61ವರ್ಷದ ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಬ್ಲ್ಯಾಕ್‌ಮೇಲ್‌ ; 2 ಕೋಟಿಗೆ ಬೇಡಿಕೆ- ಕಿರುತೆರೆ ನಟಿ ವಿರುದ್ಧ FIR

ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಉದ್ದೇಶದಲ್ಲಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುತ್ತಾರೆ.

ಇನ್ನೂ ಕೆಲವರು ಕಾನೂನು.. ಪೊಲೀಸ್‌ರಿಗೆ ಕೂಡ ಭಯವನ್ನು ಪಡದೇ ನಿರ್ಭೀತಿಯಿಂದ ಅಪರಾಧ ಎಸಗುತ್ತಾರೆ. ಇದಕ್ಕೆ ''ಆಶಾ ಜೋಯಿಸ್ '' ಸದ್ಯದ ಉದಾಹರಣೆ. ಹೌದು, ಆಶಾ ಜೋಯಿಸ್.. ಕಿರುತೆರೆಯ ನಾಯಕಿ. ಒಂದು ಕಾಲದಲ್ಲಿ ಕನ್ನಡದಲ್ಲಿ ಮನಸು ಎಂಬ ಚಿತ್ರ ಬಂದಿತ್ತು. ಆ ಚಿತ್ರದ ಕಥಾನಾಯಕಿಯಾಗಿದ್ದ ಇವರು 2016ರಲ್ಲಿ ಮಿಸ್ ಇಂಡಿಯಾ ಪ್ಲಾನೆಟ್ ಸ್ಪರ್ಧಿ ಕೂಡ ಹೌದು.

TWO CRORE DEMAND TV Actress Asha Jois Booked for Blackmailing with Stolen Private Video

ಇಷ್ಟೇ ಅಲ್ಲ ಇಂಡಿಯಾದಲ್ಲೆ ಮೊದಲ ಕರೋಕೆ ಸ್ಟುಡಿಯೋ ಇರುವುದು ಕೂಡ ನನ್ನದೇ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ತಮ್ಮ ಬೆನ್ನು ತಾವು ತಟ್ಟಿಕೊಂಡಿದ್ದ ಆಶಾ, ಮಿಸೆಸ್‌ ಇಂಡಿಯಾ ಪ್ರತಿಭಾ ಸೌಂಶಿಮಠ್‌ ಅವರ ಒಂದ್ಕಾಲದ ಶಿಷ್ಯೆ ಕೂಡ ಹೌದು.

ಸದಾ ನಗುಮೊಗದಿಂದ ಓಡಾಡಬೇಕು, ಮಾಡುವ ಕೆಲಸದಲ್ಲಿ, ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇರಬೇಕು, ಪಾಸಿಟಿವ್‌ ಆಗಿ ಯೋಚನೆ ಮಾಡಬೇಕು, ಟೀಕೆಗಳನ್ನು ಮರೆತು ಬಿಡಬೇಕು, ಇದೇ ನನ್ನ ಲೈಫ್‌ನ ಮಂತ್ರ ಎಂದು ಹೇಳುತ್ತಿದ್ದ ಆಶಾ ಮಿಸೆಸ್‌ಇಂಡಿಯಾ ಬ್ಯೂಟಿಫುಲ್‌ ಸ್ಮೈಲ್‌, ಬ್ಯೂಟಿಫುಲ್‌ ಹೇರ್‌ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡವರು.

ಇಂಥಾ ಆಶಾ ಜೋಯಿಸ್ ಅವರ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಸದ್ಯ ಕೇಳಿ ಬಂದಿದೆ. ಈ ಆರೋಪವನ್ನು ಇವರ ಸ್ನೇಹಿತೆಯಾದ 61 ವರ್ಷದ ಪಾರ್ವತಿ ಅವರೇ ಮಾಡಿರುವುದು ವಿಶೇಷ.

ಸದ್ಯ ಪಾರ್ವತಿ ಅವರು ಬೆಂಗಳೂರಿನ ತಿಲಕ್ ನಗರ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ಮಾಡುತ್ತಿದ್ದಾರೆ.

