ಉಡುಂಬಾನ 'ಏಪ್ರಿಲ್ ಫೂಲ್' ಹಾಡಿಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಫಿದಾ
ಟ್ರೈಲರ್ ಮತ್ತು ಶೀರ್ಷಿಕೆ ಮೂಲಕ ಸದ್ದು ಮಾಡಿದ್ದ 'ಉಡುಂಬಾ' ಸಿನಿಮಾ ಈಗ ಹಾಡುಗಳು ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕಳೆದ ತಿಂಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಅಬ್ಬರಿಸಿದ್ದ 'ಉಡುಂಬಾ' ಚಿತ್ರದ ಹಾಡುಗಳು ಯೂಟ್ಯೂಬ್ ನಲ್ಲಿ ಕನ್ನಡ ಪ್ರೇಕ್ಷಕರನ್ನ ಆಕರ್ಷಿಸುತ್ತಿದೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ 'ನಗುವ ನಿನ್ನ....' ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ''ನಗುವ ನಿನ್ನ, ಮೊಗವ ನೋಡಿ ಮನಸು ಹಾದಿ ತಪ್ಪಿದೆ....ಮೊದಲ ಮಿಂಚು, ಮೊದಲ ಮಳೆಯೂ ಎದೆಯ ಭುವಿಗೆ ಜಿಗಿದಿದೆ.....ಪ್ರೀತಿ ಎಂದರೆ ಹಗಲು ಇರಳು...ಅವಳ ನೆನೆಯುವ ಕಾಯಿಲೆ....'' ಎಂದು ತುಂಬಾ ಮಧುರವಾಗಿ ಮೂಡಿಬಂದಿದೆ.

ನಿರ್ದೇಶಕ ಚೇತನ್ ಕುಮಾರ್ ಬ್ಯೂಟಿಫುಲ್ ಗೀತೆಯನ್ನ ಬರೆದಿದ್ದಾರೆ. ವಿನೀತ್ ರಾಜ್ ಸಂಗೀತ ನೀಡಿರುವ ಈ ಹಾಡನ್ನ ದೀಪು ಮತ್ತು ಮಾನಸ ಹೊಳ್ಳ ಅವರ ಸುಮಧುರ ಕಂಠದಲ್ಲಿ ಮೂಡಿದೆ.
'ಏಪ್ರಿಲ್ ಫೂಲ್' ಎಂಬ ಹಾಡು ಈ ಚಿತ್ರದ ಮತ್ತೊಂದು ಹೈಲೈಟ್. ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಸಖತ್ ಎಂಟರ್ ಟೈನಿಂಗ್ ಆಗಿದೆ. ಈ ಹಾಡನ್ನ ಕೂಡ ಚೇತನ್ ಕುಮಾರ್ ಅವರೇ ರಚಿಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ, ನಿರ್ದೇಶಕ ನಂದಕಿಶೋರ್, ಹಾಸ್ಯನಟ ಚಿಕ್ಕಣ್ಣ, ದಿಲ್ವಾಲಾ ಸುಮಂತ್, ಅನಿಶ್ ತೇಜೇಶ್ವರ್ ಸೇರಿದಂತೆ ಇನ್ನು ಹಲವು ತಾರೆಯರು ಈ ಹಾಡನ್ನ ಕೇಳಿ ಖುಷಿ ವ್ಯಕ್ತಪಡಿಸಿದ್ದಾರೆ. ಸುಮಾರು 11 ಲಕ್ಷಕ್ಕೂ ಅಧಿಕ ವೀಕ್ಷಕರು ನೋಡಿ ಮೆಚ್ಚಿಕೊಂಡಿದ್ದಾರೆ. ಅಂದ್ಹಾಗೆ, 'ಏಪ್ರಿಲ್ ಫೂಲ್' ಹಾಡಿನ ವಿಡಿಯೋ ವರ್ಷನ್ ಇದೇ ತಿಂಗಳು 18ನೇ ತಾರೀಖು ಬಿಡುಗಡೆಯಾಗಲಿದೆ.
ಒಟ್ಟಾರೆ ಚಿತ್ರದಲ್ಲಿ ಐದು ಹಾಡುಗಳಿದ್ದು, 'ಮುದ್ದು ಮನಸೇ' ಖ್ಯಾತಿಯ ವಿನೀತ್ ರಾಜ್ ಮ್ಯುಸಿಕ್ ಕಂಪೋಸ್ ಮಾಡಿದ್ದಾರೆ. ಚೇತನ್ ಕುಮಾರ್, 'ಅಲೆಮಾರಿ' ಖ್ಯಾತಿಯ 'ಸಂತು' ಹಾಗೂ ಲೋಕೇಶ್ ಕೃಷ್ಣ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಐಟಂ ಹಾಡಿನಲ್ಲಿ 'ಬಿಗ್ ಬಾಸ್' ಖ್ಯಾತಿಯ ಸಂಜನಾ ಹೆಜ್ಜೆ ಹಾಕಿರುವುದು ವಿಶೇಷ.

ಗೂಳಿಹಟ್ಟಿ ಖ್ಯಾತಿಯ ಪವನ್ ಶೌರ್ಯ ಚಿತ್ರದ ನಾಯಕನಾಗಿದ್ದು, 'ಹುಲಿರಾಯ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಿರಶ್ರೀ ನಾಯಕಿ. ಇನ್ನುಳಿದಂತೆ ಶರತ್ ಲೋಹಿತಾಶ್ವ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಶಿವರಾಜ್ ಗೆ ಇದು ಚೊಚ್ಚಲ ಸಿನಿಮಾ. ನಿರ್ಮಾಪಕರಿಗೂ ಇದು ಮೊದಲ ಪ್ರಾಜೆಕ್ಟ್. ಎಸ್ ಹಲೇಶ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.


Click it and Unblock the Notifications











