twitter
    For Quick Alerts
    ALLOW NOTIFICATIONS  
    For Daily Alerts

    ಧಾರಾವಾಹಿಗಳ ಚಿತ್ರೀಕರಣ ಮತ್ತೆ ಬಂದ್: ಆದರೆ ಆತಂಕ ಬೇಡ

    |

    ಕೊರೊನಾ ಕಾರಣಕ್ಕೆ ಚಿತ್ರಮಂದಿರಗಳು ಬಂದ್ ಆಗಿ ನಾಲ್ಕು ತಿಂಗಳು ದಾಟಿದೆ. ಮನರಂಜನೆಗೆ ಸದ್ಯಕ್ಕಿರುವುದು ಟಿವಿ ಒಂದೇ. ಕುಟುಂಬ ಸದಸ್ಯರು ಧಾರಾವಾಹಿಗಳನ್ನು ನೋಡಿಕೊಂಡು ಸಮಯಕಳೆಯುತ್ತಿದ್ದರು. ಆದರೆ ಈಗ ಅದಕ್ಕೂ ಕುತ್ತು ಬಂದಿದೆ.

    Recommended Video

    Dhruva Sarja and His Wife Prerana Tests Positive for Coronavirus | Filmibeat Kannada

    ಕೆಲವು ದಿನಗಳ ಹಿಂದಷ್ಟೆ ಚಿತ್ರೀಕರಣವನ್ನು ಪುನರ್‌ ಪ್ರಾರಂಭಿಸಿದ್ದ ಕನ್ನಡದ ಧಾರಾವಾಹಿಗಳು ಈಗ ಮತ್ತೆ ಚಿತ್ರೀಕರಣ ನಿಲ್ಲಿಸುವಂತಾಗಿದೆ.

    'ಬಿಗ್ ಬಾಸ್‌'ನ 'ದೊಡ್ಡಣ್ಣ' ಎಲ್ಲಿಯವನು ಗೊತ್ತೇ?: ಜನಪ್ರಿಯ ಕಾರ್ಯಕ್ರಮದ ಇತಿಹಾಸ ಇಲ್ಲಿದೆ...'ಬಿಗ್ ಬಾಸ್‌'ನ 'ದೊಡ್ಡಣ್ಣ' ಎಲ್ಲಿಯವನು ಗೊತ್ತೇ?: ಜನಪ್ರಿಯ ಕಾರ್ಯಕ್ರಮದ ಇತಿಹಾಸ ಇಲ್ಲಿದೆ...

    ಹೌದು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ವಿವಿಧ 12 ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಣೆ ಆಗಿರುವ ಕಾರಣ ಧಾರಾವಾಹಿಗಳು ಮತ್ತೆ ಚಿತ್ರೀಕರಣ ಬಂದ್ ಮಾಡುವ ಒತ್ತಡಕ್ಕೆ ಸಿಲುಕಿವೆ.

    A

    ಒಂದು ವಾರ ಲಾಕ್‌ಡೌನ್ ಘೋಷಣೆ ಆಗಿದೆ

    ಒಂದು ವಾರ ಲಾಕ್‌ಡೌನ್ ಘೋಷಣೆ ಆಗಿದೆ

    ಸರ್ಕಾರ ಹಾಗೂ ಕೆಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕೊರೊನಾ ಸೋಂಕು ತಡೆಗಟ್ಟಲು ಒಂದು ವಾರಗಳ ಲಾಕ್‌ಡೌನ್ ವಿಧಿಸಿರುವ ಕಾರಣ ಅವಶ್ಯಕ ವಸ್ತುಗಳ ಮಾರಾಟ ಹೊರತಾಗಿ ಇನ್ನಾವುದೇ ಕಾರ್ಯ ಮಾಡುವಂತಿಲ್ಲ. ಹಾಗಾಗಿ ಚಿತ್ರೀಕರಣ ಸಹ ಬಂದ್ ಆಗಲಿದೆ.

    ಜೊತೆ-ಜೊತೆಯಲಿ ಧಾರಾವಾಹಿ ಚಿತ್ರೀಕರಣ ಇಲ್ಲ

    ಜೊತೆ-ಜೊತೆಯಲಿ ಧಾರಾವಾಹಿ ಚಿತ್ರೀಕರಣ ಇಲ್ಲ

    ಕನ್ನಡ ಪಿಲ್ಮೀಬೀಟ್ ಜೊತೆಗೆ ಮಾತನಾಡಿದ ಜೊತೆ-ಜೊತೆಯಲಿ ಧಾರಾವಾಹಿಯ ನಾಯಕ ಅನಿರುದ್, 'ಜೊತೆ-ಜೊತೆಯಲಿ' ಧಾರಾವಾಹಿಯ ಚಿತ್ರೀಕರಣ ಒಂದು ವಾರಗಳ ಕಾಲ್ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

    'ನಿನ್ನಿಂದಲೇ' ಖ್ಯಾತಿಯ ನಟಿ ಎರಿಕಾ ಕುರಿತು ಹರಿದಾಡಿದ್ದು ಸುಳ್ಳು ಸುದ್ದಿ!'ನಿನ್ನಿಂದಲೇ' ಖ್ಯಾತಿಯ ನಟಿ ಎರಿಕಾ ಕುರಿತು ಹರಿದಾಡಿದ್ದು ಸುಳ್ಳು ಸುದ್ದಿ!

    ಒಂದು ತಿಂಗಳಿಗಾಗುವಷ್ಟು ಎಪಿಸೋಡ್‌ಗಳಿವೆ!

    ಒಂದು ತಿಂಗಳಿಗಾಗುವಷ್ಟು ಎಪಿಸೋಡ್‌ಗಳಿವೆ!

    ಆದರೆ ಜೊತೆ-ಜೊತೆಯಲಿ ಧಾರಾವಾಹಿ ತಂಡದ ಬಳಿ ಮುಂದಿನ ಒಂದು ವಾರಗಳ ಕಾಲ ಪ್ರದರ್ಶನ ಮಾಡುವಷ್ಟು ಚಿತ್ರೀಕರಣ ಮಾಡಿಟ್ಟುಕೊಂಡಿರುವ ಎಪಿಸೋಡ್‌ಗಳು ಇವೆಯಂತೆ. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಮೊದಲೇ ಯೋಜಿಸಿ ಹೆಚ್ಚಿನ ಎಪಿಸೋಡ್‌ಗಳನ್ನು ಚಿತ್ರೀಕರಣ ಮಾಡಿಟ್ಟುಕೊಂಡಿದ್ದೇವೆ ಎಂದರು ಅನಿರುದ್.

    ಹಲವು ಧಾರಾವಾಹಿಗಳು ಚಿತ್ರೀಕರಣ ಮಾಡಿಟ್ಟುಕೊಂಡಿವೆ

    ಹಲವು ಧಾರಾವಾಹಿಗಳು ಚಿತ್ರೀಕರಣ ಮಾಡಿಟ್ಟುಕೊಂಡಿವೆ

    ಆದರೆ ಎಲ್ಲಾ ಧಾರಾವಾಹಿಗಳ ಬಳಿಯೂ ಹೆಚ್ಚಿನ ಎಪಿಸೋಡ್ ಬ್ಯಾಂಕ್ ಇದೆ ಎನ್ನುವಂತಿಲ್ಲ. ಸಾಮಾನ್ಯವಾಗಿ ಎರಡು-ಮೂರು ಎಪಿಸೋಡ್‌ ಹೆಚ್ಚಿಗೆ ಶೂಟ್ ಮಾಡಿಟ್ಟುಕೊಳ್ಳುತ್ತಾರೆ. ಈ ಬಾರಿ ಲಾಕ್‌ಡೌನ್ ಘೋಷಣೆ ಮಾಡುವ ಮೂರು ದಿನ ಮುನ್ನ ಎಚ್ಚರಿಕೆ ಕೊಟ್ಟಿದ್ದರಿಂದ ಬಹುತೇಕ ಧಾರಾವಾಹಿ ತಂಡಗಳು ಹೆಚ್ಚಿನ ಎಪಿಸೋಡ್‌ಗಳನ್ನು ಚಿತ್ರೀಕರಿಸಿಕೊಂಡಿವೆ.

    ರಿಯಾಲಿಟಿ ಶೋ: ಖಾಸಗಿ ಬದುಕು ಮನರಂಜನೆಯ ಸರಕು ಆಗಿದ್ದು ಇಲ್ಲಿಂದ...ರಿಯಾಲಿಟಿ ಶೋ: ಖಾಸಗಿ ಬದುಕು ಮನರಂಜನೆಯ ಸರಕು ಆಗಿದ್ದು ಇಲ್ಲಿಂದ...

    English summary
    Kannada TV serials shooting stoped due to lock down imposed by government. Some serials have episode bank for one week.
    Thursday, July 16, 2020, 9:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X