»   » ಪ್ರೀತಿಯ ಹುಡುಗನೊಂದಿಗೆ ಆಂಟಿ ಪ್ರೀತ್ಸೆ

ಪ್ರೀತಿಯ ಹುಡುಗನೊಂದಿಗೆ ಆಂಟಿ ಪ್ರೀತ್ಸೆ

Posted By: Staff
Subscribe to Filmibeat Kannada

ಈ ಶುಕ್ರವಾರ (ಮೇ 25) ಮತ್ತೆರಡು ಕನ್ನಡ ಚಿತ್ರಗಳು ತೆರೆಗೆ ಬಂದಿವೆ. 'ಪ್ರೀತಿಯ ಹುಡುಗ ಮೋಸದ ಹುಡುಗಿ"ಯ ಜತೆ ಆಂಟಿಯೂ ಪ್ರೀತಿಸಲು ಬಂದಿದ್ದಾಳೆ.
ಪ್ರೀತಿಯ ಹುಡುಗ : ನಟನಾಗಲು ಬಂದು ಕಥೆಗಾರರಾದ ಅಜಯ್‌ಕುಮಾರ್‌ ಅಭಿನಯದ ಚಿತ್ರ 'ಪ್ರೀತಿಯ ಹುಡುಗ ಮೋಸದ ಹುಡುಗಿ". ಚಿತ್ರದಲ್ಲಿ ಅಜಯ್‌ ಪ್ರೀತಿಯ ಹುಡುಗನಾದರೆ, ಜನುಮದ ಜೋಡಿಯ ಶಿಲ್ಪ ಮದುವೆಯಾಗಿದ್ದಾಳೆ ಎಂದು ಹುಸಿ ಬಾಂಬ್‌ ಸಿಡಿಸಿ, ಮಾಧ್ಯಮಗಳಿಗೆ ಮೋಸ ಮಾಡಿದ್ದ ಆಮದು ತಾರೆ ಚಾರುಲತಾ ಮೋಸದ ಹುಡುಗಿ ಪಾತ್ರ ನಿರ್ವಹಿಸಿದ್ದಾರೆ.

ಕೋಮಲ್‌, ರಮೇಶ್‌ ಭಟ್‌, ಗಿರಿಜಾ ಲೋಕೇಶ್‌ ಉಳಿದ ತಾರಾಬಳಗದಲ್ಲಿದ್ದಾರೆ. ರಾಜೇಶ್‌ ಕುಮಾರ್‌ ನಿರ್ದೇಶನ, ಶ್ರೀರಂಗರ ಛಾಯಾಗ್ರಹಣ, ಮಾರುತಿ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಶಕುಂತಲಾ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಚಿತ್ರ ನಿರ್ಮಾಣ ಆಗಿದೆ.

ಆಂಟಿ ಪ್ರೀತ್ಸೆ : ನಾಲ್ವರು ನಿರುದ್ಯೋಗಿ ಯುವಕರು, ತಮ್ಮ ನಿರುದ್ಯೋಗದ ಬವಣೆ ನೀಗಿಕೊಳ್ಳಲು ಆಂಟಿಯನ್ನು ಪ್ರೀತಿಸುವ ದಾರಿ ಕಂಡುಕೊಳ್ಳುತ್ತಾರೆ. ರಾಮ್‌ಕುಮಾರ್‌, ಬಾಲರಾಜ್‌, ಆನಂದ್‌ ಹಾಗೂ ಟೆನ್ನಿಸ್‌ ಕೃಷ್ಣ ನಿರುದ್ಯೋಗಿ ಯುವಕರು. ಆಂಟಿಯಾಗಿ ಈಗ ಒಂದು ಮಗುವಿನ ತಾಯಿಯಾಗಿರುವ ರಣಧೀರನ ನಾಯಕಿ ಖುಷ್ಬೂ ಅಭಿನಯಿಸಿದ್ದಾರೆ.

ತೆಲುಗಿನಲ್ಲಿ ಭಾರಿ ಯಶಸ್ಸು ಕಂಡ ಆಂಟಿಯ ಕನ್ನಡ ರೂಪಾಂತರವೇ ಆಂಟಿ ಪ್ರೀತ್ಸೆ. ಎಸ್‌. ವಾಸು ಇದನ್ನು ಕನ್ನಡ ರೂಪಾಂತರ ಮಾಡಿದ್ದಾರೆ. ನಾಲ್ಕು ನಿರುದ್ಯೋಗಿ ನಾಯಕರು ಹಾಗೂ ಆಂಟಿಯ ಜತೆ ಅನಂತ್‌ನಾಗ್‌, ಜ್ಯೋತಿ, ಅನುಪ್ರಭಾಕರ್‌, ದೊಡ್ಡಣ್ಣ ನಟಿಸಿದ್ದಾರೆ.

ಚೈತನ್ಯರ ಸಂಗೀತ ಸಂಯೋಜನೆ, ಮಲ್ಲಿಕಾರ್ಜುನರ ಛಾಯಾಗ್ರಹಣ ಇರುವ ಈ ಚಿತ್ರವನ್ನು ವೃಷಭಾದ್ರೀ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಮುನಿರತ್ನ ನಿರ್ಮಿಸಿದ್ದಾರೆ.

English summary
Aunty preetse and mosada hudugi on the screen
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada