»   » ಕನ್ನಡ ಚಾನೆಲ್‌ಗಳು ಸ್ಪರ್ಧೆಗೆ ನಿಲ್ಲುವ ಸ್ಥಿತಿ ಇದೆ.

ಕನ್ನಡ ಚಾನೆಲ್‌ಗಳು ಸ್ಪರ್ಧೆಗೆ ನಿಲ್ಲುವ ಸ್ಥಿತಿ ಇದೆ.

By: * ಇಮ್ರಾನ್‌ ಖುರೇಷಿ
Subscribe to Filmibeat Kannada

ಬೆಂಗಳೂರು : ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಗೆದ್ದು, ಹಣ ಮಾಡುವ ಉದ್ದೇಶಕ್ಕೆ ಈಗ ಕಡಿವಾಣ ಬಿದ್ದಿದೆ. ವರ್ಷ ಕಳೆದ ಮೇಲೆ ಕನ್ನಡದ ಕೆಲವು ಖಾಸಗಿ ಟಿ.ವಿ. ಚಾನೆಲ್‌ಗಳ ಮಾಲಿಕರಿಗೆ ಜೇಬು ಕಚ್ಚುತ್ತಿದೆ. ಆದರೂ ಈಸಬೇಕು ಈಸಿ ಜಯಿಸಬೇಕು ಎಂದು ಹೋರಾಟ ಮುಂದುವರಿದೇ ಇದೆ.

ಈ ಹೋರಾಟದಲ್ಲಿ ಬಲಿಷ್ಠರು ಮಾತ್ರ ಬದುಕುಳಿಯಲು ಸಾಧ್ಯ. ಈಗಾಗಲೇ ಕೆಲವು ಖಾಸಗಿ ಕನ್ನಡ ಟಿ.ವಿ. ಚಾನೆಲ್‌ಗಳು ಭಾರಿ ಬಾಕಿ ಉಳಿಸಿಕೊಂಡಿವೆ. ಕಿರುತೆರೆಗೆ ಧಾರಾವಾಹಿ, ಸಾಕ್ಷ್ಯಚಿತ್ರ ಇತ್ಯಾದಿ ಇತ್ಯಾದಿ ತಯಾರಿಸಿಕೊಟ್ಟಿರುವ ನಿರ್ಮಾಪಕರಿಗೆ ಚಾನೆಲ್‌ಗಳು ಭಾರಿ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡಿವೆ.

ಚಾನೆಲ್‌ಗಳು ಎದುರಿಸುತ್ತಿರುವ ಹಣಕಾಸಿನ ಮುಗ್ಗಟ್ಟಿನಿಂದ ಕಿರುತೆರೆಯ ನಿರ್ಮಾಪಕರೂ ಕಂಗೆಟ್ಟಿದ್ದಾರೆ. ಅಂದಾಜು 1- 1.2 ಶತಕೋಟಿ ರುಪಾಯಿಗಳ ಆದಾಯ ತರುವ ಜಾಹೀರಾತು ಮಾರುಕಟ್ಟೆ ಮೇಲೆ ಕಣ್ಣಿಟ್ಟಿರುವ ಎಲ್ಲ 7 ಕನ್ನಡ ಚಾನೆಲ್‌ಗಳು ಆ ಜಾಹೀರಾತಿಗಾಗಿ ಕನ್ನಡದ ಕಣ್ಣುಗಳನ್ನು ತಮ್ಮ ಚಾನೆಲ್‌ಗೆ ಸೆಳೆಯುವ ಹೋರಾಟ ನಡೆಸುತ್ತಿವೆ.

ಈಗ ಉದಯಾ ಟಿವಿ ಶೇಕಡಾ 50ರಷ್ಟು ವೀಕ್ಷಕ ಮಾರುಕಟ್ಟೆಯನ್ನು ಪ್ರವೇಶಿಸಿದ್ದರೆ, ದೂರದರ್ಶನದ ಚಂದನ 30ರಷ್ಟು ಆಕ್ರಮಿಸಿದೆ. ಕಳೆದ ವರ್ಷ ಟೀವಿ ಸಂಸ್ಥೆಗಳಿಂದ ಮೂರು ಚಾನೆಲ್‌ಗುಳು ಹುಟ್ಟಿಕೊಂಡವು. ಉದಯಾ ಉಷೆ ಹಾಗೂ 24 ಗಂಟೆ ವಾರ್ತಾ ಪ್ರಸಾರದ ಚಾನೆಲ್‌ ಹುಟ್ಟು ಹಾಕಿದರೆ, ರಾಮೋಜಿ ರಾವ್‌ ಗ್ರೂಪ್‌ನಿಂದ ಈ ಟಿವಿ ಕನ್ನಡ ಜನ್ಮ ತಾಳಿತು.

