ಯಶ್ 'ಕೆಜಿಎಫ್' ಎದುರು ತೊಡೆ ತಟ್ಟಿ ನಿಂತ 'ಉಡುಂಬಾ'
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಸದ್ಯ ಕೆಜಿಎಫ್ ಸಿನಿಮಾದ ಹವಾ ನೋಡಿದ ಸ್ಯಾಂಡಲ್ ವುಡ್ ಮಂದಿ, ಕೆಜಿಎಫ್ ಚಿತ್ರದ ಅಕ್ಕಪಕ್ಕದ ವಾರ ಸಿನಿಮಾ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿದೆ.
ಹೀಗಿರುವಾಗ, 'ಗೂಳಿಹಟ್ಟಿ' ಪವನ್ ಶೌರ್ಯ ಅಭಿನಯದ 'ಉಡುಂಬಾ' ಸಿನಿಮಾ ಕೆಜಿಎಫ್ ಎದುರು ತೊಡೆ ತಟ್ಟಿ ನಿಂತಿದೆ. ಟೀಸರ್ ಹಾಗೂ ಹಾಡುಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಮಾಸ್ ಎಂಟರ್ ಟೈನರ್ ಡಿಸೆಂಬರ್ ತಿಂಗಳಲ್ಲೇ ಚಿತ್ರಮಂದಿರಕ್ಕೆ ಬರಲಿದೆ.

ಕೆಜಿಎಫ್ 21ನೇ ತಾರೀಖು ಬಂದ್ರೆ, ಒಂದು ವಾರದ ನಂತರ ಡಿಸೆಂಬರ್ 28 ರಂದು 'ಉಡುಂಬಾ' ಥಿಯೇಟರ್ ಗೆ ಲಗ್ಗೆಯಿಡಲಿದೆ. ಈಗಾಗಲೇ ಹಿಂದಿ ಡಬ್ಬಿಂಗ್ ಹಕ್ಕು ದುಬಾರಿ ಬೆಲೆಗೆ ಸೇಲ್ ಆಗಿದೆ.
ಕೆಜಿಎಫ್ ಚಿತ್ರದ ಅಬ್ಬರ ಮಧ್ಯೆ ಚಿತ್ರಮಂದಿರಗಳ ಕೊರತೆ ಉಂಟಾಗಬಹುದು ಎಂಬ ಮಾತನ್ನ ಉಲ್ಟಾ ಮಾಡಿ, ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳನ್ನ ಉಡುಂಬಾ ಚಿತ್ರವನ್ನ ಬಿಡುಗಡೆ ಮಾಡಲಾಗುತ್ತಿದೆ.

ಅಂದ್ಹಾಗೆ, ಈ ಚಿತ್ರವನ್ನ ಶಿವರಾಜ್ ನಿರ್ದೇಶನ ಮಾಡಿದ್ದು, ಶ್ರೀ ಚಂದ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ನಾಯಕ ಪವನ್ ಶೌರ್ಯಗೆ ನಾಯಕಿಯಾಗಿ ಚಿರಾಶ್ರೀ ಕಾಣಿಸಿಕೊಂಡಿದ್ದಾರೆ.
ಚಿತ್ರದ ವಿಶೇಷ ಹಾಡಿನಲ್ಲಿ ಬಿಗ್ ಬಾಸ್ ಖ್ಯಾತಿಯ ಸಂಜನಾ ಹೆಜ್ಜೆ ಹಾಕಿದ್ದು, ಈಗಾಗಲೇ ಹಾಡು ಸಖತ್ ಸದ್ದು ಮಾಡಿದೆ. ಇನ್ನುಳಿದಂತೆ ಶರತ್ ಲೋಹಿತಾಶ್ವ ವಿಲನ್ ಆಗಿ ಮಿಂಚಿದ್ದಾರೆ. ವಿನೀತ್ ರಾಜ್ ಸಂಗೀತ, ಹಾಲೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











