For Quick Alerts
  ALLOW NOTIFICATIONS  
  For Daily Alerts

  ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಂಪೇಗೌಡನ ಜೊತೆ ಇನ್ನೊಂದು ನಿರೀಕ್ಷೆಯ ಚಿತ್ರ ಎಂಟ್ರಿ

  |

  ಎಲ್ಲ ಅಂದುಕೊಂಡಂತೆ ಆಗಿದ್ದರೇ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಮತ್ತು ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಚಿತ್ರಮಂದಿರಕ್ಕೆ ಬರಬೇಕಿತ್ತು. ಆದರೆ, ಬಾಕ್ಸ್ ಲೆಕ್ಕಾಚಾರವನ್ನ ಗಂಭೀರವಾಗಿ ಪರಿಗಣಿಸಿದ ಎರಡೂ ಚಿತ್ರಗಳು ಬಿಡುಗಡೆ ದಿನಾಂಕವನ್ನ ಹಿಂದಕ್ಕೆ ಮುಂದಕ್ಕೆ ಹಾಕಿಕೊಂಡಿದೆ.

  ಈ ಎರಡು ಚಿತ್ರಗಳು ವರಮಹಾಲಕ್ಷ್ಮಿ ಹಬ್ಬದ ದಿನಾಂಕವನ್ನ ಬಿಟ್ಟು ಕೊಡುತ್ತಿದ್ದಂತೆ ಯಾವ ಸಿನಿಮಾ ಬರಬಹುದು ಎಂಬ ಕುತೂಹಲ ಕಾಡುತ್ತಿತ್ತು. ಇಂತಹ ಅವಕಾಶವನ್ನ ಮಿಸ್ ಮಾಡಿಕೊಳ್ಳದ 'ಕೆಂಪೇಗೌಡ-2' ಸಿನಿಮಾ ಆಗಸ್ಟ್ 9 ರಂದು ಬರುವುದಾಗಿ ಘೋಷಿಸಿತು.

  ಹಬ್ಬದ ದಿನ ಎರಡು ನಿರೀಕ್ಷೆಯ ಚಿತ್ರಗಳನ್ನ ಮಿಸ್ ಮಾಡಿಕೊಂಡ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ನಿರಾಸೆಯಾಗಿಲ್ಲ. ಕೆಂಪೇಗೌಡನ ಜೊತೆಗೆ ಇನ್ನೊಂದು ಮನರಂಜನೆಯ ಚಿತ್ರ ಬರ್ತಿದೆ.

  ಕುರುಕ್ಷೇತ್ರನೂ ಇಲ್ಲ, ಪೈಲ್ವಾನೂ ಇಲ್ಲ: ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ನಿರೀಕ್ಷೆಯ ಚಿತ್ರ ಕುರುಕ್ಷೇತ್ರನೂ ಇಲ್ಲ, ಪೈಲ್ವಾನೂ ಇಲ್ಲ: ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ನಿರೀಕ್ಷೆಯ ಚಿತ್ರ

  'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಕನ್ನಡಾಭಿಮಾನಿಗಳಿಗೆ ಕಾಶಿನಾಥ್ ಅವರನ್ನ ನೆನಪಿಸಿದ್ದ ರಾಜ್ ಬಿ ಶೆಟ್ಟಿ, ಈಗ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ. ಹೌದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 9 ರಂದು 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಬಿಡುಗಡೆಯಾಗ್ತಿದೆ. ಈ ಮೂಲಕ ಕೆಂಪೇಗೌಡ ಮತ್ತು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಗಳು ಅಭಿಮಾನಿಗಳನ್ನ ರಂಜಿಸಲು ಸಜ್ಜಾಗಿದೆ.

  ಅಂದ್ಹಾಗೆ, 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಕವಿತಾ ಗೌಡ, ಪ್ರಮೋದ್ ಶೆಟ್ಟಿ, ಶೋಭ್ ರಾಜ್, ಅರುಣಾ ಬಾಲರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಸುಜಾಯ್ ಶಾಸ್ತ್ರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

  English summary
  Kannada actor Raj b shetty starrer gubbi mele brahmastra movie releasing on august 9th. the movie directed by Sujay Shastry. same day Kempegowda 2 also releaseing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X