ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಲು ಶ್ರುತಿಗೆ ಇಬ್ಬರು ಕನ್ನಡ ನಟರು ಸಾಥ್.?
ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಮೀಟೂ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬಗೆಹರಿಯುತ್ತೆ ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಆದ್ರೆ, ಫಿಲ್ಮ್ ಚೇಂಬರ್ ಹೊರಗೆ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಸರ್ಜಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳಸಂಚು ನಡೆದಿದೆ, ಹಿಂದೂ ವಿರೋಧಿಗಳು ಈ ಷಡ್ಯಂತ್ರಕ್ಕೆ ಕುಮ್ಮಕ್ಕು ಕೊಡ್ತಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕದ ಇಬ್ಬರು ಹಿರಿಯ ನಟರು ಶ್ರುತಿ ಬೆನ್ನಿಗೆ ನಿಂತು ಈ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಗಾಗಿ, ಯಾರು ಆ ಇಬ್ಬರು ಹಿರಿಯ ನಟರು ಎಂಬ ಚರ್ಚೆ ಈಗ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದೆ. ಇಲ್ಲಿಯವರೆಗೂ ಬಹುಭಾಷಾ ನಟ ಪ್ರಕಾಶ್ ರೈ ಮತ್ತು ಆ ದಿನಗಳು ಖ್ಯಾತಿಯ ಚೇತನ್ ಅವರು ಶ್ರುತಿ ಹೋರಾಟಕ್ಕೆ ಬೆಂಬಲ ನೀಡಿದ್ದರು.

ಅವರನ್ನ ಬಿಟ್ಟರೇ ಯಾವ ನಟರು ಬಹಿರಂಗವಾಗಿ ಶ್ರುತಿ ಬೆಂಬಲಕ್ಕೆ ನಿಂತಿಲ್ಲ. ಈ ಕಡೆ ಪ್ರಶಾಂತ್ ಸಂಬರ್ಗಿ ಅವರು ಕರ್ನಾಟಕದ ಇಬ್ಬರು ಹಿರಿಯ ನಟರು ಎಂದು ಬಾಂಬ್ ಹಾಕಿದ್ದಾರೆ.
ಒಟ್ನಲ್ಲಿ, ಮೀಟೂ ಮೀಟೂ ಅಂತ ಆರಂಭವಾದ ಈ ಅಭಿಯಾನ ಈಗ ದಿಕ್ಕು ತಪ್ಪುತ್ತಿದೆ. ಸರ್ಜಾ ಮತ್ತು ಶ್ರುತಿ ವಿವಾದಕ್ಕೆ ಧರ್ಮ, ರಾಜಕೀಯ ಅಂಟಿಕೊಂಡಿದೆ. ಸದ್ಯಕ್ಕೆ ಅಂಬರೀಶ್ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಯುತ್ತಿದ್ದು, ಇದು ಇಲ್ಲಿಗೆ ನಿಲ್ಲುತ್ತಾ ಅಥವಾ ನ್ಯಾಯಾಲಯದಲ್ಲಿ ಮುಂದುವರೆಯುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.


Click it and Unblock the Notifications











