For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಮತ್ತೆ ಕಾಮೆಂಟ್.!

  By Harshitha
  |

  ''ಸೂಪರ್ ಸ್ಟಾರ್ ರಜನಿಕಾಂತ್ ಬ್ಯಾಡ್ ಲುಕರ್. ಅವರಿಗೆ ಸರಿಯಾಗಿ ಡ್ಯಾನ್ಸ್ ಮಾಡೋಕೆ ಬರಲ್ಲ'' ಅಂತೆಲ್ಲಾ ಮನಬಂದಂತೆ ಟ್ವೀಟ್ ಮಾಡಿ, ದಕ್ಷಿಣ ಭಾರತದ ಸ್ಟಂಟ್ ಗಾಡ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಲೇವಡಿ ಮಾಡಿದ್ದರು. ಇದರಿಂದ ವ್ಯಾಪಕ ಟೀಕೆಗೂ ಗುರಿಯಾಗಿದ್ದರು.

  ರಜನಿಕಾಂತ್ ಅಭಿಮಾನಿಗಳಿಂದ ಮಹಾ ಮಂಗಳಾರತಿ ಆದ ಮೇಲೆ, ''ಅದು ಹೊಗಳಿದ್ದೇ ಹೊರತು, ತೆಗಳಿದ್ದು ಅಲ್ಲ'' ಅಂತ ಸ್ಪಷ್ಟಣೆ ಕೊಟ್ಟಿದ್ದ ವರ್ಮಾ, ಈಗ ಮತ್ತೆ ಅದೇ 'ತಲೈವಾ' ಬಗ್ಗೆ ಟ್ವೀಟ್ ಮಾಡಿದ್ದಾರೆ. [ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]

  ಮೊನ್ನೆಯಷ್ಟೇ ರಜನಿಕಾಂತ್ ಅಭಿನಯದ ಹೊಚ್ಚ ಹೊಸ ಚಿತ್ರ 'ಕಬಾಲಿ' ಟೀಸರ್ ಬಿಡುಗಡೆ ಆಗಿತ್ತು. ಅದನ್ನೇ ಇಟ್ಟುಕೊಂಡು ವರ್ಮಾ ಸಾಹೇಬ್ರು ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ ಗಳನ್ನ ನೋಡಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

  ಈ ಬಾರಿ ಹೊಗಳಿದ್ದಾರೆ.!

  ಈ ಬಾರಿ ಹೊಗಳಿದ್ದಾರೆ.!

  ರಜನಿಕಾಂತ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಗಳು ಈ ಬಾರಿ ನೇರವಾಗಿದೆ. ಅವರು ರಜನಿಕಾಂತ್ ರನ್ನ ಹೊಗಳಿರುವುದು ಟ್ವೀಟ್ ಗಳಲ್ಲಿ ಕ್ಲಿಯರ್ ಆಗಿದೆ. ಬೇಕಾದ್ರೆ, ನೀವೇ ನೋಡಿ, ಮುಂದಿನ ಸ್ಲೈಡ್ ನಲ್ಲಿ...

  ಔಟ್ ಸ್ಟ್ಯಾಂಡಿಂಗ್.!

  ''ರಜನಿಕಾಂತ್ ಗೆ ರಜನಿಕಾಂತ್ ಸರಿಸಾಟಿ'' ಅಂತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. [ಸೂಪರ್ ಸ್ಟಾರ್ ರಜನಿ 'ಕಬಾಲಿ' ಟೀಸರ್ ಟ್ರೆಂಡಿಂಗ್!]

  ಒಂದೇ ದಿನದಲ್ಲಿ ನಾಲ್ಕು ಬಾರಿ ನೋಡ್ತಾರಂತೆ.!

  ''ಬೆಳ್ಳಿಪರದೆಯನ್ನ ಇಷ್ಟು ಪ್ರಕಾಶಮಾನವಾಗಿಸೋಕೆ ರಜನಿಕಾಂತ್ ಬಿಟ್ಟು, ಬೇರೆ ಯಾವ ಸೂಪರ್ ಸ್ಟಾರ್ ನಿಂದಲೂ ಸಾಧ್ಯ ಇಲ್ಲ. 'ಕಬಾಲಿ' ಚಿತ್ರವನ್ನು ನಾನು ಒಂದೇ ದಿನ ನಾಲ್ಕು ಬಾರಿ ನೋಡುತ್ತೇನೆ'' ಎಂದು ಟ್ವೀಟಿಸಿದ್ದಾರೆ ವರ್ಮಾ. [ಅದು 'ಕಾಂಪ್ಲಿಮೆಂಟ್'.! ರಜನಿ ಅಭಿಮಾನಿಗಳಿಗೆ ವರ್ಮಾ ಸ್ಪಷ್ಟನೆ]

  'ಬಾಹುಬಲಿ' ಅಪ್ಪ 'ಕಬಾಲಿ'

  ''ಬಾಹುಬಲಿ' ಅಪ್ಪನಂತೆ 'ಕಬಾಲಿ' ಕಾಣುತ್ತಿದ್ದಾನೆ. ಒನ್ ಅಂಡ್ ಒನ್ಲಿ ರಜನಿಕಾಂತ್'' - ರಾಮ್ ಗೋಪಾಲ್ ವರ್ಮಾ.

  'ಕಬಾಲಿ' ಟೀಸರ್ ನೋಡಿದ್ರಾ?

  ಮೊನ್ನೆಯಷ್ಟೇ ಬಿಡುಗಡೆ ಆಗಿರುವ ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರದ ಟೀಸರ್ ನೀವು ನೋಡಿಲ್ಲ ಅಂದ್ರೆ ಈಗಲೇ ನೋಡಿಬಿಡಿ....

  English summary
  Controversial Director Ram Gopal Varma has taken his twitter account to appreciate Super Star Rajinikanth's upcoming movie 'Kabali' teaser. Check out the tweets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X