»   » ಅಭಿಮಾನಿಗಳಲ್ಲಿ ಗಣೇಶ್ ಕ್ಷಮೆ ಯಾಚಿಸಿದ್ದು ಯಾಕೆ?

ಅಭಿಮಾನಿಗಳಲ್ಲಿ ಗಣೇಶ್ ಕ್ಷಮೆ ಯಾಚಿಸಿದ್ದು ಯಾಕೆ?

Posted By:
Subscribe to Filmibeat Kannada

ಸದಾ ಪಟ ಪಟ ಅಂತ ಮಾತನಾಡಿಕೊಂಡು, ಫುಲ್ ಜೋಷ್ ನಲ್ಲಿ ಇರುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಬೇಸರಗೊಂಡಿದ್ದಾರೆ. ಇದಕ್ಕೆ ಕಾರಣ ಅವರ 'ಸ್ಟೈಲ್ ಕಿಂಗ್' ಸಿನಿಮಾ.

ಹೌದು, ಗಣೇಶ್ ಹಾಕಿದ್ದ ಪ್ಲಾನ್ ಪ್ರಕಾರ ಇಷ್ಟೊತ್ತಿಗಾಗಲೇ 'ಸ್ಟೈಲ್ ಕಿಂಗ್' ರಿಲೀಸ್ ಆಗಿರ್ಬೇಕಿತ್ತು. ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್ ಕೂಡ 'ಸ್ಟೈಲ್ ಕಿಂಗ್' ಈ ತಿಂಗಳು ಬಿಡುಗಡೆ ಆಗಲಿದೆ, ಮುಂದಿನ ತಿಂಗಳು ಆಗಲಿದೆ ಅಂತ ಕಳೆದ ವರ್ಷದಿಂದ ಹೇಳುತ್ತಲೇ ಇದ್ದಾರೆ. [ಗಣೇಶ್ 'ಸ್ಟೈಲ್ ಕಿಂಗ್' ಚಿತ್ರದ ಸ್ಟೈಲಿಶ್ ಟ್ರೇಲರ್ ನೋಡಿದ್ರಾ?]


ಆದ್ರೆ, ಈ ವರೆಗೂ 'ಸ್ಟೈಲ್ ಕಿಂಗ್' ಚಿತ್ರದ ಬಿಡುಗಡೆ ದಿನಾಂಕ ನಿಗದಿ ಆಗಿಲ್ಲ. ಮೊನ್ನೆ ಮೊನ್ನೆಯಷ್ಟೇ 'ಸ್ಟೈಲ್ ಕಿಂಗ್' ಟ್ರೇಲರ್ ರಿಲೀಸ್ ಆಗಿದೆ ಅಷ್ಟೆ. ಟ್ರೇಲರ್ ಗೆ ಫಿದಾ ಆಗಿರುವ ಗಣೇಶ್ ಅಭಿಮಾನಿಗಳು 'ಸ್ಟೈಲ್ ಕಿಂಗ್' ಬಿಡುಗಡೆ ಯಾವಾಗ ಆಗಲಿದ್ಯೋ ಅಂತ ಕಾತರದಿಂದ ಕಾಯುತ್ತಿದ್ದಾರೆ. ಮುಂದೆ ಓದಿ....


ಗಣೇಶ್ ಟ್ವೀಟ್

''ಸ್ಟೈಲ್ ಕಿಂಗ್' ರಿಲೀಸ್ ಯಾವಾಗ? ಚಿತ್ರ ತಡವಾಗುತ್ತಿರುವುದಕ್ಕೆ ಕಾರಣ ಏನು?' ಅಂತ ಟ್ವೀಟ್ ಮಾಡುವ ಎಲ್ಲರಿಗೂ ಉತ್ತರ ನೀಡುವುದಕ್ಕೆ ಆಗದೆ, ಗಣೇಶ್ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಕ್ಷಮೆ ಯಾಚಿಸಿದ್ದಾರೆ.


ಗಣೇಶ್ ಹೇಳಿರುವುದೇನು?

''ಚಿತ್ರ ಡಿಲೇ ಆಗಿರುವುದಕ್ಕೆ ಕ್ಷಮೆ ಇರಲಿ. ನಟನಾಗಿ ನನಗೆ ನನ್ನದೇ ಆದ ಚೌಕಟ್ಟಿದೆ. ಚಿತ್ರತಂಡದ ಜೊತೆ ಮಾತುಕತೆ ನಡೆಸಿದ್ದೇನೆ. ಅತಿ ಶೀಘ್ರದಲ್ಲೇ ಸಿನಿಮಾ ಬಿಡುಗಡೆ ಆಗಲಿದೆ'' ಅಂತ ಗಣೇಶ್ ಟ್ವೀಟ್ ಮಾಡಿದ್ದಾರೆ.