ಪಾರ್ವತಿ ಅವರು ನೀಡಿದ ದೂರಿನ ಅನ್ವಯ ಮೂರು ವರ್ಷದ ಹಿಂದೆ ಪಾರ್ವತಿ ಅವರಿಗೆ ಆಶಾ ಜೋಯಿಸ್ ಪರಿಚಯವಾಗಿದ್ದರು. ಶೃಂಗೇರಿ ಮಠದ ಜೋಯಿಸ್ ಕುಟುಂಬದವಳು ನಾನು ಇಷ್ಟೇ ಅಲ್ಲ ಸೀರಿಯಲ್ ನಟಿ ಕೂಡ ಹೌದು ಎಂದು ಪಾರ್ವತಿ ಅವರಿಗೆ ಆಶಾ ಜೋಯಿಸ್ ಪರಿಚಯ ಮಾಡಿಕೊಂಡಿದ್ದರು.

ಇನ್ನೂ ಪಾರ್ವತಿ ತಾವು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕನನ್ನೇ ಮದುವೆಯಾಗಿದ್ದರು. ಈ ವಿಚಾರ ಗೊತ್ತಾಗಿದ್ದೇ ತಡ, ತನ್ನ ಪತಿಯ ವಿರುದ್ಧವೇ ಪಾರ್ವತಿಯನ್ನು ಎತ್ತಿ ಕಟ್ಟಿದ್ದ ಆಶಾ ಜೋಯಿಸ್ ಪಾರ್ವತಿ ಅವರ ಫೋನ್‌ದಿಂದ ಖಾಸಗಿ ವಿಡಿಯೋ, ಫೋಟೊ ಮತ್ತು ವಾಯ್ಸ್ ರೆಕಾರ್ಡ್‌ಗಳನ್ನು ಕೂಡ ಎಗರಿಸಿದ್ದರು.

ಆ ನಂತರ ಪಾರ್ವತಿಗೆ ಬ್ಲ್ಯಾಕ್ ಮೇಲ್‌ಗೆ ಪ್ರಚೋದನೆ ನೀಡಲು ಶುರು ಮಾಡಿದ್ದ ಆಶಾ ಎರಡು ಕೋಟಿ ಹಣವನ್ನು ತಮ್ಮ ಪತಿಯ ಬಳಿ ತೆಗೆದುಕೊಳ್ಳುವಂತೆ ಬಲವಂತ ಮಾಡಲು ಶುರು ಮಾಡಿದರು. ಇದಕ್ಕೆ ಪಾರ್ವತಿ ಒಪ್ಪದಿದ್ದಾಗ ಪಾರ್ವತಿ ಅವರ ಪರಿಚಯಸ್ಥರಿಗೆ ಆಶಾ ಖಾಸಗಿ ವಿಡಿಯೋ ಫೋಟೊ ಮತ್ತು ವಾಯ್ಸ್ ರೆಕಾರ್ಡ್ ಕಳುಹಿಸಿದ್ದರು.

ಆಗ ಎಚ್ಚೆತ್ತ ಪಾರ್ವತಿ ತಮ್ಮ ಘನತೆಗೆ ಇದರಿಂದ ಧಕ್ಕೆ ಆಗಬಹುದು ಎಂದು ಭಾವಿಸಿ ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಖಾಸಗಿ ಡೇಟಾ ಕದ್ದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ತಮ್ಮ ಮೇಲಿನ ಈ ಆರೋಪಗಳಿಗೆ ಆಶಾ ಜೋಯಿಸ್ ಇನ್ನು ಪ್ರತಿಕ್ರಿಯೆಯನ್ನು ನೀಡಿಲ್ಲ. ಸದ್ಯ ತನಿಖೆ ಶುರು ಮಾಡಿರುವ ಪೊಲೀಸರು ಆಶಾ ಅವರ ವಿಚಾರಣೆ ಮಾಡುವ ಸಾಧ್ಯತೆ ಇದೆ.

More from Filmibeat

English summary
TV Actress Asha Jois faces an FIR for allegedly stealing and leaking a friend's private video while attempting a Rs 2 crore blackmail. Read the shocking details of the police complaint.
Read more about: money fraud filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X