಗಮನ.?

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನಸಾಮಾನ್ಯರು ಛೀಮಾರಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ 'ಬಾತ್ ಟಬ್' ಎನ್ನುವುದು ಈಗ ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ ಗಳಲ್ಲಿ ಟ್ರೆಂಡಿಂಗ್ ಆಗಿದೆ.

English summary
The Indian media has been competing with each other on how to grab maximum eyeballs when discussing the death of the actress sridevi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada