ಏಪ್ರಿಲ್‌ ಮೊದಲ ವಾರದಲ್ಲಿ ಉಪೇಂದ್ರ ಅಭಿಮಾನಿಗಳಿಗೆ ಡಬಲ್ ಧಮಾಕಾ

ಉಪೇಂದ್ರ ನಟಿಸಿರುವ ಸಿನಿಮಾ ಒಂದು ಬಿಡುಗಡೆ ಆಗಿ ಬರೋಬ್ಬರಿ ಮೂರು ವರ್ಷವಾಯಿತು. 2019 ರಲ್ಲಿ ಬಿಡುಗಡೆ ಆಗಿದ್ದ 'ಐ ಲವ್ ಯು' ಅವರ ಕೊನೆಯ ಸಿನಿಮಾ.

ಉಪೇಂದ್ರರ ಕೊನೆಯ ಸಿನಿಮಾ 'ಐ ಲವ್ ಯು' ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲು ವಿಫಲವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿಯೂ ಸೋಲು ಕಂಡಿತ್ತು. ಹಾಗಾಗಿ ಉಪ್ಪಿ ಅಭಿಮಾನಿಗಳು, ಅವರ ಮುಂದಿನ ಸಿನಿಮಾಕ್ಕೆ ಬಹಳ ಕಾತರರಾಗಿ ಕಾಯುತ್ತಿದ್ದಾರೆ.

ಇದೀಗ ಬಹುತೇಕ ಮೂರು ವರ್ಷಗಳ ಬಳಿಕ ಉಪೇಂದ್ರ ನಟನೆಯ ಸಿನಿಮಾ ತೆರೆಗೆ ಬರಲು ರೆಡಿಯಾಗಿದ್ದು, ಒಟ್ಟಿಗೆ ಎರಡು ಸಿನಿಮಾಗಳು ಕೇವಲ ಒಂದೇ ವಾರದ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ.

ಏಪ್ರಿಲ್ 1 ಕ್ಕೆ 'ಹೋಮ್ ಮಿನಿಸ್ಟರ್' ತೆರೆಗೆ

ಏಪ್ರಿಲ್ 1 ಕ್ಕೆ 'ಹೋಮ್ ಮಿನಿಸ್ಟರ್' ತೆರೆಗೆ

ಉಪೇಂದ್ರ ನಟನೆಯ ಹೊಸ ಕನ್ನಡ ಸಿನಿಮಾ 'ಹೋಮ್ ಮಿನಿಸ್ಟರ್' ಏಪ್ರಿಲ್ 1 ಕ್ಕೆ ತೆರೆಗೆ ಬರಲಿದೆ. ವೇದಿಕಾ ಸಿನಿಮಾದ ನಾಯಕಿಯಾಗಿ ನಟಿಸುತ್ತಿದ್ದಾರೆ. ಸುಜಯ್ ಕೆ ಶ್ರೀಹರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಜಿಬ್ರಾನ್ ಸಂಗೀತ ಸಿನಿಮಾಕ್ಕಿದೆ. ಕುಂಟುನಿ ಎಸ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಸಂಕಲನವನ್ನು ಆಂಟೊನಿ ಮಾಡಿದ್ದಾರೆ. ಈ ಸಿನಿಮಾವು ಒಟ್ಟಿಗೆ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಏಪ್ರಿಲ್ 1 ಕ್ಕೆ ಬಿಡುಗಡೆ ಆಗಲಿದೆ.

ತೆಲುಗಿನ ನಿರ್ಮಾಪಕರು ಇಲ್ಲಿಗೆ ಬಂದಿರುವುದು ಖುಷಿ: ಉಪೇಂದ್ರ

ತೆಲುಗಿನ ನಿರ್ಮಾಪಕರು ಇಲ್ಲಿಗೆ ಬಂದಿರುವುದು ಖುಷಿ: ಉಪೇಂದ್ರ

'ಹೋಮ್ ಮಿನಿಸ್ಟರ್' ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ''ನಾನು ಈ ವರೆಗೆ ಮಾಡಿರದ ಬೇರೆ ರೀತಿಯ ಪಾತ್ರವನ್ನು ಈ ಸಿನಿಮಾದಲ್ಲಿ ಮಾಡಿದ್ದೇನೆ. ಇಲ್ಲಿನ ನಿರ್ಮಾಪಕರು ಬೇರೆ ಭಾಷೆಗಳಿಗೆ ಹೋಗಿ ಅಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಾರೆ. ಆದರೆ ನಮ್ಮ ನಿರ್ಮಾಪಕರು ಕನ್ನಡದ ಮೇಲಿನ ಪ್ರೀತಿಯಿಂದ ತೆಲುಗಿನಿಂದ ಇಲ್ಲಿಗೆ ಬಂದು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ದೊಡ್ಡ ಹಿಟ್ ಆಗುವ ಮೂಲಕ ತೆಲುಗಿನ ಇನ್ನಷ್ಟು ನಿರ್ಮಾಪಕರು ಇಲ್ಲಿಗೆ ಬಂದು ಸಿನಿಮಾ ಮಾಡಬೇಕು'' ಎಂದರು.

ಏಪ್ರಿಲ್ 08 ರಲ್ಲಿ ತೆಲುಗು ಸಿನಿಮಾ ಬಿಡುಗಡೆ

ಏಪ್ರಿಲ್ 08 ರಲ್ಲಿ ತೆಲುಗು ಸಿನಿಮಾ ಬಿಡುಗಡೆ

ಏಪ್ರಿಲ್ 1 ರಂದು 'ಹೋಮ್ ಮಿನಿಸ್ಟರ್' ಸಿನಿಮಾ ಬಿಡುಗಡೆ ಆದರೆ ಏಳು ದಿನದ ಬಳಿಕ ಅಂದರೆ ಏಪ್ರಿಲ್ 08 ರಂದು ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ 'ಗನಿ' ಬಿಡುಗಡೆ ಆಗಲಿದೆ. ಬಾಕ್ಸಿಂಗ್ ಕುರಿತಾದ ಕತೆಯುಳ್ಳ 'ಗನಿ' ಸಿನಿಮಾದಲ್ಲಿ ಮೆಗಾ ಕುಟುಂಬದ ವರುಣ್ ತೇಜ್ ನಾಯಕ. ಈ ಸಿನಿಮಾದಲ್ಲಿ ಪ್ರಧಾನ ಪೋಷಕ ಪಾತ್ರವನ್ನು ಉಪೇಂದ್ರ ನಿರ್ವಹಿಸಿದ್ದು, ನಾಯಕನ ಬಾಕ್ಸಿಂಗ್ ಕೋಚ್ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಸಿನಿಮಾವನ್ನು ಕಿರಣ್ ಕೊರ್ರಪಾಟಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಜಗಪತಿ ಬಾಬು, ಸುನಿಲ್ ಶೆಟ್ಟಿ ಇತರ ಜನಪ್ರಿಯ ನಟರು ಇದ್ದಾರೆ.

ಹಲವು ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ

ಹಲವು ಸಿನಿಮಾಗಳಲ್ಲಿ ಉಪೇಂದ್ರ ಬ್ಯುಸಿ

ಕಳೆದ ಮೂರು ವರ್ಷದ ಅವಧಿಯಲ್ಲಿ ಹಲವು ಸಿನಿಮಾಗಳಲ್ಲಿ ಉಪೇಂದ್ರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉಪೇಂದ್ರ ನಟಿಸಿರುವ 'ತ್ರಿಶೂಲಂ', 'ಬುದ್ಧಿವಂತ 2' ಹಾಗೂ 'ಲಗಾಮ್' ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಆರ್.ಚಂದ್ರು ನಿರ್ದೇಶನದ ದೊಡ್ಡ ಬಜೆಟ್ ಸಿನಿಮಾ 'ಕಬ್ಜ'ನಲ್ಲಿಯೂ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಸುದೀಪ್ ಸಹ ನಟಿಸಿದ್ದಾರೆ. ಇವುಗಳ ಜೊತೆಗೆ ಉಪೇಂದ್ರ ತಮ್ಮದೇ ನಿರ್ದೇಶನದ ಹೊಸ ಸಿನಿಮಾವನ್ನು ಸಹ ಘೋಷಣೆ ಮಾಡಿದ್ದಾರೆ.

More from Filmibeat

English summary
Two movies of Upendra releasing on April 1st week. Kannada movie Home Minister releasing on April 01 and Telugu Movie Ghani releasing on April 08.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X