For Quick Alerts
  ALLOW NOTIFICATIONS  
  For Daily Alerts

  ನನ್ ಲೈಫ್ ಅಲ್ಲಿ ಜೊತೆಗೆ ಹಾರರ್ ಸಿನಿಮಾ ರಿಲೀಸ್

  By Rajendra
  |

  ಎರಡು ಸ್ಮಾಲ್ ಬಜೆಟ್ ಸಿನಿಮಾಗಳು ಈ ವಾರ (ಫೆ.21) ತೆರೆಗೆ ಬರುತ್ತಿವೆ. ಎರಡೂ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ. ಒಂದು ಲವ್ ಸ್ಟೋರಿಯಾದರೆ ಇನ್ನೊಂದು ಹಾರರ್ ಪಿಕ್ಚರ್. ಸುದೀರ್ಘ ಸಮಯದಿಂದ ಬಿಡುಗಡೆ ಭಾಗ್ಯ ಸಿಗದೆ ಈಗ ತೆರೆಗೆ ಬರುತ್ತಿದೆ ನನ್ ಲೈಫ್ ಅಲ್ಲಿ.

  ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ನನ್ ಲೈಫ್ ಅಲ್ಲಿ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರಾಮ್ ದೀಪ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮನೋಜ್ ಗಲಗಲಿ ಸಂಭಾಷಣೆ ಬರೆದಿದ್ದಾರೆ.

  ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೊಕನಾಥ್ ಸಂಗೀತ ನಿರ್ದೇಶನ, ಸಂತೋಷ್ ರಾಧಾಕೃಷ್ಣ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ವಿದ್ಯಾಸಾಗರ್ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ.

  'ನನ್ ಲೈಫ್ ಅಲ್ಲಿ' ಚಿತ್ರದ ತಾರಾಬಳಗದಲ್ಲಿ ಅನೀಶ್, ಸಿಂಧೂ ಲೋಕನಾಥ್, ದಿಲೀಪ್ ರಾಜ್, ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರಿದ್ದಾರೆ. ನಾಯಕರಾದ ಶ್ರೀನಗರ ಕಿಟ್ಟಿ ಹಾಗೂ ರಮೇಶ್ ಅರವಿಂದ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಚಿತ್ರದ ಹೆಸರೇ 'ಹಾರರ್ ಪಿಕ್ಚರ್': ಓಂಶಾಂತಿ ವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಹಾರಾರ್ ಪಿಕ್ಚರ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ವಿಜಯ್ ಸುರಾನ ಈ ಚಿತ್ರದ ನಿರ್ಮಾಪಕರೂ ಹೌದು.

  ಡ್ಯಾನಿಯಲ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಬಿ.ಎಲ್,ಬಾಬು ಅವರ ಛಾಯಾಗ್ರಹಣವಿದೆ. ಜೀವನ್ ಸಂಕಲನ ಹಾಗೂ ತ್ರಿಭುವನ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಹರೀಶ್ ರಾಜ್, ರವಿಚೇತನ್, ಕಾಜಲ್ ರಾವತ್, ನೇಹಾಪಾಟೀಲ್, ರೂಪಶ್ರೀ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Two Kannada movies Nan Life Alli, Colourful youth entertainer with a message! and 'Horror Picture' releasing on 21st February. 'HORROR PICTURE' is a Kannada Horror come Thriller movie Directed and Produced by Vijay Surana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X