ಮರಾಠಿ ಪ್ರಭಾತ್‌ ಚಾನೆಲ್‌ನ ಐ2ಐ ಕ್ರಿಯೇಟಿವ್‌ ಗ್ರೂಪ್‌ ಸುಪ್ರಭಾತವನ್ನೂ, ಏಷ್ಯಾನೆಟ್‌ ಸಹಭಾಗಿತ್ವದಲ್ಲಿ ಕಾವೇರಿ ಕನ್ನಡ ಪ್ರೇಕ್ಷಕರನ್ನು ಗೆಲ್ಲಲು ಮನೆಹೊಕ್ಕವು. ಆದರೆ, ಕನ್ನಡದಲ್ಲಿ ದೊಡ್ಡ ಪ್ರಮಾಣದ ಆದಾಯ ಪಡೆಯುವುದು ಸುಲಭ ಸಾಧ್ಯವಲ್ಲ ಎಂಬುದು ಕಾವೇರಿ ನಡೆಸುತ್ತಿರುವ ರಿkುೕ ಏಷ್ಯಾನೆಟ್‌ ಸಹಭಾಗಿತ್ವದ ದಕ್ಷಿಣ್‌ ಮೀಡಿಯಾದ ಸಿ.ಇ.ಓ. ಅರವಿಂದ್‌ ಕುಮಾರ್‌ ಅನಿಸಿಕೆ. ಆದರೆ, ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಈ ಟಿವಿ 30 ರಿಂದ 35 ಬ್ರಾಂಡ್‌ಗಳ ಜಾಹೀರಾತು ಪಡೆದಿದೆ. ಇದು ಕೇವಲ ಆರಂಭ. ಈಗಷ್ಟೇ ಸ್ಪರ್ಧೆ ಪ್ರಾರಂಭವಾಗಿದೆ ಎನ್ನುತ್ತಾರೆ ಈ ಟಿವಿಯ ಸುಬ್ಬಾ ನಾಯ್ಡು.

ಕರ್ನಾಟಕದಲ್ಲಿ ಮತ್ತೊ ಒಂದು ಸಮಸ್ಯೆ ಇದೆ. ಕನ್ನಡ ಚಾನೆಲ್‌ಗಳು ಕೇವಲ ಕನ್ನಡ ಚಾನೆಲ್‌ಗಳ ಜತೆಗಷ್ಟೇ ಅಲ್ಲದೆ ಇತರ ಭಾಷೆಯ (ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು) ಚಾನೆಲ್‌ಗಳೊಂದಿಗೂ ಸ್ಪರ್ಧೆಗೆ ಇಳಿಯಬೇಕಾದ ಪರಿಸ್ಥಿತಿ ಇದೆ. ಬೆಂಗಳೂರೂ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಕನ್ನಡಿಗರು ಪರ ಭಾಷೆಯ ಟಿ.ವಿ. ಚಾನೆಲ್‌ಗಳನ್ನೂ ನೋಡುತ್ತಾರೆ.

ಮಲೆಯಾಳಂ ಚಾನೆಲ್‌ ನೋಡುವವರ ಸಂಖ್ಯೆಗೂ ಕಡಿಮೆ ಏನಿಲ್ಲ. ಹೀಗಾಗಿ, ಉತ್ತಮ ಕಾರ್ಯಕ್ರಮಗಳಿಂದ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕೆಲಸವನ್ನು ಕನ್ನಡ ಚಾನೆಲ್‌ಗಳು ಮಾಡಲೇಬೇಕು. ಹೀಗಾಗಿ ಇಲ್ಲಿ ಮಾರುಕಟ್ಟೆ ತುಂಬಾ ವಿಸ್ತಾರವಾಗಿದೆ ಎಂಬುದು ಕುಮಾರ್‌ ಅನಿಸಿಕೆ. ಸದ್ಯಕ್ಕೆ ದೂರದರ್ಶನದ ಜತೆಗೆ ಉತ್ತಮ ಸ್ಥಿತಿಯಲ್ಲಿರುವುದು ಉದಯ ಟಿವಿ ಮಾತ್ರ. ಈ ಸ್ಪರ್ಧಾ ಮಾರುಕಟ್ಟೆಯಲ್ಲಿ ಉಳಿದುಕೊಳ್ಳುವ ಸಾಮರ್ಥ್ಯ ಇರುವವರು ಮಾತ್ರ ಉಳಿಯಲು ಸಾಧ್ಯ.

English summary
The pocket-pinching shakeout is not quite there. For the television industry in Karnataka
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada