ಹೆಂಡತಿಗಾಗಿ 'ಅಂಜನಿಪುತ್ರ' ಸಿನಿಮಾ ಪೈರಸಿ ಮಾಡಿದ ಭೂಪ!
ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಸಿನಿಮಾ ಕಳೆದ ಗುರುವಾರ ರಿಲೀಸ್ ಆಗಿದೆ. ಸಿನಿಮಾ ಎಲ್ಲ ಕಡೆ ಸೂಪರ್ ಆಗಿ ಓಡುತ್ತಿದೆ. ಸಿನಿಮಾ ನೋಡಿದ ಅಪ್ಪು ಫ್ಯಾನ್ಸ್ ಇದೊಂದು ಫ್ಯಾಮಿಲಿ ಸಿನಿಮಾ ಅಂತ ಹೇಳುತ್ತಿದ್ದಾರೆ. ಇಂತಹ ಸಿಹಿ ಸುದ್ದಿ ಜೊತೆಗೆ ಚಿತ್ರತಂಡಕ್ಕೆ ಬೇಸರ ಸಂಗತಿ ಕೂಡ ಬಂದಿತ್ತು.
'ಅಂಜನಿಪುತ್ರ' ಸಿನಿಮಾವನ್ನು ಕಿಡಿಗೇಡಿಗಳು ಫೇಸ್ ಬುಕ್ ಲೈವ್ ಮತ್ತು ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ಇದರಿಂದ ಚಿತ್ರದ ಕಲೆಕ್ಷನ್ ಗೆ ನೇರವಾಗಿ ಪೆಟ್ಟು ಬಿದ್ದಿತ್ತು. ಸಿನಿಮಾದ ಪ್ರಮುಖ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಅನೇಕರು ಬಿಟ್ಟಿಯಾಗಿ ಅಲ್ಲಿಯೇ ಸಿನಿಮಾವನ್ನು ನೋಡಿ ಖುಷಿಯಾಗಿದ್ದರು. ಆದರೆ ಈಗ ಈ ಪೈರಸಿ ಮಾಡಿದ ಇಬ್ಬರು ಕಿಡಿಗೇಡಿಗಳು ಸಿಕ್ಕಿ ಬಿದ್ದಿದ್ದಾರೆ. ಜೊತೆಗೆ ಸಿನಿಮಾವನ್ನು ಯಾಕೆ ಚಿತ್ರಮಂದಿರದಲ್ಲಿ ಶೂಟ್ ಮಾಡಿದ್ದರು ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. ಮುಂದೆ ಓದಿ...

ಇಬ್ಬರು ಕಿಡಿಗೇಡಿಗಳು
'ಅಂಜನಿಪುತ್ರ' ಸಿನಿಮಾವನ್ನು ಇಬ್ಬರು ಕಿಡಿಗೇಡಿಗಳು ಪೈರಸಿ ಮಾಡಿದ್ದರು. ಇವರಲ್ಲಿ ಒಬ್ಬ ಬೆಂಗಳೂರಿನ ಆನಂದ್ ಕುಮಾರ್ ಮತ್ತು ಇನ್ನೊಬ್ಬ ಯಲಹಂಕದ ನಿತೀಶ್ ಆಗಿದ್ದಾರೆ. ಜೊತೆಗೆ ಈ ಇಬ್ಬರು ಈಗ ವಿಡಿಯೋ ಶೂಟ್ ಮಾಡಿದ ಕಾರಣ ಹೇಳಿದ್ದಾರೆ.

ಹೆಂಡತಿಗಾಗಿ
ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿರುವ ಆನಂದ್ ಕುಮಾರ್ ಶಾರದಾ ಥಿಯೇಟರ್‌ನಲ್ಲಿ 'ಅಂಜನಿಪುತ್ರ' ಸಿನಿಮಾವನ್ನು ನೋಡಿದ್ದ. ಆದರೆ ತನ್ನ ಹೆಂಡತಿಗೂ ಆ ಸಿನಿಮಾವನ್ನು ತೊರಿಸಬೇಕು ಎಂದು ಮೊಬೈಲ್ ನಲ್ಲಿ ಶೂಟ್ ಮಾಡಿವ ವೇಳೆ ಸಿಕ್ಕಿ ಬಿದ್ದಿದ್ದಾನೆ.

ಫೇಸ್ ಬುಕ್ ಲೈವ್
ಯಲಹಂಕದ ಉಲ್ಲಾಸ ಚಿತ್ರಮಂದಿರದಲ್ಲಿ ನಿತೀಶ್ ಎಂಬ ಹುಡುಗ ಬರೋಬ್ಬರಿ 1 ಗಂಟೆ 10 ನಿಮಿಷ ಅವಧಿ ಸಿನಿಮಾವನ್ನು ಫೇಸ್ ಬುಕ್ ಲೈವ್ ಮಾಡಿದ್ದಾನೆ.

ನಾನವನಲ್ಲ
ಈ ಬಗ್ಗೆ ಮಾತನಾಡಿರುವ ನಿತೀಶ್ ''ಲೈವ್ ಮಾಡಿದ್ದು ನಾನಲ್ಲ, ಅದು ನನ್ನ ಸ್ನೇಹಿತ. ಆತ ನನ್ನ ಫೇಸ್ ಬುಕ್ ಬಳಕೆ ಮಾಡುತ್ತಿದ್ದ. ಆತನೇ ಈ ರೀತಿ ಲೈವ್ ಮಾಡಿದ್ದಾನೆ. ಕೂಡಲೇ ತನ್ನ ಫೇಸ್ ಬುಕ್ ಖಾತೆಯಿಂದ ಅದನ್ನು ಡಿಲಿಟ್ ಮಾಡುತ್ತೇನೆ'' ಎಂದು ಹೇಳಿದ್ದಾನೆ.

ಪೊಲೀಸ್ ಠಾಣೆಯ ವಿಚಾರಣೆ
ಈ ಪ್ರಕರಣಕ್ಕೆ ಸಂಭದಿಸಿದಂತೆ ಆನಂದ್ ನನ್ನು ಬೆಂಗಳೂರಿನ ಸಿಲ್ವರ್ ಜುಬ್ಲಿ ಪಾರ್ಕ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಿತೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಅಪ್ಪು ಅಭಿಮಾನಿಗಳು ಮುಂದಾಗಿದ್ದಾರೆ.

'ಅಂಜನಿಪುತ್ರ' ಚಿತ್ರದ ಬಗ್ಗೆ
'ಅಂಜನಿಪುತ್ರ' ಸಿನಿಮಾ ನಿನ್ನೆ ರಾಜ್ಯಾದಂತ್ಯ ರಿಲೀಸ್ ಆಗಿತ್ತು. ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಟಿಸಿದ್ದರು. ಹರ್ಷ ನಿರ್ದೇಶನ ಮತ್ತು ರವಿಬಸೂರ್ ಸಂಗೀತ ಚಿತ್ರಕ್ಕೆ ಇದೆ.


Click it and Unblock the Notifications











