ಕಾಲಿವುಡ್ ಗೆ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡ ಶ್ರದ್ಧಾ ಶ್ರೀನಾಥ್
'ಯು-ಟರ್ನ್' ಚಿತ್ರದ ಪ್ರಮುಖ ಪಾತ್ರಧಾರಿ ಹೆಲ್ಮೆಟ್ ಹುಡುಗಿ ನಟಿ ಶ್ರದ್ಧಾ ಶ್ರೀನಾಥ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಘಳಿಗೆ ಬಹಳ ಚೆನ್ನಾಗಿತ್ತು ಎಂದೆನಿಸುತ್ತಿದೆ. ಯಾಕೆಂದರೆ ನಟಿ ಶ್ರದ್ಧಾ ಅವರಿಗೆ ಇದೀಗ ಬರೀ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಪರ ಭಾಷೆಗಳಿಂದಲೂ ಅವಕಾಶ ಹುಡುಕಿಕೊಂಡು ಬಂದಿದೆ.
ಪವನ್ ಕುಮಾರ್ ನಿರ್ದೇಶನದ ತಮ್ಮ ಚೊಚ್ಚಲ ಕನ್ನಡ ಚಿತ್ರ 'ಯು-ಟರ್ನ್' [ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ] ಮೂಲಕ ಎಲ್ಲರ ಗಮನ ಸೆಳೆದಿರುವ ರಂಗಭೂಮಿ ಕಲಾವಿದೆ ನಟಿ ಶ್ರದ್ಧಾ ಶ್ರೀನಾಥ್ ಅವರು ಈಗಾಗಲೇ ಕನ್ನಡದ 'ಉರ್ವಿ' ಮತ್ತು 'ಅಪರೇಷನ್ ಅಲಮೇಲಮ್ಮ' ಎಂಬ ಚಿತ್ರದಲ್ಲಿ ನಟಿಸಲು ಕಾಲ್ ಶೀಟ್ ಕೊಟ್ಟಿದ್ದಾರೆ.

ಇದು ಮಾತ್ರವಲ್ಲದೇ ಇದೀಗ ಹೊಸದಾಗಿ ಮಲಯಾಳಂನ ಖ್ಯಾತ ನಟ ನಿವಿನ್ ಪೌಲ್ ಅವರ ಜೊತೆ ಕನ್ನಡದ ರೀಮೆಕ್ ತಮಿಳು ಚಿತ್ರವೊಂದರಲ್ಲಿ ನಟಿಸಲು ಎಲ್ಲಾ ತಯಾರಿ ನಡೆಸಿದ್ದಾರೆ. ಈ ಮೂಲಕ ತಮಿಳು ಚಿತ್ರರಂಗಕ್ಕೆ ನಟಿ ಶ್ರದ್ಧಾ ಅವರು ಪದರ್ಪಾಣೆ ಮಾಡುತ್ತಿದ್ದಾರೆ.

ಹೌದು ರಕ್ಷಿತ್ ಶೆಟ್ಟಿ ನಟಿಸಿ-ನಿರ್ದೇಶನ ಮಾಡಿದ್ದ 'ಉಳಿದವರು ಕಂಡಂತೆ' ಸಿನಿಮಾ ತಮಿಳು ಭಾಷೆಗೆ ರೀಮೆಕ್ ಆಗುತ್ತಿದ್ದು, ಆ ಚಿತ್ರದಲ್ಲಿ ನಟಿ ಶ್ರದ್ಧಾ ಅವರು ಪತ್ರಕರ್ತೆಯ ಪಾತ್ರ ವಹಿಸಲಿದ್ದಾರೆ.[ಉಳಿದವರು ಕಂಡಂತೆ ರಿಮೇಕ್, ರಿಚಿ ರೋಲ್ ರಕ್ಷಿತ್ ಬೆಸ್ಟ್!]

'ಯು-ಟರ್ನ್' [ಪವನ್ ರ 'ಯು-ಟರ್ನ್' ಚಿತ್ರವನ್ನು ವಿಮರ್ಶಕರು ಮೆಚ್ಚಿಕೊಂಡ್ರಾ?] ಚಿತ್ರದಲ್ಲಿ ನಟಿ ಶ್ರದ್ಧಾ ಅವರು ಪತ್ರಕರ್ತೆಯ ಪಾತ್ರ ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲದೇ, ಇಡೀ ಚಿತ್ರದ ಕೇಂದ್ರ ಬಿಂದು ಅವರೇ ಆಗಿದ್ದರು. ಈ ಚಿತ್ರದಲ್ಲಿ ಅವರ ಪಾತ್ರವನ್ನು ನೋಡಿ ತಮಿಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಕನ್ನಡದಲ್ಲಿ ಶೀತಲ್ ಶೆಟ್ಟಿ ಮಾಡಿದ್ದ ಪತ್ರಕರ್ತೆಯ ಪಾತ್ರವನ್ನು ತಮಿಳಿನಲ್ಲಿ ಶ್ರದ್ಧಾ ಅವರು ಮಾಡಲಿದ್ದು, ರಕ್ಷಿತ್ ಶೆಟ್ಟಿ [ಫಿಲ್ಮಿಬೀಟ್ ಕಂಡಂತೆ ಫಿಲ್ಮ ಫೇರ್ ಬೆಸ್ಟ್ ಡೈರೆಕ್ಟರ್ ರಕ್ಷಿತ್ ಶೆಟ್ಟಿ] ಮಾಡಿದ್ದ ಪಾತ್ರವನ್ನು ನಿವಿನ್ ಮಾಡಲಿದ್ದಾರೆ. ಚಿತ್ರಕ್ಕೆ ತಮಿಳು ನಿರ್ದೇಶಕ ಗೌತಮ್ ರಾಮಚಂದ್ರನ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ.

ಇನ್ನು 'ಉಳಿದವರು ಕಂಡಂತೆ' ಸಿನಿಮಾ ತಮಿಳು ಭಾಷೆಗೆ ರೀಮೆಕ್ ಆಗುತ್ತೆ ಅಂತ ಈ ಮೊದಲೇ ಸುದ್ದಿಯಾಗಿತ್ತಾದರೂ ಪಕ್ಕಾ ಆಗಿರಲಿಲ್ಲ. ಇದೀಗ ಎಲ್ಲವೂ ಕನ್ಫರ್ಮ್ ಆಗಿದ್ದು, ನಟಿ ಶ್ರದ್ಧಾ ಶ್ರೀನಾಥ್ ಅವರು ಇದೀಗ ತಮಿಳು ಚಿತ್ರರಂಗದ ಕಡೆ 'ಯು-ಟರ್ನ್' ಹೊಡೆದಿದ್ದಾರೆ.


Click it and Unblock the Notifications











