ಟ್ವೀಟ್ ಆಫ್ ದಿ ಡೇ: ಯಾರ್ ಯಾರು ಏನು ಟ್ವೀಟ್ ಮಾಡಿದ್ದಾರೆ.?

By Bharath Kumar

ಸಿನಿಮಾ ತಾರೆಯರು ಈಗೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ತಮ್ಮ ಸಿನಿಮಾ ಮತ್ತು ಖಾಸಗಿ ಜೀವನದ ಬೆಳವಣಿಗೆಗಳನ್ನ, ಆಗುಹೋಗುಗಳನ್ನು ಅಭಿಮಾನಿಗಳಿಗೆ ನೇರವಾಗಿ ಮುಟ್ಟಿಸುತ್ತಿದ್ದಾರೆ.

ಯಾರಿಗಾದರೂ ಏನಾದರು ಹೇಳಬೇಕು ಎನಿಸಿದ್ರೆ, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಕೆಲವರ ಅಭಿಪ್ರಾಯಗಳು ವಿವಾದ ಹುಟ್ಟಿಹಾಕಿರುವುದು ಉಂಟು.

ಈ ದಿನ ಯಾವ ನಟ-ನಟಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಏನು ಟ್ವೀಟ್ ಮಾಡಿದ್ದಾರೆ, ಯಾವ ವಿಷ್ಯದ ಬಗ್ಗೆ ಮಾತನಾಡಿದ್ದಾರೆ, ಯಾವ ಫೋಟೋ ಪೋಸ್ಟ್ ಮಾಡಿದ್ದಾರೆ ಎಂಬುದನ್ನ ''ಟ್ವೀಟ್ ಆಫ್ ದಿ ಡೇ'' ವಿಶೇಷ ಸ್ಟೋರಿಯಲ್ಲಿ ನೋಡಬಹುದು. ಮುಂದೆ ಓದಿ.....

ಎಚ್ಚರಿಕೆ ಕೊಟ್ಟ ದಾಸ

ದರ್ಶನ್ ತೂಗುದೀಪ ಎಂಬ ನಕಲಿ ಖಾತೆ ಬಳಸಿ, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನ ಮಾಡಲಾಗಿತ್ತು. ಇಂತವರಿಗೆ ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ ಕೊಟ್ಟಿದ್ದಾರೆ. ''Con- ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಈ ರೀತಿ ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಕೊಳ್ಳುವುದಾಗಿ ಹೇಳಿದ್ದಾರೆ. ದಯಮಾಡಿ ಯಾರೂ ಇಂತಹ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಳಕಳಿಯ ವಿನಂತಿ''- ದಾಸ ದರ್ಶನ್

ಮನೆ ವಿನ್ಯಾಸದ ಖುಷಿ ಹಂಚಿಕೊಂಡ ಜಗ್ಗೇಶ್

ಜಗ್ಗೇಶ್ ಅವರ ಮನೆಯ ಒಳ ವಿನ್ಯಾಸ ಬದಲಾಗಿದ್ದು, ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ''ಪರಿಮಳನ ಚಿಂತನೆಯಿಂದ ಬದಲಾದ ನಮ್ಮ ಮನೆಯ ಒಳಾಂಗಣ..ನನಗೆ ನನ್ನ ಮನೆಯೇ ಮಂತ್ರಾಲಯ.. ಶುಭರಾತ್ರಿ..ಸವಿಗನಸು.. '' - ಜಗ್ಗೇಶ್, ನಟ

ಅಣ್ಣನ ಚಿತ್ರಕ್ಕೆ ವಿಶ್ ಮಾಡಿದ ಧ್ರುವ

ಚಿರಂಜೀವಿ ಸರ್ಜಾ ಅಭಿನಯದ ಅಮ್ಮ ಐ ಲವ್ ಯೂ ಸಿನಿಮಾ ಇದೇ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರಕ್ಕೆ ಮತ್ತು ಸಹೋದರನಿಗೆ ನಟ ಧ್ರುವ ಸರ್ಜಾ ಟ್ವಿಟ್ಟರ್ ಮೂಲಕ ಶುಭಕೋರಿದ್ದಾರೆ.

ಉಪ್ಪಿಗೆ ಚಾಲೆಂಜ್ ಹಾಕಿದ ಕಿಚ್ಚ

ಕಿಚ್ಚ ಸುದೀಪ್ 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಸವಾಲನ್ನ ನಟ ಉಪೇಂದ್ರ ಅವರಿಗೆ ನೀಡಿದ್ದು, ''ನೀವು ಸದಾ ಫಿಟ್ ಆಗೇ ಇರ್ತೀರಾ. ಆದ್ರೆ, ಬೇರೆಯವರಿಗೆ ನೀವು ಪ್ರೇರಣೆಯಾಗುತ್ತೀರಾ'' ಎಂದು ಚಾಲೆಂಜ್ ನೀಡಿದ್ದಾರೆ.

ಫೋಟೋ ಹಂಚಿಕೊಂಡ ಉಪ್ಪಿ

ಪ್ರಜಾಕೀಯ ಹೆಸರಿನಲ್ಲಿ ಕೆಲವು ಯುವಕರು ರಸ್ತೆಯಲ್ಲಿ ಆಗಿರುವ ಗುಂಡಿಗಳನ್ನ ಸ್ವಯಂ ಪ್ರೇರಿತವಾಗಿ ಮುಚ್ಚುತ್ತಿರುವ ಫೋಟೋವನ್ನ ಉಪೇಂದ್ರ ಶೇರ್ ಮಾಡಿದ್ದಾರೆ.

ಅನಾಹುತದ ಬಗ್ಗೆ ಸ್ಪಷ್ಟನೆ ನೀಡಿದ ದೀಪಿಕಾ

ನಟಿ ದೀಪಿಕಾ ಪಡುಕೋಣೆ ನವಾಸವಾಗಿರುವ ಅಪಾರ್ಟ್ಮೆಂಟ್ ನಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿದೆ. ಆದ್ರೆ, ದೀಪಿಕಾ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ''ನಾನು ಸುರಕ್ಷಿತವಾಗಿದ್ದೇನೆ. ಎಲ್ಲರಿಗೂ ಧನ್ಯವಾದಗಳು. ಬೆಂಕಿಯಲ್ಲಿ ಸಿಲುಕಿಕೊಂಡಿರುವವರು ಸುರಕ್ಷಿತವಾಗಲಿ ಎಂದು ಬೇಡಿಕೊಳ್ಳೊಣ'' ಎಂದಿದ್ದಾರೆ.

More from Filmibeat

English summary
Tweet of the day - Challenging star darshan, kiccha sudeep, jaggesh, deepika padukone, dhruva sarja What did they tweet today?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X