For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಶೇರ್ ಖಾನ್ ಸಾವಿಗೆ ಟ್ವೀಟ್ ಕಂಬನಿ

  By Mahesh
  |

  ತೆಲುಗು, ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟ ಶ್ರೀಹರಿ ಹಠಾತ್ ಸಾವಿಗೆ ಚಿತ್ರರಂಗ ಸೇರಿದಂತೆ ಅಪಾರ ಅಭಿಮಾನಿಗಳು ಕಂಬನಿ ಮಳೆಗೆರೆದಿದ್ದಾರೆ. ಮಗಧೀರ ಚಿತ್ರದ ಶೇರ್ ಖಾನ್ ಪಾತ್ರ ಇಂದಿಗೂ ಕಣ್ಣಿಗೆ ಕಟ್ಟಿದ್ದಂತೆ ಇದೆ ಶ್ರೀಹರಿ ಅವರ ದನಿ ನನ್ನ ಕಿವಿಯಲ್ಲಿ ಗುಂಯ್ ಗುಟ್ಟುತ್ತಿದೆ ಎಂದು ಅಭಿಮಾನಿಗಳು ಟ್ವೀಟ್ ಮಾಡಿ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.

  ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1964, ಆಗಸ್ಟ್ 15ರಂದು ಬಾಲನಗರ್ ನಲ್ಲಿ ಜನಿಸಿದ ಶ್ರೀಹರಿ ಅವರು ಕನ್ನಡ ಕೋಕೋ, ಓ ಪ್ರೇಮವೇ ಸೇರಿದಂತೆ ಸುಮಾರು 97 ಚಿತ್ರಗಳಲ್ಲಿ ಅಭಿನಯಿಸಿದ್ದರು.

  ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ಸೇರಿದ ಶ್ರೀಹರಿ ಅವರು ಜಿಮ್ ಸೇರಿ ಉತ್ತಮ ದೇಹ ಬೆಳೆಸಿಕೊಂಡು ಫೈಟರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ನಂತರ ಹೀರೋ ಆಗಿ ಪ್ರಮುಖ ಪೋಷಕ ನಟ, ಖಳನಟ ಜನಪ್ರಿಯತೆ ಗಳಿಸಿದವರು. ಗಾಡ್ ಫಾದರ್ ಗಳಿಲ್ಲದೆ ಸ್ಟಾರ್ ಆಗಿ ಬೆಳೆದ ಶ್ರೀಹರಿ ಜೀವನ ಕಥೆ ಸಿನಿಮಾಕ್ಕೆ ಉತ್ತಮ ಕಥೆ ಒದಗಿಸಬಲ್ಲುದು

  ದಾಸರಿ ನಾರಾಯಣ ರಾವ್ ಅವರ ಗರಡಿಯಿಂದ ಬಂದ ಪ್ರತಿಭೆ ಶ್ರೀಹರಿ ಪೊಲೀಸ್ ವೇಷ ಧರಿಸಿ ಖಡಕ್ ಡೈಲಾಗ್ ಹೊಡೆಯುತ್ತಿದ್ದ ನಟ ಮೊದಲ ಕ್ಲಿಕ್ ಆದ ಚಿತ್ರದಲ್ಲೂ ಪೊಲೀಸ್ ಪತ್ರ ಇತ್ತೀಚೆಗೆ ಕೊನೆ ಗಳಿಗೆಯಲ್ಲೂ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು ಕಾಕತಾಳೀಯ. ಶ್ರೀಹರಿ ಅವರ ನಿಧನಕ್ಕೆ ವಿವಿಧ ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದ್ದಾರೆ.

  ನಟ ಸಿದ್ದಾರ್ಥ್

  ನಟ ಶ್ರೀಹರಿ ಅವರ ಹಠಾತ್ ನಿಧನಕ್ಕೆ ಕಂಬನಿ ಮಿಡಿದ ನಟ ಸಿದ್ಧಾರ್ಥ್. ಈ ಇಬ್ಬರು ನಟರು ನುವ್ವು ವಸ್ತಾನಂಟೆ ನೇನು ವದ್ದಂಟಾನ' ಚಿತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು.

  ಸಮಂತಾ ಟ್ವೀಟ್

  ನಟ ಸಿದ್ದಾರ್ಥ್ ಜತೆ ಇತ್ತೀಚೆಗಷ್ಟೆ ಬ್ಲಾಕ್ ಟೈ ಡಿನ್ನರ್ ಪಾರ್ಟಿ ಮುಗಿಸಿಕೊಂಡು ಸಂಭ್ರಮಪಟ್ಟಿದ್ದ ಸಮಂತಾ ಈಗ ಸಾವಿನ ಸುದ್ದಿ ಕೇಳಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

  ಸಂಜನಾ ಟ್ವೀಟ್

  ಸಂಜನಾ ಟ್ವೀಟ್

  ಬುಧವಾರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಬೆಂಗಳೂರು ಬೆಡಗಿ ಸಂಜನಾಗೆ ಶ್ರೀಹರಿ ಅವರ ಸಾವಿನ ಸುದ್ದಿ ಕೇಳಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾವು ಇಂದು ಹುಟ್ಟುಹಬ್ಬ ಸಂಭ್ರಮಾಚರಣೆ ಕ್ಯಾನ್ಸಲ್ ಮಾಡಿದ್ದೇನೆ. ಶ್ರೀಹರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕಿದೆ ಎಂದು ಟ್ವೀಟ್(@actressanjjanaa) ಮಾಡಿದ್ದಾರೆ.