ಕೆಲ ಪತ್ರಿಕೆಗಳಲ್ಲಿ ವರದಿ

ಅಷ್ಟಕ್ಕೂ ಗಣೇಶ್ ಹೀಗೆ ಟ್ವೀಟ್ ಮಾಡುವುದಕ್ಕೆ ಕಾರಣ ಕೆಲವು ಪತ್ರಿಕೆಗಳು ಮಾಡಿರುವ ವರದಿ. ''ಸ್ಟೈಲ್ ಕಿಂಗ್' ಚಿತ್ರದ ಬಿಡುಗಡೆಗೆ ಗಣೇಶ್ ಜವಾಬ್ದಾರಿ ತೆಗೆದುಕೊಳ್ಳದೇ ಇದ್ದರೆ, ಚಿತ್ರ ಬಿಡುಗಡೆ ಕಷ್ಟ'' ಅಂತ ವರದಿ ಆಗಿದೆ.


ನಾನೂ ಕಾಯುತ್ತಿದ್ದೇನೆ!

''ನನ್ನ ಚಿತ್ರಗಳ ಬಗ್ಗೆ ನನಗೆ ಜವಾಬ್ದಾರಿ ಇದೆ. ನಾನು ನನ್ನ ಬೆಸ್ಟ್ ನೀಡಿದ್ದೇನೆ. ನಾನು ಕೂಡ ಕಾಯುತ್ತಿದ್ದೇನೆ'' ಅಂತ ಗಣೇಶ್ ಟ್ವೀಟ್ ಮಾಡಿದ್ದಾರೆ.


ಅಷ್ಟಕ್ಕೂ 'ಸ್ಟೈಲ್ ಕಿಂಗ್' ಬಿಡುಗಡೆ ತಡವಾಗುತ್ತಿರುವುದಕ್ಕೆ ಕಾರಣ?

'ಸ್ಟೈಲ್ ಕಿಂಗ್' ಚಿತ್ರದ ಹಾಡೊಂದಕ್ಕೆ ಗ್ರಾಫಿಕ್ಸ್ ಬಳಕೆ ಮಾಡಿರುವ ಕಾರಣ ತಡವಾಗುತ್ತಿದೆ ಅಂತ ನಿರ್ದೇಶಕ ಪಿ.ಸಿ.ಶೇಖರ್ ಕಾರಣ ನೀಡ್ತಾರೆ.


ಡಿಸೆಂಬರ್ ನಲ್ಲೇ ರಿಲೀಸ್ ಆಗ್ಬೇಕಿತ್ತು!

'ಸ್ಟೈಲ್ ಕಿಂಗ್' ಸಿನಿಮಾ ಡಿಸೆಂಬರ್ ನಲ್ಲೇ 'ಮಾಸ್ಟರ್ ಪೀಸ್' ಜೊತೆಗೆ ರಿಲೀಸ್ ಆಗ್ಬೇಕಿತ್ತು. ಆದರೆ ಆಗಲಿಲ್ಲ.


ಮುಂದಿನ ತಿಂಗಳು?

ಮುಂದಿನ ತಿಂಗಳು ಪುನೀತ್ ರಾಜ್ ಕುಮಾರ್ ರವರ 'ಚಕ್ರವ್ಯೂಹ' ಸಿನಿಮಾ ರಿಲೀಸ್ ಆಗಲಿದೆ. ಅಷ್ಟರೊಳಗೆ 'ಸ್ಟೈಲ್ ಕಿಂಗ್' ರಿಲೀಸ್ ಆಗುತ್ತೋ, ಇಲ್ವೋ? ಇನ್ನೂ ಡಿಸೈಡ್ ಆಗಿಲ್ಲ.


ಗಣೇಶ್ ಗೆ ತೊಂದರೆ!

ಗಣೇಶ್ ಅಭಿನಯದ 'ZOOಮ್' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿ ರಿಲೀಸ್ ಗೆ ರೆಡಿಯಾಗಿದೆ. ಕ್ಯೂನಲ್ಲಿನ್ನೂ 'ಪಟಾಕಿ' ಮತ್ತು 'ಮುಂಗಾರು ಮಳೆ-2' ಚಿತ್ರಗಳಿವೆ. ಒಂದು ಚಿತ್ರದ ರಿಲೀಸ್ ತಡವಾದರೆ, ಬಾಕಿ ಚಿತ್ರಗಳ ಮೇಲೆ ಪರಿಣಾಮ ಬೀರುವುದು ಖಂಡಿತ. ಹೀಗಾಗಿ ಗಣೇಶ್ ಕೊಂಚ ಬೇಸರಗೊಂಡಿದ್ದಾರೆ.


English summary
Kannada Actor Ganesh has taken his twitter account to apologize his fans for the delay of his 'Style King' movie release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada