ಪುನೀತ್ ರಾಜ್‌ಕುಮಾರ್ ಟ್ಟಿಟ್ಟರ್‌ಗೆ ಮರಳಿದ ನೀಲಿ ಟಿಕ್!
ನಟ ಪುನೀತ್ ರಾಜ್‌ಕುಮಾರ್ ಸಹಸ್ರಾರು ಮನಸ್ಸುಗಳಲ್ಲಿ ಎಂದಿಗೂ, ಎಂದೆಂದಿಗೂ ಜೀವಂತ. ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಇಲ್ಲದೇ ಇರಬಹುದು. ಅದರೆ ಅವರನ್ನು ಪ್ರೀತಿಸುವ ಕೋಟ್ಯಾನು ಕೋಟಿ ಮನಸ್ಸುಗಳಲ್ಲಿ ಅವರು ಎಂದಿಗೂ ಜೀವಂತವಾಗಿ ಅಜರಾಮರವಾಗಿ ಇದ್ದೇ ಇರುತ್ತಾರೆ.
ಇನ್ನು ಅಪ್ಪು ಬಗ್ಗೆ ನಿತ್ಯವೂ ಒಂದಲ್ಲಾ, ಒಂದು ವಿಚಾರ ಚಾಲ್ತಿಯಲ್ಲಿ ಇರುತ್ತೆ. ಅವರ ಬಗ್ಗೆ ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳು ಹರಿದಾಡುತ್ತಲೇ ಇರುತ್ತವೆ. ಪುನೀತ್ ರಾಜ್‌ಕುಮಾರ್ ಅವರನ್ನು ಮನಸ್ಸಲ್ಲಿ ಇಟ್ಟು ಪೂಜಿಸುವವರಿಗೆ ಟ್ವಿಟ್ಟರ್ ಬೇಸರ ತಂದಿತ್ತು.
ಹೌದು, ಕಳೆದ ಕೆಲವು ದಿದನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಟ್ವಿಟ್ಟರ್ ಖಾತೆ ಬಗ್ಗೆ ಚರ್ಚೆ ನಡೆಯುತ್ತಿದೆ. ಅಪ್ಪು ಟ್ವಿಟ್ಟರ್ ಖಾತೆಗೆ ಇದ್ದ ಅಧಿಕೃತ ನೀಲಿ ಬ್ಯಾಡ್ಜ್ ತೆಗೆದು ಹಾಕಲಾಗಿತ್ತು. ಇದಕ್ಕೆ ಭಾರಿ ಅಸಮಾಧಾನ ವ್ಯಕ್ತವಾಗಿತ್ತು.
ಅಪ್ಪು ಟ್ವಿಟ್ಟರ್ ಖಾತೆಯಲ್ಲಿ ನೀಲಿ ಟಿಕ್ ಮಾಯ!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಸುಮಾರು 9 ತಿಂಗಳುಗಳಾಗುತ್ತಿದೆ. ಈ ವೇಳೆ ಟ್ವಿಟ್ಟರ್ ತೆಗೆದುಕೊಂಡ ನಿರ್ಧಾರ ಅಪ್ಪು ಅಭಿಮನಿಗಳಿಗೆ ಬೇಸರ ತರಿಸಿತ್ತು. ಇಷ್ಟು ದಿನ ಪುನೀತ್ ರಾಜ್‌ಕುಮಾರ್ ಟ್ವಿಟರ್ ಖಾತೆಯಲ್ಲಿದ್ದ ನೀಲಿ ಟಿಕ್ ಇದ್ದಕ್ಕಿದ್ದ ಹಾಗೆ ಮಾಯವಾಗಿತ್ತು. ಈ ಬೆಳವಣಿಗೆಯನ್ನು ನೋಡಿ ಪವರ್‌ಸ್ಟಾರ್ ಫ್ಯಾನ್ಸ್ ಮತ್ತಷ್ಟು ಬೇಸರಗೊಂಡಿದ್ದರು.

ಅಪ್ಪುಗಾಗಿ ಅಭಿಯಾನ!
ಪುನೀತ್ ರಾಜ್‌ಕುಮಾರ್‌ಗಾಗಿ ಅಭಿಮಾನಿಗಳು ಅಭಿಯಾನವನ್ನು ಶುರು ಮಾಡಿದ್ದರು. #ReverifyPuneethRajkumarTwitter ಎನ್ನುವ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಮಾಡಿದ್ದರು. ಈ ಟ್ಯಾಗ್ ಈಗ ಟ್ವಿಟ್ಟರ್‌ನಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿತ್ತು. ಇಷ್ಟೆಲ್ಲಾ ಆದ ಬಳಿಕ, ಟ್ವಿಟ್ಟರ್ ಮುಂದೆ ಯಾವ ಹೆಜ್ಜೆ ಇಡುತ್ತದೆ ಎನ್ನುವ ಬಗ್ಗೆ ಗೊಂದಲ ಇತ್ತು. ಆದರೆ ಈಗ ಟ್ವಿಟ್ಟರ್ ಸರಿಯಾದ ಹೆಜ್ಜೆಯನ್ನೇ ಇಟ್ಟಿದೆ. ಅಪ್ಪು ಬಗ್ಗೆ ಅರಿತು ನೀಲ್ ಬ್ಯಾಡ್ಜ್‌ನ್ನು ಮತ್ತೆ ಹಾಕಿದೆ.

ಅಪ್ಪು ಟ್ವಿಟ್ಟರ್ ಖಾತೆಗೆ ಮರಳಿದ ಬ್ಲ್ಯೂ ಟಿಕ್!
ಪುನೀತ್ ರಾಜ್‌ಕುಮಾರ್ ಅವರ ಖಾತೆಯಲ್ಲಿ, ಹಲವು ತಿಂಗಳಿನಿಂದ ಯಾವುದೇ ಪೋಸ್ಟ್ ಹಾಕದ ಕಾರಣ ನೀಲಿ ಟಿಕ್ ತೆಗೆಯಲಾಗಿತ್ತು. ಆದರೆ ಇದರಿಂದ ಅಪ್ಪು ಪ್ರೀತಿಸುವವರು ಟ್ವಿಟ್ಟರ್‌ಗೆ ನೀಲಿ ಕಿಟ್ ಮರಳಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈಗ ಅಪ್ಪು ಖಾತೆಗೆ ನೀಲಿ ಟಿಕ್ ಮರಳಿದೆ. ಈ ನೀಲಿ ಟಿಕ್ ಅಧಿಕೃತವಾಗಿ ಧೃಢೀಕರಿಸಲ್ಪಟ್ಟ ಟ್ವಿಟ್ಟರ್ ಖಾತೆ ಎನ್ನುವುದನ್ನು ಸೂಚಿಸುತ್ತದೆ.
ಟ್ವಿಟ್ಟರ್‌ಗೆ ಸಿನಿ ಗಣ್ಯರಿಂದ ಧನ್ಯವಾದ!
ನೀಲಿ ಟಿಕ್ ಮರಳಿ ಕೊಡಲು ಸಿನಿಮಾರಂಗದ ಹಲವರು ಟ್ವಿಟರ್‌ಗೆ ಮನವಿ ಮಾಡಿದ್ದರು. ಟ್ವೀಟ್ ಮಾಡಿ, ಅಭಿಯಾನದಲ್ಲಿ ಭಾಗಿ ಆಗಿದ್ದರು. ಈಗ ಅವರೆಲ್ಲಾ ಟ್ವಿಟ್ಟರ್‌ಗೆ ಧನ್ಯವಾದ ತಿಳಿಸುತ್ತಿದ್ದಾರೆ. ಯುವರಾಜ್ ಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ಪವನ್ ಒಡೆಯರ್, ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