  ಶ್ರೀಹರಿ ಬದುಕಿನ ದುರಂತ

  ಶ್ರೀಹರಿ ಬದುಕಿನ ದುರಂತ

  ಶ್ರಮಜೀವಿ ಶ್ರೀಹರಿ ಚಿತ್ರರಂಗದಲ್ಲಿ ಬೆಳೆದ ರೀತಿ ಕಂಡು ಅನೇಕ ಜನ ಅಸೂಯೆ ಪಟ್ಟವರು ಇದ್ದಾರೆ. ಆದರೆ, ನಿಜ ಜೀವನದಲ್ಲೂ ಫೈಟರ್ ಆಗಿದ್ದ ಶ್ರೀಹರಿ ಅವರು ಚಿತ್ರರಂಗದ ಡ್ಯಾನ್ಸರ್ ಡಿಸ್ಕೋ ಶಾಂತಿ ಅವರನ್ನು 1998ರಲ್ಲಿ ಕೈಹಿಡಿದು ಬಾಳು ನೀಡಿದರು. ದಂಪತಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ಹೆಣ್ಣು ಮಗು ಜನಿಸಿತು. ಅಕ್ಷರ ಹೆಸರಿನ ಕೂಸು ನಾಲ್ಕು ತಿಂಗಳ ಪ್ರಾಯದಲ್ಲಿ ಅಸುನೀಗಿತು. ಪುತ್ರಿ ನೆನಪಿಗೆ ಶ್ರೀಹರಿ ಅಕ್ಷಯ ಸ್ಮಾರಕ ಸಂಸ್ಥೆ ಸ್ಥಾಪಿಸಿ ನಾಲ್ಕು ಗ್ರಾಮಗಳನ್ನು ದತ್ತು ಪಡೆದಿದ್ದರು.

  ಮಂಚು ಮನೋಜ್

  ಕುಟುಂಬ ಸದಸ್ಯರೊಬ್ಬರನ್ನು ಕಳೆದುಕೊಂಡ ದುಃಖವಾಗುತ್ತಿದೆ ಎಂದು ಕಂಬಿನಿ ಮಿಡಿದ ಮೋಹನ್ ಬಾಬು ಪುತ್ರ ಮಂಚು ಮನೋಜ್

  ನಿರ್ದೇಶಕ ಹರೀಶ್

  ನಿರ್ದೇಶಕ ಹರೀಶ್

  ಜ್ಯೂ. ಎನ್ಟಿಆರ್ ರಾಮಯ್ಯ ವಸ್ತಾವಯ್ಯ ಚಿತ್ರ ಈ ವಾರ ತೆರೆಗೆ ಬರುತ್ತಿದ್ದು, ಈ ಸಂಭ್ರಮದಲ್ಲಿದ್ದ ನಿರ್ದೇಶಕ ಹರೀಶ್ ಅವರು @harish2you ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

  ಅಲ್ಲರಿ ನರೇಶ್

  ಶ್ರೀಹರಿ ನಮ್ಮ ಶೇರ್ ಖಾನ್ ಇನ್ನಿಲ್ಲ

  ಮಾಧ್ಯಮಗಳ ಕಂಬನಿ

  ಟಿವಿ 9 ಪ್ರತಿನಿಧಿ, ಸಿನಿಮಾ ವಿಮರ್ಶಕ ಜಲಪತಿ ಗುಡೆಲ್ಲಿ ಅವರು ಶ್ರೀಹರಿ ಸಾವಿನ ಸುದ್ದಿ ಟ್ವೀಟ್ ಮಾಡಿ ವರದಿ ಮಾಡಿದ ಮೊದಲಿಗರಾಗಿದ್ದು, ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

  ಉತ್ತಮ ನಟ ಇನ್ನಿಲ್ಲ

  ನಟ, ಸಾಹಿತಿ ವೆನ್ನೆಲ ಕಿಶೋರ್ ಪ್ರತಿಕ್ರಿಯಿಸಿ ಎಂದಿಗೂ ಯಾವುದಕ್ಕೂ ಇಲ್ಲ ಎನ್ನುತ್ತಿದ್ದ ಶ್ರೀಹರಿ ಇನ್ನಿಲ್ಲ ಎಂಬುದು ಅರಗಿಸಿಕೊಳ್ಳಲು ಆಗುತ್ತಿಲ್ಲ

  ಚಿರಂಜೀವಿ ದಿಗ್ಭ್ರಮೆ

  ಚಿರಂಜೀವಿ ಸೇರಿದಂತೆ ವಿವಿಧ ಚಿತ್ರರಂಗದ ಗಣ್ಯರು ಶ್ರೀಹರಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

  English summary
  Raghumudri Srihari , better known as Srihari died at the Leelavathi hospital in Mumbai today (Oct 9). The award-winning actor was reportedly ailing from liver related problems. For the past few days, he had been undergoing treatment for cancer at the hospital, where he breathed his last this afternoon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X