For Quick Alerts
  ALLOW NOTIFICATIONS  
  For Daily Alerts

  ಈ ವಾರ ಎರಡೇ ಸಿನಿಮಾ: ಆದ್ರೆ, ಕಾಂಪಿಟೇಶನ್ ಜಾಸ್ತಿ

  |

  ಸ್ಯಾಂಡಲ್ ವುಡ್ ನಲ್ಲಿ ಪ್ರತಿ ವಾರ ನಾಲ್ಕೈದು ಚಿತ್ರಗಳು ಬಿಡುಗಡೆಯಾಗ್ತಿದ್ವು. ಆದ್ರೆ, ಈ ವಾರ ಬರಿ ಎರಡು ಸಿನಿಮಾ ತೆರೆಗೆ ಬರ್ತಿದೆ. ಹಾಗಿದ್ದರೂ ಕಾಂಪಿಟೇಶನ್ ಮಾತ್ರ ಕಮ್ಮಿಯಿಲ್ಲ. ಯಾಕಂದ್ರೆ, ಪ್ರತಿ ಬಾರಿಯೂ ನಮ್ಮ ಚಿತ್ರಗಳ ಜೊತೆಯೇ ಪೈಪೋಟಿ ನಡೆಸುತ್ತಿದ್ದ ಕನ್ನಡ ಸಿನಿಮಾಗಳು ಈ ವಾರ ಪರಭಾಷೆ ಚಿತ್ರಗಳ ಜೊತೆ ಫೈಟ್ ಮಾಡಲಿದೆ.

  ಹೌದು, ಕನ್ನಡದಲ್ಲಿ ಲೂಸ್ ಮಾದ ಯೋಗೇಶ್ ಅಭಿನಯದ 'ಲಂಬೋದರ' ಮತ್ತು ಹೊಸಬರ 'ಗಿಣಿ ಹೇಳಿದ ಕಥೆ' ಬಿಡುಗಡೆಯಾಗುತ್ತಿದೆ. ಎರಡು ಚಿತ್ರಗಳು ತಮ್ಮದೇ ಆದ ಡಿಫ್ರೆಂಟ್ ಕಥೆ, ವಿಭಿನ್ನ ಮನರಂಜನೆ ಮೂಲಕ ಪ್ರೇಕ್ಷಕರೆದುರು ಬರ್ತಿದೆ.

  'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು'ಗಿಣಿ ಹೇಳಿದ ಕಥೆ'ಯನ್ನ ನೀವು ಈ ವಾರ ನೋಡಬಹುದು

  ಈ ಎರಡು ಚಿತ್ರಗಳು ಈಗ ಪರಭಾಷೆಯ ಚಿತ್ರಗಳು ಎದುರು ಗೆಲ್ಲಬೇಕಿದೆ. ಎಸ್, ಈ ವಾರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ', ಅಜಿತ್ ಅಭಿನಯದ 'ವಿಶ್ವಾಸಂ' ಹಾಗೂ ಬಾಲಕೃಷ್ಣ ಅಭಿನಯದ 'ಎನ್.ಟಿ.ಆರ್' ಚಿತ್ರಗಳು ತೆರೆಗೆ ಬರ್ತಿವೆ.

  ಗೆಲುವಿನ ವಿಶ್ವಾಸದಲ್ಲಿ ಈ ವಾರ 'ಲಂಬೋದರ'ನ ಆಗಮನಗೆಲುವಿನ ವಿಶ್ವಾಸದಲ್ಲಿ ಈ ವಾರ 'ಲಂಬೋದರ'ನ ಆಗಮನ

  ಸಹಜವಾಗಿ ಕರ್ನಾಟಕದಲ್ಲಿ ಈ ಮೂರು ಚಿತ್ರಗಳಿಗೆ ಹೆಚ್ಚಿನ ಥಿಯೇಟರ್ ಸಿಗಲಿದೆ. ಪ್ರಚಾರವೂ ಸಿಕ್ಕಿದೆ. ಹಾಗಾಗಿ, ಈ ಚಿತ್ರಗಳು ಎದುರು 'ಗಿಣಿ ಹೇಳಿದ ಕಥೆ' ಮತ್ತು 'ಲಂಬೋದರ' ದಿಟ್ಟೆದೆಯಿಂದ ನಿಲ್ಲಬೇಕಿದೆ.

  ಎಂತದ ದೊಡ್ಡ ಸಿನಿಮಾ ಅಥವಾ ಎಂತಹ ಸ್ಟಾರ್ ಸಿನಿಮಾ ಬಂದ್ರು, ಕಥೆ ಚಿತ್ರಕಥೆ ಚೆನ್ನಾಗಿದ್ರೆ ಕನ್ನಡ ಸಿನಿಮಾ ಹಿಟ್ ಆಗುತ್ತೆ, ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯುತ್ತೆ ಎನ್ನುವುದಕ್ಕೆ ಈ ಹಿಂದೆ ಹಲವು ಉದಾಹರಣೆಗಳಿವೆ. ಬಹುಶಃ ಗಿಣಿ ಮತ್ತು ಲಂಬೋದರನ ವಿಷ್ಯದಲ್ಲೂ ಇದೇ ಆಗಲಿ ಎಂಬುದಷ್ಟೇ ಕನ್ನಡ ಪ್ರೇಮಿಗಳು ಆಸೆ.

  English summary
  Kannada actor yogesh starrer lambodhara and gini helida kathe movies are releasing this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X