ನಟ ಸುರೇಂದ್ರ ಹತ್ಯೆ ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು
ನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ಸತೀಶ್ ಕುಲಾಲ್ ಹಾಗೂ ಕಿನ್ನಿಗೋಳಿಯ ಗಿರೀಶ್ ಎಂಬಾತನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಇಬ್ಬರೂ ಕೇರಳದಿಂದ ಖಾಸಗಿ ಕಾರಿನಲ್ಲಿ ಬಂಟ್ವಾಳಕ್ಕೆ ಬರುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೆ ತುಳು ನಟ, ರೌಡಿಶೀಟರ್ ಸಹ ಆಗಿದ್ದ ಸುರೇಂದ್ರ ಅನ್ನು ಬಂಟ್ವಾಳದ ಅಪಾರ್ಟ್‌ಮೆಂಟ್ ನಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು.
Recommended Video
ಜಗಮೆಚ್ಚಿದ ನಿರ್ದೇಶಕ Rajamouli ಮೇಲೆ ಕಂಪ್ಲೇಂಟ್ | Filmibeat Kannada
ಕೊಲೆಯ ನಂತರ, ಸತೀಶ್ ಕುಲಾಲ್ ಎಂಬಾತ, ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ, 'ನಾನೇ ಸುರೇಂದ್ರನನ್ನು ಕೊಲೆ ಮಾಡಿದ್ದು, ಉಸುಪಿಯ ಕಿಶನ್ ಹೆಗ್ಡೆ ಕೊಲೆಗೆ ಪ್ರತಿಕಾರವಾಗಿ ಸುರೇಂದ್ರನನ್ನು ಹತ್ಯೆ ಮಾಡಿದ್ದೇನೆ' ಎಂದಿದ್ದ. ಸತೀಶ್ ಕಳಿಸಿದ್ದ ಆಡಿಯೋ ವೈರಲ್ ಆಗಿತ್ತು.
English summary
Mangaluru police arrested two accused Satish and Girish in Surendra Bantwala murder case.


Click it and Unblock the Notifications