twitter
    For Quick Alerts
    ALLOW NOTIFICATIONS  
    For Daily Alerts

    ಇಬ್ಬರು ಸಂಗೀತ ದಿಗ್ಗಜರ ಸಮಾಗಮ , "JOGIROCK " ಜೋಡಿಯ ಲೈವ್ ಡ್ಯೂ ಪರ್ಫಾಮೆನ್ಸ್!

    By ಮಾನಸ Koinguli
    |

    ಸ್ವರಗಳ ಲೇಪ ಸಂಗೀತ. ಇದು ನಿಂತ ನೀರಲ್ಲ, ಪ್ರತಿಯೊಬ್ಬ ಕಲೆಗಾರನ ಆಸಕ್ತಿಗನುಗುಣವಾಗಿ ಹೊಸ ರೂಪ ಪಡೆಯುವ ಸಂಗೀತ ಎಲ್ಲರ ಮನಗೆಲ್ಲುತ್ತದೆ. ಜಾನಪದೀಯ ಸಂಗೀತದಿಂದ ರಾಕ್ ಬ್ಯಾಂಡ್ ವರೆಗೆ ಜನರ ಅಭಿರುಚಿಗಳು ಬದಲಾಗುತ್ತಿವೆ.

    ಇತ್ತೀಚಿನ ಪೀಳಿಗೆಗೆ ಶಾಸ್ತ್ರೀಯ ಸಂಗೀತವೂ ಬೇಕು ರಾಕ್ ಬ್ಯಾಂಡ್ ನ ಜೋಷ್ ಕೂಡ ಬೇಕು ಹೀಗಿರುವಾಗಲೇ ಮತ್ತಷ್ಟು ಹೊಸ ವಿಶೇಷದೊಂದಿಗೆ ಸದ್ಯದಲ್ಲೇ ಪರಿಚಯವಾಗುತ್ತಿದೆ ಜೋಗಿರಾಕ್ ಬ್ಯಾಂಡ್. ಖ್ಯಾತ ಸಂಗೀತಗಾರ ನಿಖಿಲ್ ಕುಮಾರ್ ಮತ್ತು ಶಾಸ್ತ್ರೀಯ ಸಂಗೀತದ ದಿಗ್ಗಜೆ ಸಂಗೀತಾ ಶ್ರೀಕಿಶನ್ ಅವರು ಒಟ್ಟಾಗಿ ವಿನೂತನ ಪ್ರಯೋಗದ ಲೈವ್ ಡ್ಯೂ ಪರ್ಫಾಮೆನ್ಸ್ ಆರಂಭಿಸಲು ಮುಂದಾಗಿದ್ದು ಇದೇ ಮಾರ್ಚ್ 22 ರಂದು "ಜೋಗಿರಾಕ್" ಲೋಕಾರ್ಪಣೆಯಾಗಲಿದೆ.

    ಜೋಗಿ ರಾಕ್ ಲೈವ್ ಡ್ಯೂ ಪರ್ಫಾಮೆನ್ಸ್ ಕೇವಲ ಸಂಗೀತವನ್ನು ಕೇಳುವುದಕ್ಕಲ್ಲ, ಕೇಳುವ ಜೊತೆಗೆ ಸಂಗೀತವನ್ನು ಆಸ್ವಾಧಿಸಬೇಕು ಎಂಬ ತತ್ವದೊಂದಿಗೆ ಈ ಇಬ್ಬರು ದಿಗ್ಗಜರು "ಜೋಗಿರಾಕ್" ಆರಂಭಿಸುತ್ತಿದ್ದಾರೆ. ಮುಂದೆ ಓದಿ.....

    ಈ ನಿಖಿಲ್ ಯಾರು ನಿಮಗೆ ಗೊತ್ತಾ?

    ಈ ನಿಖಿಲ್ ಯಾರು ನಿಮಗೆ ಗೊತ್ತಾ?

    23 ವರ್ಷಗಳಿಂದ ಕಲಾರಂಗದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಿಖಿಲ್ ಕುಮಾರ್ ಅವರು ಸಂಗೀತ ಸಂಯೋಜಕ, ಪ್ರೋಗ್ರಾಮರ್, ಸಂಗೀತ ನಿರ್ದೆಶಕ, ಮಾತ್ರವಲ್ಲ ವೃತ್ತಿಬದುಕಿನ ಆರಂಭದಲ್ಲಿ ಇವರೊಬ್ಬ ರೆಡಿಯೋ ಜಾಕಿ ಆಗಿದ್ದರು. ಅಶರೀರವಾಣಿಯ ಮೂಲಕ ತಮ್ಮ ಅದ್ಭುತ ಕಂಠದಿಂದ ಕೇಳುಗರನ್ನು ರಂಜಿಸುವ, ಕೇಳುಗರ ಬೇಸರವನ್ನು ನೀಗಿಸುವ ಕೆಲಸ ಮಾಡಿದ್ದರು.

    1,000 ಕ್ಕೂ ಹೆಚ್ಚು ಲೈವ್ ಶೋ ಕೊಟ್ಟಿದ್ದಾರೆ

    1,000 ಕ್ಕೂ ಹೆಚ್ಚು ಲೈವ್ ಶೋ ಕೊಟ್ಟಿದ್ದಾರೆ

    ಸಂಗೀತ ಮತ್ತು ಡಿಜಿಟಲ್ ಉಪಕರಣಗಳ ಸಂಗಮದಲ್ಲಿ ಹೊಸ ರೀತಿಯ ಮಾಧುರ್ಯವನ್ನು ಸೃಷ್ಠಿಸಬೇಕು ಎಂದು ಕೊಂಡು ಮೊದಲ ಮ್ಯೂಸಿಕ್ ಅಲ್ಬಂನಲ್ಲೆ ಖ್ಯಾತಿ ಪಡೆದವರು ನಿಖಿಲ್. ಅಮೆರಿಕದ (ಹಾಲಿವುಡ್)ಲಾಸ್ ಏಜಂಲೀಸ್ ನ ಫಿಲ್ಮ್ ಸ್ಕೂಲ್ ನಿಂದ ಸಂಗೀತ ನಿರ್ಮಾಣದಲ್ಲಿ ಪ್ರತಿಷ್ಠಿತ ಹಾನರ್ಸ್ ಪದವಿ ಪಡೆದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ನಿಖಿಲ್ ಕುಮಾರ್ ಅವರು ಅಮೆರಿಕ, ದುಬೈ, ಇಂಗ್ಲೆಂಡ್ , ಹಾಲಿವುಡ್ ಸೇರಿ ಹಲವು ಕಡೆ 1,000 ಕ್ಕೂ ಹೆಚ್ಚು ಲೈವ್ ಶೋ, 4500 ಕ್ಕೂ ಹೆಚ್ಚು ಮ್ಯೂಸಿಕ್ ಪ್ರೊಡಕ್ಷನ್ ಮಾಡಿದ್ದಾರೆ.

    ಎ.ಆರ್. ರೆಹಮಾನ್ ಇವರಿಗೆ ಸ್ಫೂರ್ತಿ

    ಎ.ಆರ್. ರೆಹಮಾನ್ ಇವರಿಗೆ ಸ್ಫೂರ್ತಿ

    2014 ರಲ್ಲಿ ಸ್ವತಃ ನಿಖಿಲ್ ಅವರೇ ಗೀತೆ ಬರೆದು ಸಂಯೋಜಿಸಿದ ಪಾಪ್/ಫಂಕ್, ರಾಕ್ ಶೈಲಿಯ 'ಏಂಜೆಲ್ ಐಸ್, ಮಿಲ್ ತೋ ಕಭಿ' ಹಾಡು ಜನಪ್ರಿಯವಾಗಿತ್ತು. ಈ ಹಾಡಿಗೆ ಬ್ರಿಟಿಷ್ ಗಾಯಕ ಮಿಲ್ಲಿ ಮರ್ಸಿಡೆಸ್ ಧ್ವನಿಯಾಗಿದ್ದಾರೆ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಇವರಿಗೆ ಸ್ಫೂರ್ತಿ. ಇದಕ್ಕಾಗಿ ಅವರು "ಸಜ್ನಾ" ಎಂಬ ಹೆಸರಿನ ಆಲ್ಭಂ ಮಾಡಿ ತಮ್ಮ ಮಾನಸ ಗುರು ರೆಹಮಾನ್ ಅವರಿಗೆ ಗೌರವ ಸಲ್ಲಿಸಿದ್ದರು.

    ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ

    ಸ್ಟಾರ್ ನಟರ ಜೊತೆ ಕೆಲಸ ಮಾಡಿದ್ದಾರೆ

    ಮಾತ್ರವಲ್ಲ 'ಮಿಲನ', 'ಜೊತೆಯಲಿ, 'ಸನಿಹ' ಮುಂತಾದ ದಾಖಲೆ ಸೃಷ್ಠಿಸಿದ ಮ್ಯೂಸಿಕ್ ಆಲ್ಬಂ ಹೊರತಂದಿದ್ದಾರೆ. ಇದರಲ್ಲಿ ಸನಿಹ ಬಿಡುಗಡೆಯಾದ 24 ಗಂಟೆಯಲ್ಲಿ 1.2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿತ್ತು. ಇಷ್ಟು ಮಾತ್ರವಲ್ಲ ಪ್ರಸಿದ್ಧ ಗಾಯಕ ಆತಿಫ್ ಅಸ್ಲಾಮ್ , ಬಾಲಿವುಡ್ ನಟ ಸಲ್ಮಾನ್ ಖಾನ್, ಗುರುಕಿರಣ್, ನಟ ಪುನೀತ್ ರಾಜ್ ಕುಮಾರ್ ಅವರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಇದರ ಜೊತೆಗೆ ಕರೋಕೆ-560 ಎಂಬ ಸಿಂಗಿಂಗ್ ಕ್ಲಬ್ ಮೂಲಕ ಹಲವಾರು ಹಾಡುಗಾರರಿಗೆ ತರಬೇತಿ ನೀಡುತ್ತಿದ್ದಾರೆ.

    ಶಾಸ್ತ್ರೀಯ ಸಂಗೀತದ ದಿಗ್ಗಜೆ ಸಂಗೀತಾ ಶ್ರೀಕಿಶನ್

    ಶಾಸ್ತ್ರೀಯ ಸಂಗೀತದ ದಿಗ್ಗಜೆ ಸಂಗೀತಾ ಶ್ರೀಕಿಶನ್

    "ಜೋಗಿ ರಾಕ್" ಬ್ಯಾಂಡ್ ಕೇವಲ ಸಂಗೀತವನ್ನು ಕೇಳುವುದಕ್ಕಲ್ಲ, ಸಂಗೀತವನ್ನು ಆಸ್ವಾಧಿಸುವುದು ಕೂಡ ಇದರ ತತ್ವ ಹೀಗಾಗಿ ಈ ಲೈವ್ ಡ್ಯೂ ಮ್ಯೂಸಿಕ್ ಗೆ ಪ್ರಖ್ಯಾತ ಹಾಡುಗಾರ್ತಿ ಸಂಗೀತಾ ಶ್ರೀಕಿಶನ್ ಶಾಸ್ತ್ರೀಯ ಸಂಗೀತದ ಮಾಧುರ್ಯವನ್ನು ನೀಡಲಿದ್ದಾರೆ. ಮೂಲತ ಚಿಕ್ಕಮಗಳೂರಿನವರಾದ ಇವರು 23 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಸಂಗೀತ, ಭಕ್ತಿ ಸಂಗೀತ , ಪ್ಯೂಷನ್ ಸಂಗೀತ ಹೀಗೆ ವಿವಿಧ ಸಂಗೀತ ಪ್ರಕಾರಗಳಲ್ಲಿ ಇವರು ಎತ್ತಿದ ಕೈ.

