ಬಾಲಿವುಡ್ ಮಾರ್ಕೆಟ್ ನಲ್ಲಿ ಸದ್ದು ಮಾಡಿದ ಕನ್ನಡದ 'ಉಡುಂಬಾ'

By Bharath Kumar

'ಗೂಳಿಹಟ್ಟಿ' ಖ್ಯಾತಿಯ ಪವನ್ ಶೌರ್ಯ ಅಭಿನಯದ 'ಉಡುಂಬಾ' ಚಿತ್ರ ಟೀಸರ್ ಮತ್ತು ಮೇಕಿಂಗ್ ನಿಂದ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಈಗ ಬಾಲಿವುಡ್ ನಲ್ಲೂ ಉಡುಂಬಾ ಅಬ್ಬರಿಸಿದೆ. 'ಉಡುಂಬಾ' ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ.

ಹಿಂದಿಯ ಖ್ಯಾತ ನಿರ್ಮಾಣ ಸಂಸ್ಥೆ 45 ಲಕ್ಷಕ್ಕೆ ಉಡುಂಬಾ ಚಿತ್ರದ ಡಬ್ಬಿಂಗ್ ಹಕ್ಕು ಖರೀದಿಸಿದೆ. ಅಂದ್ಹಾಗೆ, ಉಡುಂಬಾ ಪಕ್ಕಾ ಆಕ್ಷನ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದ್ದು, ಚಿತ್ರದ ಮೇಕಿಂಗ್ ಹಾಗೂ ಟೀಸರ್ ನೋಡಿ ಬಾಲಿವುಡ್ ಮಂದಿ ಫಿದಾ ಆಗಿದ್ದಾರೆ.

ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಒಟ್ಟು ಐದು ಹಾಡುಗಳಿದ್ದು, 'ಮುದ್ದು ಮನಸೇ' ಖ್ಯಾತಿಯ ವಿನೀತ್ ರಾಜ್ ಮ್ಯುಸಿಕ್ ಕಂಪೋಸ್ ಮಾಡಿದ್ದಾರೆ. ಚೇತನ್ ಕುಮಾರ್, 'ಅಲೆಮಾರಿ' ಖ್ಯಾತಿಯ 'ಸಂತು' ಹಾಗೂ ಲೋಕೇಶ್ ಕೃಷ್ಣ ಸಾಹಿತ್ಯ ಬರೆದಿದ್ದಾರೆ.

 Udumba dubbing rights sold out

ಈ ಐದು ಹಾಡಿನಲ್ಲಿ ಎರಡು ರೊಮ್ಯಾಂಟಿಕ್ ಹಾಡುಗಳಿದ್ದು, ಎರಡು ಭರ್ಜರಿ ಮಾಸ್ ಸಾಂಗ್ ಇದೆ. ಇನ್ನೊಂದು ಐಟಂ ಸಾಂಗ್ ಇದೆ. ಈ ಐಟಂ ಹಾಡಿನಲ್ಲಿ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಹೆಜ್ಜೆ ಹಾಕಿದ್ದಾರೆ. ಒಂದಕ್ಕಿಂತ ಒಂದು ಹಾಡುಗಳು ವಿಭಿನ್ನ ಮತ್ತು ಹೊಸತನದಿಂದ ಕೂಡಿದ್ದು, 'ಉಡುಂಬಾ' ಚಿತ್ರದ ಹಾಡುಗಳನ್ನ ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ.

ಇನ್ನುಳಿದಂತೆ 'ಉಡುಂಬಾ' ಪಕ್ಕಾ ಮಾಸ್ ಮನರಂಜನೆಯ ಸಿನಿಮವಾಗಿದ್ದು, ನಾಯಕ ಪವನ್ ಶೌರ್ಯ ಘರ್ಜಿಸಿದ್ದಾರೆ. ಇನ್ನು 'ಹುಲಿರಾಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಿರಶ್ರೀ, ಇದಕ್ಕೂ ಮೊದಲು 'ಪವಿತ್ರ', 'ರೊಟ್ಟಿ ರಂಭಾ' ಎಂಬ ತುಳು ಸಿನಿಮಾ ಮಾಡಿದ್ದರು. ಇದೀಗ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ಅಭಿನಯಿಸುತ್ತಿದ್ದಾರೆ.

 Udumba dubbing rights sold out

ಇನ್ನುಳಿದಂತೆ ಶರತ್ ಲೋಹಿತಾಶ್ವ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಶಿವರಾಜ್ ಗೆ ಇದು ಚೊಚ್ಚಲ ಸಿನಿಮಾ. ಮೊದಲ ಚಿತ್ರದಲ್ಲೇ ಅದ್ಭುತ ಮೇಕಿಂಗ್ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕರಿಗೆ ತೆಲುಗಿನ ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಸಾಥ್ ನೀಡಿದ್ದಾರೆ. ನಿರ್ಮಾಪಕರಿಗೂ ಇದು ಮೊದಲ ಪ್ರಾಜೆಕ್ಟ್. ಎಸ್ ಹಲೇಶ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

More from Filmibeat

English summary
Kannada actor pavan shourya and chirashree anchan starrer Udumba is ready to release. Udumba dubbing rights sold out for 45 lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X