ಉದಯ್ ಸಾವು ಆಘಾತಕಾರಿ: ಕಿಚ್ಚ ಸುದೀಪ್
ತೆಲುಗು ಚಿತ್ರರಂಗ ಅಕ್ಷರಶಃ ಆಘಾತಕ್ಕೆ ಒಳಗಾಗಿದೆ. ವರ್ಷಾರಂಭದಲ್ಲೇ ಉದಯೋನ್ಮುಖ ನಟ ಉದಯ್ ಕಿರಣ್ ಅಗಲಿಕೆಯ ನೋವಿನಲ್ಲಿ ಮುಳುಗಿದೆ. ಹೈದರಾಬಾದಿನ ಶ್ರೀನಗರ ಕಾಲೋನಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡು ಉದಯ್ ಸಾವನ್ನಪ್ಪಿದ್ದು ಏಕೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮಾತ್ರವಲ್ಲ ಚಿತ್ರರಂಗದ ಗಣ್ಯರನ್ನು ಕಾಡುತ್ತಿದೆ.
'ಕಳೆದ ವಾರವಷ್ಟೇ ಬೆಂಗಳೂರಿಗೆ ಬಂದಿದ್ದಾಗ ಉದಯ್ ಜತೆ ಮಾತನಾಡಿದ್ದೆ. ಇದು ನಿಜಕ್ಕೂ ಶಾಕಿಂಗ್ ನ್ಯೂಸ್ ಎಂದು ಕಿಚ್ಚ ಸುದೀಪ್ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಪುಂಜಗುಟ್ಟದಲ್ಲಿರುವ ಫ್ಲಾಟ್ 402ರಲ್ಲಿ ನೆಲೆಸಿದ್ದ ಉದಯ್ ಕಿರಣ್ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದ ಮೇಲೆ ಸ್ನೇಹಿತರು ಹಾಗೂ ಪತ್ನಿ ವಿಶಿತಾ ಕೂಡಲೇ ಧಾವಿಸಿ ಬಂದಿದ್ದಾರೆ. ಆದರೆ, ಉದಯ್ ಉಳಿಸಿಕೊಳ್ಳಲು ಆಗದೆ ಪರಿತಪಿಸಿದ್ದಾರೆ.[ಉದಯ ಕಿರಣ್ ಆತ್ಮಹತ್ಯೆ]
ಪ್ರಕರಣ ದಾಖಲಿಸಿಕೊಂಡಿರುವ ಜ್ಯುಬಿಲಿ ಹಿಲ್ಸ್ ಪೊಲೀಸರು ಉದಯ್ ಅವರ ಫೋನ್ ಸಂದೇಶ, ಕರೆ ವಿವರಗಳನ್ನು ಪಡೆದು ತನಿಖೆ ಮುಂದುವರೆಸಿದ್ದಾರೆ. ಉದಯ್ ಅವರ ನಿವಾಸ ಹಾಗೂ ಅಪೋಲೋ ಆಸ್ಪತ್ರೆ ಬಳಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರ ದಂಡು ನೆರೆದಿದೆ.
ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಸಂತಾಪ ಸಂದೇಶ ತಿಳಿಸಿದ್ದಾರೆ. ಕೆಲ ಅಭಿಮಾನಿಗಳು ಚಿರಂಜೀವಿ ಅವರತ್ತ ಬೊಟ್ಟು ಮಾಡಿ ಅಮಾಯಕ ನಟನನ್ನು ಕೊಂದು ಬಿಟ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಹರಿದು ಬಂದಿರುವ ಸಂದೇಶಗಳ ಸಂಗ್ರಹ ಮುಂದಿದೆ.
ಕಿಚ್ಚ ಸುದೀಪ್
ನಟ, ನಿರ್ದೇಶಕ ಕಿಚ್ಚ ಸುದೀಪ್ ಸಂದೇಶ
ಅಕುಲ್ ಬಾಲಾಜಿ
ನಟ, ನಿರೂಪಕ, ಹೈದರಾಬಾದಿನ ಅಳಿಯ ಅಕುಲ್ ಬಾಲಾಜಿ ಅವರಿಂದ ಶೋಕ ಸಂದೇಶ
ಜ್ವಾಲಾ ಗುಟ್ಟಾ
ಬಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರು ಸಾವಿನ ದುಃಖ ತೋಡಿಕೊಂಡಿದ್ದಾರೆ.
ಪ್ರಕಾಶ್ ರೈ
ಸಾವಿಗೆ ಕಾರಣ ಹುಡುಕುವ ಬದಲು ಬದುಕಿಗೆ ಕಾರಣ ಹುಡುಕಬೇಕು. ಉದಯ್ ಸಾವು ಅತೀವ ನೋವು ತಂದಿದೆ ಎಂದಿರುವ ಬಹುಭಾಷಾ ತಾರೆ ಪ್ರಕಾಶ್ ರೈ
ನಟಿ ಪ್ರಿಯಾಮಣಿ
ಉದಯ್ ಜತೆ ಸಿನಿಮಾ ಮಾಡಲು ಖುಷಿಯಾಗುತ್ತಿತ್ತು. ಒಳ್ಳೆ ಸ್ನೇಹಿತನಾಗಿದ್ದ. ಸಾಯಲು ಅವಸರವೇನಿತ್ತು.
ವರುಣ್ ಸಂದೇಶ್
ಉದಯ್ ತುಂಬಾ ಒಳ್ಳೆ ವ್ಯಕ್ತಿಯಾಗಿದ್ದ. ಆತನ ಸಾವು ನೋವು ತಂದಿದೆ. varun Sandesh
ವಿಮಲ ರಾಮನ್
ನನ್ನ ಮೊದಲ ಚಿತ್ರದಲ್ಲಿ ಆತನೊಂದಿಗೆ ನಟಿಸಿದ್ದು ನಾನು ಮರೆಯಲು ಸಾಧ್ಯವಿಲ್ಲ- ನಟಿ ವಿಮಲ ರಾಮನ್
ನಟ ನಿತಿನ್
ಈಗಷ್ಟೇ ಸುದ್ದಿ ತಿಳಿಯಿತು. ಉದಯ್ ಸಾವು ನೋವು ತಂದಿದೆ ಎಂದಿದ್ದಾರೆ ನಟ ನಿತಿನ್
ತುಷಾರ್ ಕಪೂರ್ ಸಂತಾಪ
ಬಾಲಿವುಡ್ ನಟ ತುಷಾರ್ ಕಪೂರ್ ಅವರು ದುಃಖ ವ್ಯಕ್ತಪಡಿಸಿ, ಉದಯ್ ಅವರ ಚಿತ್ರಗಳು ಹಿಂದಿಗೆ ರಿಮೇಕ್ ಆಗಿದ್ದಾಗ ನಾನೇ ಇಷ್ಟಪಟ್ಟು ನಟಿಸಿದ್ದೆ ಎಂದಿದ್ದಾರೆ.
ವೆನ್ನೆಲ ಕಿಶೋರ್ ದುಃಖ
ಹಾಸ್ಯ ನಟ ವೆನ್ನೆಲ ಕಿಶೋರ್ ಅವರ ಸಂದೇಶ
ಅಭಿಮಾನಿ ಸಂತಾಪ
ಕೆಲ ಕುಟುಂಬಗಳ ಕೈಯಲ್ಲಿದ್ದ ತೆಲುಗು ಚಿತ್ರರಂಗದಲ್ಲಿ ಹೊಸ ನಾಯಕನೊಬ್ಬನ 'ಉದಯ'ವಾಗಿತ್ತು. ಹೊಸ ಬಗೆಯ ಕೌಟುಂಬಕ ಚಿತ್ರಗಳ ಮೂಲಕ ಭರವಸೆಯ'ಕಿರಣ' ಮೂಡಿಸಿದ್ದ ನಾಯಕ ಇನ್ನಿಲ್ಲ
ಪೊಲೀಸರ ಹೇಳಿಕೆ
ಡಿಸಿಪಿ ಸತ್ಯನಾರಾಯಣ ಅವರು ಮಾತನಾಡಿ, ಉದಯ್ ಅವರ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದಿದ್ದಾರೆ.


Click it and Unblock the Notifications