    100ಕ್ಕೂ ಹೆಚ್ಚು ವೇದಿಕೆಯಲ್ಲಿ ಶೋ

    100ಕ್ಕೂ ಹೆಚ್ಚು ವೇದಿಕೆಯಲ್ಲಿ ಶೋ

    ಬಾಲಿವುಡ್ ನಲ್ಲಿ ಸಾಕಷ್ಟು ಕೆಲಸ ಮಾಡಿರುವ ರಿದಂ ಕಂಪೂಸರ್ ಆಗಿರುವ ವಿಶ್ವವಿಖ್ಯಾತ ಡ್ರಮರ್ ಗೋಪಿ ಅವರು ಸಂಗೀತಾ ಅವರ ಪತಿ. ದಂಪತಿಗಳಿಬ್ಬರೂ ಸೇರಿ ಒಂದು ಸಂಗೀತ ತಂಡವನ್ನು ಕಟ್ಟಿ ಭಾರತದ ಹಲವು ಕಡೆ ಮಾತ್ರವಲ್ಲದೆ ಸಿಂಗಾಪುರ , ಥೈಲ್ಯಾಂಡ್ , ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ತಮ್ಮ ತಂಡದೊಂದಿಗೆ ಕನ್ನಡ ,ಹಿಂದಿ, ತೆಲುಗು ,ತಮಿಳು, ತುಳು ಸೇರಿದಂತೆ ಅನೇಕ ಭಾಷೆಗಳಲ್ಲಿ 100ಕ್ಕೂ ಹೆಚ್ಚು ವೇದಿಕೆಯಲ್ಲಿ 1000ಕ್ಕೂ ಹೆಚ್ಚು ಲೈವ್ ಸಂಗೀತ ಕಾರ್ಯಕ್ರಮ ನೀಡಿ ಕೇಳುಗರ ಕಿವಿ ತಂಪಾಗಿಸಿದ್ದಾರೆ.

    ಅನೇಕ ಸಿಡಿಗಳನ್ನ ಹೊರತಂದಿದ್ದಾರೆ

    ಅನೇಕ ಸಿಡಿಗಳನ್ನ ಹೊರತಂದಿದ್ದಾರೆ

    ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿಗೀತೆ, ಲೈಟ್ ಮ್ಯೂಸಿಕ್, ಫ್ಯೂಷನ್, ಜನಪದ ಹೀಗೆ ಸಂಗೀತ ಕ್ಷೇತ್ರದ ಹಲವು ಪ್ರಕಾರಗಳನ್ನು ಪ್ರಸ್ತುತಪಡಿಸಿದ್ದಾರೆ. ಸಂಗೀತಾ ಅವರಿಗೆ ವಂಶಪಾರಂಪರ್ಯವಾಗಿ ಸಂಗೀತ ಒಲಿದು ಬಂದಿದೆ. ತಾಯಿಯೇ ಇವರ ಮೊದಲ ಗುರು. ಯುವಜನರನ್ನು ಗಮನದಲ್ಲಿಟ್ಟುಕೊಂಡು ಜನಪದ ರಾಕ್ ಎಂಬ ಹೊಸ ಪ್ರಯೋಗ ಇವರಿಗೆ ತುಂಬಾ ಹೆಸರು ತಂದುಕೊಟ್ಟಿದೆ. ಪಾಶ್ಚ್ಯಾತ್ಯ ವಾದ್ಯಗಾರಿಕೆಯಲ್ಲಿ ಜನಪದ ,ಸೂಫಿಪದ, ತತ್ವಪದ, ದಾಸರ ಪದಗಳ ಆಲ್ಬಮ್, ಭಕ್ತಿಗೀತೆ, ಜನಪದ ಗೀತೆಗಳ ಅನೇಕ ಸಿಡಿಗಳನ್ನು ಇವರು ಹೊರತಂದಿದ್ದಾರೆ.

    ಸಮಾಜ ಸೇವೆಯಲ್ಲೂ ಮುಂಚೂಣಿ

    ಸಮಾಜ ಸೇವೆಯಲ್ಲೂ ಮುಂಚೂಣಿ

    ಇದರ ಜೊತೆಗೆ ಸಂಗೀತಾ ಅವರು ತಮ್ಮ ಸ್ಮೈಲ್ ಫೌಂಡೇಷನ್ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ. ಸ್ನೇಹಿತರ ಜೊತೆ ಸೇರಿ ಈ ಪ್ರತಿಷ್ಠಾನವನ್ನು ನಡೆಸುತ್ತಿದ್ದು, ಬಡವರಿಗಾಗಿ ದಾನ, ಉಚಿತ ಶಿಕ್ಷಣ ಕೊಡಿಸುತ್ತಿದ್ದಾರೆ. ಹಲವಾರು ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಆಸಕ್ತ ವಿದ್ಯಾರ್ಥಿಗಳಿಗೆ ಸಂಗೀತ ಕಲಿಯಲು ಮಲ್ಲೇಶ್ವರಂ ನಲ್ಲಿ ವಲ್ಡ್ ಮ್ಯೂಸಿಕ್ ಕನ್ಸರ್ ವೇಟರಿ ಎಂಬ ಸಂಗೀತ ಶಾಲೆಯನ್ನು ತೆರೆದಿದ್ದು, ಈ ಮೂಲಕ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತವನ್ನು ಹೇಳಿಕೊಡುತ್ತಿದ್ದಾರೆ.

    ಜೋಗಿರಾಕ್ ಪ್ರಯೋಗಕ್ಕೆ ಸಜ್ಜಾಗಿದೆ

    ಜೋಗಿರಾಕ್ ಪ್ರಯೋಗಕ್ಕೆ ಸಜ್ಜಾಗಿದೆ

    ರಾಕ್ ಮ್ಯೂಸಿಕ್ ಮತ್ತು ಶಾಸ್ತ್ರೀಯ ಸಂಗೀತದ ಸಂಯೋಗದೊಂದಿಗೆ ಬರಲಿರುವ "ಜೋಗಿರಾಕ್" ಲೈವ್ ಡ್ಯೂ ಮ್ಯೂಸಿಕ್ ಪರ್ಫಾಮೆನ್ಸ್ ನಲ್ಲಿ ನಿಖಿಲ್ ಕುಮಾರ್ ಅವರ ಹೊಸ ಯುಗದ ಬೀಟ್ ಮ್ಯೂಸಿಕ್ ಹಾಗೂ ಪ್ರಖ್ಯಾತ ಹಾಡುಗಾರ್ತಿ ಸಂಗೀತಾ ಅವರ ಶಾಸ್ತ್ರೀಯ ಸಂಗೀತದ ನಾಜೂಕಿನ ಲಯ ಎರಡೂ ಇರಲಿದ್ದು, ಸಂಗೀತಾಸಕ್ತರ ಕಿವಿ ಇಂಪಾಗಿಸಲಿದೆ. ಈ ಮೂಲಕ "ಜೋಗಿರಾಕ್" ಲೈವ್ ಡ್ಯೂ ಮ್ಯೂಸಿಕ್ ಪರ್ಫಾಮೆನ್ಸ್ ಹೊಸ ಸಂಗೀತ ಪ್ರಯೋಗಕ್ಕೆ ಸಜ್ಜಾಗಿದೆ.

    English summary
    Nikhil Kumar is an internationally renowned RJ, Music Composer, Actor, Music producer and film maker. Sangeetha Srikishen is a versatile singer who has aced in different genre's such as Classical, Light, devotional, folk and fusion.
    Tuesday, March 5, 2019, 19:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X