ಧ್ರುವ ಸರ್ಜಾ ಕಾಲ್ ಶೀಟ್ ಗಾಗಿ 4 ವರ್ಷದಿಂದ ಕಾಯ್ತಿದ್ದಾರೆ ಈ ನಿರ್ಮಾಪಕ.!
Recommended Video

'ಭರ್ಜರಿ' ಚಿತ್ರದ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಅವರ ಸ್ಟಾರ್ ಗಿರಿ ಹಾಗೂ ಬೇಡಿಕೆ ಮತ್ತಷ್ಟು ಹೆಚ್ಚಿದೆ. ಕನ್ನಡ ಈ ಯುವ ನಟನ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ.
ಸದ್ಯ, 'ಭರ್ಜರಿ' ಚಿತ್ರದ ನಂತರ ಧ್ರುವ, ನಂದಕಿಶೋರ್ ನಿರ್ದೇಶನ ಮಾಡುತ್ತಿರುವ 'ಪೊಗರು' ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರ ಜೊತೆಯಲ್ಲೇ ಸ್ಟಾರ್ ನಿರ್ಮಾಪಕನ ಸಿನಿಮಾಗೂ ಆಕ್ಷನ್ ಪ್ರಿನ್ಸ್ ಒಪ್ಪಿಗೆ ನೀಡಿದ್ದಾರಂತೆ.

ಹೌದು, ಧ್ರುವ ನಟಿಸಿಲಿರುವ 5ನೇ ಚಿತ್ರವನ್ನ 'ಬಚ್ಚನ್' ಖ್ಯಾತಿಯ ನಿರ್ಮಾಪಕ ಉದಯ್ ಮೆಹ್ತಾ ನಿರ್ಮಾಣ ಮಾಡಲಿದ್ದಾರಂತೆ.
ಅಂದ್ಹಾಗೆ, ಉದಯ್ ಮೆಹ್ತಾ ಅವರಿಗೆ ಧ್ರುವ ಅವರ ಜೊತೆ ಸಿನಿಮಾ ಮಾಡಬೇಕೆ ಎನ್ನುವುದು ಸುಮಾರು 4 ವರ್ಷಗಳಿಂದ ಆಸೆಯಂತೆ. 2013 ರಿಂದ ಧ್ರುವ ಸರ್ಜಾ ಡೇಟ್ಸ್ ಗಾಗಿ ಕಾಯುತ್ತಿದ್ದಾರಂತೆ. ಆದ್ರೆ, ಸತತ ಮೂರು ಸಿನಿಮಾಗೆ ಒಪ್ಪಿಕೊಂಡಿದ್ದ ಧ್ರುವ, ಈಗ ಕಾಲ್ ಶೀಟ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಚಿತ್ರದ ಕಥೆ, ನಿರ್ದೇಶನ, ಯಾವಾಗ ಶುರುವಾಗುತ್ತೆ ಎಂಬುದರ ಬಗ್ಗೆ ಸುಳಿವು ಕೊಡದ ನಿರ್ಮಾಪಕರು, ಪೊಗರು ಮುಗಿಸಿದ ನಂತರ ಈ ಪ್ರಾಜೆಕ್ಟ್ ಆರಂಭವಾಗಲಿದೆ ಎನ್ನುವುದನ್ನ ಮಾತ್ರ ಖಚಿತ ಪಡಿಸಿದ್ದಾರೆ.


Click it and Unblock the Notifications











